‘ಬೇಬಿ’ಗೆ ಮತ್ತೆ ಜೋಡಿಯಾದ ಆನಂದ್ ದೇವರಕೊಂಡ

Public TV
1 Min Read

ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ ಸಿನಿಮಾ ಅಂದರೆ ‘ಬೇಬಿ’. ವೈಷ್ಣವಿ ಚೈತನ್ಯ- ಆನಂದ್ ದೇವರಕೊಂಡ (Anand Devarakonda) ಜೋಡಿ ಈ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಈಗ ಮತ್ತೆ ಇದೇ ಜೋಡಿ ಒಟ್ಟಾಗಿ ನಟಿಸುತ್ತಿದ್ದಾರೆ.

ಸಾಯಿ ರಾಜೇಶ್ ನೀಲಂ ನಿರ್ದೇಶನದ ‘ಬೇಬಿ’ (Baby) ಸಿನಿಮಾದಲ್ಲಿ ಆನಂದ್, ವಿರಾಜ್, ವೈಷ್ಣವಿ ಈ ಮೂವರು ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ ನಟಿಸಿದ್ದರು. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೀಗ ಖ್ಯಾತ ನಿರ್ಮಾಣ ಸಂಸ್ಥೆಯೊಂದು ವೈಷ್ಣವಿ-ಆನಂದ್ ಜೋಡಿಯನ್ನಿಟ್ಟುಕೊಂಡು ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಯುದ್ಧಕ್ಕೆ ನಿಂತ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದರೂ ಗೆಲ್ಲಿ- ಕಿಚ್ಚನ ಕ್ಲಾಸ್

‘ಬೇಬಿ’ ಚಿತ್ರದ ನಿರ್ದೇಶರಾದ ಸಾಯಿ ರಾಜೇಶ್ ಅವರು ಈ ಸಿನಿಮಾಗಾಗಿ ಚಿತ್ರಕಥೆ ಹೆಣೆದಿದ್ದಾರೆ. ರವಿ ನಂಬುರಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಶುರುವಾಗಿದ್ದು, ಮುಂದಿನ ವರ್ಷ ಚಿತ್ರ ರಿಲೀಸ್ ಆಗಲಿದೆ.

ಬೇಬಿ ಸಿನಿಮಾದಲ್ಲಿ ವೈಷ್ಣವಿ(Vaishnavi Chaitanya) -ಆನಂದ್ ಮೋಡಿ ಮಾಡಿದ ಹಾಗೆಯೇ ಹೊಸ ಚಿತ್ರದಲ್ಲೂ ಗೆದ್ದು ಬೀಗುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್