RRR ಕಥೆಯನ್ನು ಜಪಾನ್ ಸಂಗೀತ ನಾಟಕಕ್ಕೆ ಅಳವಡಿಕೆ

Public TV
1 Min Read

ಪಾನ್ (Japan) ನಲ್ಲಿರುವ ಹೆಸರಾಂತ ನಾಟಕ ತಂಡ ‘ತಕರಾಜುಕಾ’ (Takarajuka) ಹೊಸ ಪ್ರಯೋಗಕ್ಕೆ ಸಾಕ್ಷಿಯಾಗಿದೆ. 110 ವರ್ಷಗಳ ಹಳೆಯದಾದ ಈ ನಾಟಕ ತಂಡವು ಸೂಪರ್ ಹಿಟ್ ಆರ್.ಆರ್.ಆರ್ ಸಿನಿಮಾದ ಕಥೆಯನ್ನು ಸಂಗೀತ ನಾಟಕಕ್ಕೆ ಅಳವಡಿಸಿದೆ. ಜೊತೆಗೆ ಈ ಸಿನಿಮಾದ ನಿರ್ದೇಶಕ ರಾಜಮೌಳಿ ಎದುರೇ ನಾಟಕವನ್ನು ಪ್ರದರ್ಶಿಸಿದೆ.

ಸದ್ಯ ರಾಜಮೌಳಿ (Rajamouli) ಮತ್ತು ಟೀಮ್ ಜಪಾನ್ ನಲ್ಲಿ ಬೀಡು ಬಿಟ್ಟಿದೆ. ಇದೇ ಸಂದರ್ಭದಲ್ಲಿ ತಮ್ಮದೇ ಕಥೆಯಿಂದ ತಯಾರಾಗಿರುವ ನಾಟಕವನ್ನು ವೀಕ್ಷಿಸಿ ಸಂಭ್ರಮಿಸಿದ ರಾಜಮೌಳಿ ಮತ್ತು ತಂಡ. ನಾಟಕದ ಕಲಾವಿದರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ನಿರ್ದೇಶಕರು. ನಾಟಕ ಕುರಿತು ಅವರು ಬರೆದಿದ್ದಾರೆ.

 

ನಾಟಕ ತಂಡದವರ ಉತ್ಸಾಹ ಮತ್ತು ಅವರ ಪ್ರತಿಭೆ ಕಂಡು ಬೆರಗಾದೆ. ಅದ್ಭುತವಾಗಿ ನಾಟಕವನ್ನು ಹೆಣೆದಿದ್ದಾರೆ. ಇಂತಹ ತಂಡಕ್ಕೆ ನನ್ನ ಧನ್ಯವಾದಗಳು ಎಂದು ರಾಜಮೌಳಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share This Article