ಅಂಕೋಲಾ ಬಸ್ ನಿಲ್ದಾಣದಲ್ಲಿ ಕಸ ಸ್ವಚ್ಛ ಮಾಡಿದ ಹಾಲಕ್ಕಿ ಮಹಿಳೆಯನ್ನು ಹೊಗಳಿದ ಆನಂದ್ ಮಹೇಂದ್ರ

Public TV
2 Min Read

ಕಾರವಾರ: ಅಂಕೋಲಾ (Ankola) ಬಸ್ ನಿಲ್ದಾಣದಲ್ಲಿ (Bus Stand) ಕಸ ಸ್ವಚ್ಛ ಮಾಡಿದ ಹಾಲಕ್ಕಿ ಮಹಿಳೆಯನ್ನು (Woman) ಮಹೇಂದ್ರ ಕಂಪನಿ ಮಾಲೀಕ ಆನಂದ್ ಮಹೇಂದ್ರ (Anand Mahindra) ಹೊಗಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ (Uttara Kannada) ಅಂಕೋಲಾದ ಬಸ್ ನಿಲ್ದಾಣದಲ್ಲಿ ಹಾಲಕ್ಕಿ ಮಹಿಳೆಯರು ಕವಳೆ ಹಣ್ಣು, ನೇರಳೆ ಹಣ್ಣು ಮುಂತಾದ ಕಾಡು ಹಣ್ಣುಗಳನ್ನು ಜೀವನ ನಿರ್ವಹಣೆಗಾಗಿ ಮಾರುವುದನ್ನು ಕಾಣುತ್ತೇವೆ. ಈ ಹಣ್ಣುಗಳನ್ನು ಎಲೆಗಳಲ್ಲಿ ಸುರುಳಿ ಮಾಡಿ ಅದರಲ್ಲಿ ತುಂಬಿ ಕೊಡುತ್ತಾರೆ. ಬಸ್‌ನಲ್ಲಿ ಕುಳಿತ ಪ್ರಯಾಣಿಕರು ಹಣ್ಣುಗಳನ್ನು ತಿಂದು ಎಲೆಗಳನ್ನು ಕಿಟಕಿಯಿಂದ ಎಸೆಯುವುದು ಮಾಮೂಲಿ. ಆದರೆ ಇಲ್ಲೊಬ್ಬ ಪರಿಸರ ಪ್ರೇಮಿ ಹಾಲಕ್ಕಿ ಮಹಿಳೆಯೊಬ್ಬಳು ಪ್ರಯಾಣಿಕರು ಎಸೆದ ಎಲೆಗಳನ್ನು ತಂದು ಕಸದ ಬುಟ್ಟಿಗೆ ಹಾಕುವ ಮೂಲಕ ತನಗೆ ದಿನದ ತುತ್ತು ನೀಡುವ ಅಂಕೋಲಾ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿದ್ದಾಳೆ.

ಹಾಲಕ್ಕಿ ಮಹಿಳೆಯ ಈ ಸ್ವಚ್ಛ ಪರಿಸರದ ಪ್ರೇಮವು ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ. ಮಹಿಳೆಯು ಸ್ವಚ್ಛಗೊಳಿಸುತ್ತಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಹ ಹರಿದಾಡಿದ್ದು, ಮಹೇಂದ್ರ ಕಂಪನಿಯ ಮಾಲೀಕ ಆನಂದ್ ಮಹೇಂದ್ರ ಅವರು ಈ ವೀಡಿಯೋವನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಯಾವುದೇ ಕಾರಣಕ್ಕೂ ಗೆಲ್ಲಲ್ಲ: HDK

ಸದ್ದಿಲ್ಲದೇ ಸ್ಪಚ್ಛ ಭಾರತದ ಪ್ರಯತ್ನವನ್ನು ಸಹಕಾರಗೊಳಿಸುವ ಹೀರೋಗಳು ಇವರು. ಇವರ ಕಾರ್ಯಗಳನ್ನು ಗಮನಿಸದಿರುವುದು, ಶ್ಲಾಘಿಸದೇ ಇರುವುದು ವಿಪರ್ಯಾಸ ಎಂದು ಟ್ವೀಟ್‌ ಮಾಡಿದ್ದಾರೆ. ಈ ವೀಡಿಯೋ ಹಂಚಿಕೊಂಡಿದ್ದ ಆದರ್ಶ ಹೆಗಡೆ ಎಂಬುವವರ ಬಳಿ ಇವರ ಸಂಪರ್ಕ ಸಿಗಬಹುದೇ ಎಂದು ಆನಂದ್ ಮಹೇಂದ್ರ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಒಳ ಮೀಸಲಾತಿ ವಿರುದ್ಧ ಹೋರಾಟ: ಸಿ.ಎಸ್‌.ದ್ವಾರಕನಾಥ್‌

Share This Article