ಬೆಂಗಳೂರಿನ 10 ಮೆಟ್ರೋ ಸ್ಟೇಷನ್‌ನಲ್ಲಿ ಅಮುಲ್‌ಗೆ ಪ್ರಮೋಷನ್ – ಕನ್ನಡಿಗರು ಕೆಂಡ

Public TV
2 Min Read

ಬೆಂಗಳೂರು: ಈ ಹಿಂದೆ ಮೆಟ್ರೋ (Namma Metro) ನೇಮಕಾತಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದ ಬಿಎಂಆರ್‌ಸಿಎಲ್ (BMRCL) ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ಹೊರರಾಜ್ಯದ ಅಮುಲ್ (Amul) ಕಿಯೋಸ್ಕ್‌ಗಳನ್ನು ಸ್ಥಾಪಿಸಿದ್ದು, ನಮ್ಮ ನಂದಿನಿಗೆ (Nandini) ಮನ್ನಣೆ ಕೊಟ್ಟಿಲ್ಲ. ಇಷ್ಟಾದರೂ ಅಧಿಕಾರ ಬರೋ ಮುಂಚೆ ಸೇವ್ ನಂದಿನಿ ಅಭಿಯಾನ ಮಾಡಿದ್ದ ಕಾಂಗ್ರೇಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

ಬೆಂಗಳೂರಿಗರ ಪ್ರಮುಖ ಸಂಚಾರ ನಾಡಿಯೆಂದರೆ ಅದು ನಮ್ಮ ಮೆಟ್ರೋ. ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ 6-7 ಲಕ್ಷ ಮೆಟ್ರೋ ಪ್ರಯಾಣಿಕರು ಸಂಚರಿಸಿ, ಬಿಎಂಆರ್‌ಸಿಎಲ್ ಅನ್ನು ಬೆಂಗಳೂರಿಗರು ಬೆಳೆಸುತ್ತಿದ್ದಾರೆ. ಆದರೆ ಕನ್ನಡಿಗರಿಗೆ, ಕರ್ನಾಟಕದ ಬ್ರ‍್ಯಾಂಡ್ ನಂದಿನಿಗೆ ಬೆಂಗಳೂರು ಮೆಟ್ರೋ ನಿಗಮ ಮನ್ನಣೆ ಕೊಡದೇ, ಗುಜರಾತ್‌ನ ಅಮುಲ್‌ಗೆ ಆದ್ಯತೆ ಕೊಟ್ಟು ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ತೆರೆಯಲು ಅವಕಾಶ ನೀಡಿದೆ. ಇದನ್ನೂ ಓದಿ: KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ

ಇತ್ತೀಚಿಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಬಿಎಂಆರ್‌ಸಿಎಲ್ ಸಹಿ ಹಾಕಿದೆ. ಈ ಬಗ್ಗೆ ಜೂನ್ 16ರಂದು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧ ಭೀತಿ; ಭಾರತಕ್ಕೆ ಹೆಚ್ಚಿದ ಆತಂಕ

ನಗರದ ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್ ಎಂ ವಿಶ್ವೇಶ್ವರಯ್ಯ, ನಾಡಪ್ರಭು ಕೆಂಪೇಗೌಡ ನಿಲ್ದಾಣ ,ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿಗಳಲ್ಲಿ ಕಿಯೋಸ್ಕ್ಗಳು ಆರಂಭವಾಗಲಿವೆ. ಈ ಮೂಲಕ ನಮ್ಮ ರಾಜ್ಯದ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್‌ನ ಅಮುಲ್ ಬ್ರ‍್ಯಾಂಡ್ ಅನ್ನು ಪ್ರಮೋಷನ್ ಮಾಡಲಾಗುತ್ತಿದೆ. ಈಗಾಗಲೇ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಕಿಯೋಸ್ಕ್ ಸ್ಥಾಪನೆಯಾಗಿದ್ದು, ಈಗಾಗಲೇ ಅಮುಲ್ ಮಳಿಗೆಯಲ್ಲಿ ಐಸ್‌ಕ್ರೀಮ್, ಚಾಕಲೇಟ್, ಸ್ಯಾಂಡ್ ವಿಚ್, ಟೀ, ಪಿಜ್ಜಾ ಸೇರಿದಂತೆ ಹಲವು ಇನ್‌ಸ್ಟೆಂಟ್ ತಿಂಡಿಗಳನ್ನು ಮಾರಲಾಗುತ್ತಿದೆ. ಇದನ್ನೂ ಓದಿ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿಯಾದ ಮೋದಿ – ಹೊಸ ಹೈಕಮೀಷನರ್ ನೇಮಿಸಲು ಸಮ್ಮತಿ

ಇನ್ನೂ ಈಗೀನ ಕಾಂಗ್ರೆಸ್ ಸರ್ಕಾರ 2023ರ ಕರ್ನಾಟಕ ಚುನಾವಣೆಗೆ ಮುನ್ನ ಅಮುಲ್ ಅನ್ನು ಬೆಂಗಳೂರು ಮಾರುಕಟ್ಟೆಗೆ ಪ್ರವೇಶಿಸುವುದನ್ನು ವಿರೋಧಿಸಿತ್ತು. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಸರ್ಕಾರವು ಅಮುಲ್‌ಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ನಂದಿನಿ ಬ್ರ‍್ಯಾಂಡ್ ಮತ್ತು ಡೈರಿ ರೈತರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿತ್ತು. ಸೇವ್ ನಂದಿನಿ ಅಭಿಯಾನವನ್ನು ಆರಂಭಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಯಾನ ನಡೆಸಿದ್ದರು. ರಾಹುಲ್ ಗಾಂಧಿ ಸಹ ಅಭಿಯಾನದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಯುದ್ಧ ಶುರುವಾಗಿದೆ – ಟ್ರಂಪ್‌ ಧಮ್ಕಿಗೆ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ರಿಯಾಕ್ಷನ್‌

ಈ ರಾಜಕೀಯ ಗುದ್ದಾಟ ಮರೆತು, ಈಗ ತನ್ನ ಮಾತಿಗೆ ಫುಲ್ ಉಲ್ಟಾ ಎನ್ನುವಂತೆ ಕಾಂಗ್ರೆಸ್ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಅಮುಲ್ ಮಳಿಗೆಗಳು ಸ್ಥಾಪಿಸಲು ಅವಕಾಶ ನೀಡಿದೆ. ಇನ್ನೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ, ದೇಶ ವಿದೇಶದಲ್ಲಿ ಹೆಸರಾದ ನಮ್ಮ ಕನ್ನಡಿಗರ, ಕರ್ನಾಟಕದಲ್ಲಿ ‘ನಂದಿನಿ’ ಬ್ರಾಂಡ್ ಹೆಸರಾಗಿದೆ. ಆದರೆ ನಮ್ಮೂರ ನಂದಿನಿಗೆ ಬಿಎಂಆರ್‌ಸಿಎಲ್ ಅವಕಾಶ ಕೊಡದೇ ಇರೋದಕ್ಕೆ ಕನ್ನಡಿಗರು ಕೆಂಡವಾಗಿದ್ದಾರೆ. ಇದನ್ನೂ ಓದಿ: ಗಾಳಿ ಇಲ್ಲ, ಮಳೆ ಇಲ್ಲ – ಸಿಎಂ ನಿವಾಸದ ಮುಂದೆ ಧರೆಗುರುಳಿದ ಬೃಹತ್ ಮರ

Share This Article