ಪೊಲೀಸರಿಂದ ನನಗೆ ಅನ್ಯಾಯವಾಗಿದೆ- ಸಿಎಂ ಮನೆ ಮುಂದೆ ವೃದ್ಧನ ಆತ್ಮಹತ್ಯೆಯ ಡ್ರಾಮಾ

By
2 Min Read

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ವೃದ್ಧರೊಬ್ಬರು ಯಾವುದೋ ದ್ರಾವಣ ಸೇವಿಸಲು ಯತ್ನಿಸಿದ ಘಟನೆ ಇಂದು ನಡೆದಿದೆ.

ಪೊಲೀಸರಿಂದ ನನಗೆ ಅನ್ಯಾಯ ಆಗಿದೆ ಎಂದು ಸುಂಕದಕಟ್ಟೆಯ ವೃದ್ಧ ಚಂದ್ರಶೇಖರ್ ಸಿಎಂ ಮುಂದೆ ಅಲಳು ತೋಡಿಕೊಂಡಿದ್ದಾನೆ. ಪೊಲೀಸರು ಕೆಲವರ ಜೊತೆ ಸೇರಿ ಸೈಟ್ ಮಾರಾಟದಲ್ಲಿ ಮೋಸ ಮಾಡಿದ್ದಾರೆ ಎಂದು ಅನ್ನೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿರುದ್ಧ ವೃದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ನನಗೆ ನ್ಯಾಯ ಕೊಡಿಸಿ ಎಂದು ಸಿಎಂ ಎದುರು ವೃದ್ಧ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಎಲ್ಲ ತಿಳಿದವರೇ ಸೇರಿ ಪಠ್ಯಕ್ರಮ ರಚನೆ ಮಾಡಿದ್ದು, ಹೊಸದಾಗಿ ಸೇರಿಸೋ ಅವಶ್ಯಕತೆ ಇಲ್ಲ: ಡಿಕೆಶಿ

ಅಲ್ಲದೆ ಬಾಟ್ಲಿ ತೆಗೆದು ಸಿಎಂಗೆ ತೋರಿಸಿ ವೃದ್ಧ ಕುಡಿಯಲು ಯತ್ನಿಸಿದರು. ಈ ವೇಳೆ ಪೊಲೀಸರು ವೃದ್ಧನನ್ನು ತಡೆದಿದ್ದಾರೆ. ನಂತರ ವೃದ್ಧನನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ವಿಚಾರಣೆ ನಡೆಸಿ ಮಾಹಿತಿ ಪಡೆದರು. ಆಗ ವೃದ್ಧ ನನಗೆ ಸೈಟ್ ಮಾರಾಟದಲ್ಲಿ ಲಕ್ಷಾಂತರ ರೂ. ಮೋಸ ಆಗಿದೆ. ಪೊಲೀಸರೂ ಶಾಮೀಲಾಗಿ ಮೋಸ ಮಾಡಿದ್ದಾರೆಂದು ಆರೋಪಿಸಿದರು.

ಏನಿದು ಘಟನೆ..? 
ಚಂದ್ರಶೇಖರ್ ಮಗ ರಾಮು ಅವರು ಲತಾ ಎಂಬ ಮಹಿಳೆ ಬಳಿ 32 ಲಕ್ಷಕ್ಕೆ ಸೈಟ್ ಖರೀದಿ ಮಾಡಿರುತ್ತಾರೆ. ಈ ಸೈಟ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದಿನ ಪಾಳ್ಯದಲ್ಲಿದೆ. ಸೈಟ್ ಕೋರ್ಟಿನಲ್ಲಿರುವ ವಿಚಾರ ತಿಳಿದು ಸೈಟ್ ಬೇಡ ಹಣ ಕೊಡುವಂತೆ ಸೈಟ್ ಮಾಲೀಕರಾದ ಲತಾಗೆ ದುಂಬಾಲು ಬೀಳ್ತಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿಕೊಂಡಿರುತ್ತಾರೆ. ಇದನ್ನೂ ಓದಿ: ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿ..!

ಇತ್ತ ಪೊಲೀಸರಿಂದ ನ್ಯಾಯ ಸಿಗಲ್ಲ ಅಂತ ಚಂದ್ರಶೇಖರ್ ಪೊಲೀಸ್ ಕಮೀಷನರ್‍ಗೆ ದೂರು ನೀಡಿದರು. ಕಮೀಷನರ್ ಸಿಸಿಬಿ ಪೊಲೀಸರಿಗೆ ತನಿಖೆ ಮಾಡುವಂತೆ ಸೂಚನೆ ನೀಡಿರುತ್ತಾರೆ. ಸಿಸಿಬಿ ಪೊಲೀಸರು ಸೈಟ್ ಮಾಲೀಕರಾದ ಲತಾ ಮತ್ತು ರಾಮು ಕರೆದು ಮಾತನಾಡಿ 30 ಲಕ್ಷ ಹಣ ಮರುಪಾವತಿ ಮಾಡಿರುತ್ತಾರೆ.

ಚಂದ್ರಶೇಖರ್ ಆರೋಪ ಅಂದ್ರೆ, 2017ರಲ್ಲಿ ಸೈಟ್ ನಮಗೆ ಬೇಡ ಅಂತ ಹೇಳಿದಾಗ ನೀವು ಕೊಟ್ಟಿರುವ 30 ಲಕ್ಷಕ್ಕೆ 30 ಲಕ್ಷ ಹಾಕಿ ಕೊಡುವುದಾಗಿ ಅಗ್ರಿಮೆಂಟ್ ಮಾಡಲಾಗಿತ್ತು. ಆ ಅಗ್ರಿಮೆಂಟ್ ನಲ್ಲಿ ಮಾಡಿಕೊಂಡಿರೋ ಪ್ರಕಾರ ಬ್ಯಾಲೆನ್ಸ್ 30 ಲಕ್ಷ ಹಣ ಕೊಡಬೇಕು. ಇನ್ಸ್ ಪೆಕ್ಟರ್ ಜೊತೆ ಶಾಮೀಲಾದ್ದಾರೆಂದು ಆರೋಪವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *