- ಗಿರೀಶ್ ಮಟ್ಟಣ್ಣನವರ್, ಜಯಂತ್ ಒತ್ತಾಯಕ್ಕೆ ಸುಳ್ಳು ಹೇಳ್ದೆ
ಮಂಗಳೂರು: ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಧರ್ಮಸ್ಥಳದಲ್ಲಿ ಅನಾಮಿಕನ ದೂರು ಹಾಗೂ ಸುಜಾತ ಭಟ್ ದೂರು ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಏಕಾಏಕಿ ಸುಜಾತ ಭಟ್ ಉಲ್ಟಾ ಹೊಡೆದಿದ್ದಾಳೆ. ‘ನಾನು ಸುಳ್ಳು ಹೇಳಿದ್ದೇನೆ’, ನನಗೆ ಹೀಗೆ ಸುಳ್ಳು ಹೇಳು ಎಂದು ಕೆಲವರು ಹೇಳಿ ಕೊಟ್ಟರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾಳೆ.
ಸಂದರ್ಶನದಲ್ಲಿ ಅನನ್ಯಾ ಭಟ್ ಅಂತ ನನಗೆ ಮಗಳೇ ಇರಲಿಲ್ಲ. ಇಷ್ಟು ದಿನ ನಾನು ಸುಳ್ಳು ಹೇಳಿದ್ದೇನೆ. ಕೆಲವರು ನನಗೆ ಹೀಗೆ ಸುಳ್ಳು ಹೇಳು ಅಂತ ಹೇಳಿದ್ದರು ಅದಕ್ಕೆ ನಾನು ಹೇಳಿದ್ದೇನೆ. ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಇನ್ನಿತರರು ಹೇಳಿದ್ದರು. ಆಸ್ತಿ ಸಮಸ್ಯೆಯಿಂದ ಹೀಗೆ ಹೇಳು ಅಂತ ಅವರೆಲ್ಲಾ ಹೇಳಿದ್ದರು. ಅದಕ್ಕೆ ನಾನು ಹೇಳಿಬಿಟ್ಟೆ ಎಂದು ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: Dharmasthala Case | ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ SIT ನೋಟಿಸ್
ನಾನು ದುಡ್ಡಿಗೊಸ್ಕರ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಅಂತ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದ್ರೆ, ನನ್ನ ಸಹಿ ಇಲ್ಲದೇ ಆಸ್ತಿಯನ್ನು ಹೇಗೆ ಕೊಟ್ರಿ ಅಂತ ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದಾಳೆ.
ನಾನು ಜನರ ಭಾವನೆಗಳ ಜೊತೆಗೆ ಆಟ ಆಡಿಲ್ಲ. ಅವರೆಲ್ಲಾ ಸೇರಿಕೊಂಡು ಪ್ರಚೋದಿಸುವಂತೆ ಮಾಡಿದ್ದರು. ಅನನ್ಯಾ ಭಟ್ ಅನ್ನೋದೇ ಸುಳ್ಳು. ಧರ್ಮಸ್ಥಳ ದೇವರಿಗೆ ನಾನು ಧಕ್ಕೆ ತಂದಿಲ್ಲ. ನಾನು ಕೇಳುತ್ತಿರುವುದು ನನ್ನ ಆಸ್ತಿ ಅಷ್ಟೇ. ಆಸ್ತಿಗೋಸ್ಕರ ಅನನ್ಯಾ ಭಟ್ ಕಥೆ ಕಟ್ಟಿದ್ದೇನೆ ಎಂದು ಹೇಳಿದ್ದಾಳೆ. ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಯನ್ನು ಒದ್ದು ಒಳಗೆ ಹಾಕಿದ್ದೀವಿ: ಡಿಕೆಶಿ