ದಸರಾ ಆನೆ ಕ್ಯಾಪ್ಟನ್ ಅರ್ಜುನನ ವೀರಮರಣದ ಕೊನೇ ಕ್ಷಣದ ರೋಚಕ ವೀಡಿಯೋ ವೈರಲ್

Public TV
1 Min Read

ಹಾಸನ: ಮೈಸೂರು (Mysuru) ದಸರಾ ಆನೆ ಕ್ಯಾಪ್ಟನ್ ಅರ್ಜುನ (Arjuna) ವೀರಮರಣ ಹೊಂದುವ ಮೊದಲು ಕಾಡಾನೆ (Wild Elephant) ಜೊತೆ ಕಾದಾಡಿದ ರೋಚಕ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.

ಕಾಡಾನೆ ಕಾರ್ಯಾಚರಣೆ ಕಾರ್ಯಪಡೆ ತಂಡದಿಂದ ಚಿತ್ರೀಕರಣ ಮಾಡಿದ್ದ ವೀಡಿಯೋ (Video) ವೈರಲ್ ಆಗುತ್ತಿದ್ದು, ಇಟಿಎಫ್ ಹೆಸರಿನಲ್ಲಿ ಎಡಿಟ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಕ್ತ ಸುರಿಯುತ್ತಿದ್ದರೂ ಹಂತಕ ಸಲಗದ ಜೊತೆ ಅರ್ಜುನ ಕಾದಾಡಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಇನ್ನು ಅರ್ಜುನ ಕಾದಾಡುವ ವೇಳೆ ಅರ್ಜುನನ ಮೇಲೆ ಕುಳಿತು ಅಭಿಮನ್ಯು ಮಾವುತನ ಸಹಾಯಕ ಅನಿಲ್ ಮತ್ತು ಮತ್ತೋರ್ವ ಕಮಾಂಡ್ ನೀಡುತ್ತಿದ್ದರು. ಇದನ್ನೂ ಓದಿ: ಗೋಸುಂಬೆ ಉರುಫ್‌ ಊಸರವಳ್ಳಿ ಕಾಂಗ್ರೆಸ್‌ ಪಕ್ಷಕ್ಕೆ ಒಳಗೊಂದು ಹೊರಗೊಂದು ವೇಷ: ಜೆಡಿಎಸ್‌ ವಾಗ್ದಾಳಿ

ಮದವೇರಿದ ಕಾಡಾನೆ ಜೊತೆಗೆ ಏಕಾಂಗಿಯಾಗಿ ವೀರಾವೇಶದಿಂದ ಹೋರಾಡಿರುವ ವೀರ ಅರ್ಜುನ ಬಲಿಷ್ಠ ಕಾಡಾನೆ ದಾಳಿಗೆ ತೀವ್ರ ಗಾಯಗೊಂಡು ಸಾವಿಗೀಡಾಗಿತ್ತು. ಡಿಸೆಂಬರ್ 4.ರಂದು ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿ ಕಾದಾಟ ನಡೆದಿದ್ದು, ಕಾಡಾನೆ ಸೆರೆಗೆ ತೆರಳಿದ್ದ ವೇಳೆ ಒಂಟಿಸಲಗವೊಂದು ಏಕಾಏಕಿ ಬಂದು ಅರ್ಜುನನ ಮೇಲೆ ದಾಳಿ ಮಾಡಿತ್ತು. ಮದವೇರಿದ ಕಾಡಾನೆ ಬರುತ್ತಲೇ ಬೇರೆ ಸಾಕಾನೆಗಳು ಸ್ಥಳದಿಂದ ಹೆದರಿ ಓಡಿದ್ದವು. ಕಾಡಾನೆ ದಾಳಿಗೆ ಮುಂದಾದಾಗ ಕ್ಯಾಪ್ಟನ್ ಅರ್ಜುನ ಎದೆಕೊಟ್ಟು ಹೋರಾಡಿ ವೀರಮರಣ ಹೊಂದಿದ್ದ. ಇದನ್ನೂ ಓದಿ: ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗ್ತಾರೆ: ಹಿಜಬ್‌ ವಿರುದ್ಧ ಬಿಜೆಪಿ ಶಾಸಕ ಹೇಳಿಕೆ

ಅರ್ಜುನನ ರಣರೋಚಕ ಫೈಟ್‌ನ ಕೊನೇ ಕ್ಷಣದ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ. ಅರ್ಜುನನ ಮರಣದ ಎರಡು ತಿಂಗಳ ಬಳಿಕ ಕೋಟಿ ಕೋಟಿ ಜನರ ಪ್ರೀತಿಯ ಅರ್ಜುನನ ಏಕಾಂಗಿ ಹೋರಾಟದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ನ್ಯೂಸ್ – ಪೀಣ್ಯ ಫ್ಲೈಓವರ್‌ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್

Share This Article