ಅಪರಿಚಿತ ಬೈಕ್ ನಲ್ಲಿ ಅಮಿತಾಭ್ ಸವಾರಿ : ದಂಡಕಟ್ಟಿ ಎಂದ ಮುಂಬೈ ಪೊಲೀಸ್

Public TV
1 Min Read

ಮುಂಬೈ ಟ್ರಾಫಿಕ್ (Traffic) ಸಮಸ್ಯೆಗೆ ನಲುಗಿ ಹೋಗಿದ್ದ ಅಮಿತಾಭ್ ಬಚ್ಚನ್ (Amitabh Bachchan), ತಾವು ಸಾಗುತ್ತಿದ್ದ ಹಾದಿಯಲ್ಲೇ ಹೊರಟಿದ್ದ ಬೈಕ್ (Bike) ಸವಾರನಿಗೆ ಮನವಿ ಮಾಡಿಕೊಂಡು ತಾವು ತಲುಪಬೇಕಿದ್ದ ಜಾಗವನ್ನು ಅದೇ ಬೈಕ್ ಮೂಲಕ ತಲುಪಿದ್ದರು. ನಂತರ ಇನ್ಸ್ಟಾದಲ್ಲಿ ಆ ಫೋಟೋ ಶೇರ್ ಮಾಡಿ, ಅಪರಿಚಿತ ವ್ಯಕ್ತಿಗೆ ಧನ್ಯವಾದಗಳನ್ನು ಹೇಳಿದ್ದರು. ಆ ಫೋಟೋ ಸಖತ್ ವೈರಲ್ ಕೂಡ ಆಗಿತ್ತು. ಆ ಫೋಟೋನೇ ಈಗ ಎಡವಟ್ಟಿಗೆ ಕಾರಣವಾಗಿದೆ.

ಬೈಕ್ ಸವಾರನ ಫೋಟೋ ಹಂಚಿಕೊಂಡಿದ್ದ ಬಚ್ಚನ್, ‘ಡ್ರಾಪ್ ನೀಡಿದ್ದಕ್ಕೆ ಗೆಳೆಯನಿಗೆ ಧನ್ಯವಾದಗಳು. ನನ್ನನ್ನು ಸರಿಯಾದ ಸಮಯಕ್ಕೆ ಸೇರಬೇಕಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದೀಯಾ. ಕ್ಯಾಪ್, ಶರ್ಟ್ಸ್ ಮತ್ತು ಹಳದಿ ಬಣ್ಣದ ಟೀ ಶರ್ಟ್ ತೊಟ್ಟಿದ್ದ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದರು. ಈ ಫೋಟೋದಲ್ಲಿ ಬೈಕ್ ಓಡಿಸುವವರು ಮತ್ತು ಅಮಿತಾಭ್ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಹಾಗಾಗಿ ವ್ಯಕ್ತಿಯೊಬ್ಬರು ಆ ಫೋಟೋವನ್ನು ಪೊಲೀಸರಿಗೆ ಟ್ಯಾಗ್ ಮಾಡಿ ದಂಡ ಹಾಕುವಂತೆ ಒತ್ತಾಯಿಸಿದ್ದರು. ಇದೀಗ ಓದಿ: 7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಧ್ರುವ ಸರ್ಜಾ

ಮುಂಬೈ ಪೊಲೀಸ್ (Police) ಇದೀಗ ಕ್ರಮ ತಗೆದುಕೊಳ್ಳಲು ಮುಂದಾಗಿದ್ದು, ಸಾರಿಗೆ ನಿಮಯ ಉಲ್ಲಂಘಿಸಿದ್ದಕ್ಕಾಗಿ ದಂಡ ಕಟ್ಟುವಂತೆ ಅಮಿತಾಭ್ ಮತ್ತು ಸವಾರನಿಗೆ ಸೋಷಿಯಲ್ ಮೀಡಿಯಾ ಮೂಲಕವೇ ತಿಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಮಿತಾಭ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ದಂಡ ಕಟ್ಟುವುದು ಅಮಿತಾಭ್ ಗೆ ಅನಿವಾರ್ಯವಾಗಿದೆ. ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ.

ಅಮಿತಾಭ್ ಚಿತ್ರೀಕರಣಕ್ಕೆ (Shooting) ತೆರಳಬೇಕಿತ್ತು. ಆದರೆ, ಟ್ರಾಫಿಕ್ ನಲ್ಲಿ ಸಿಲುಕಿ ಏನೂ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಚಿತ್ರೀಕರಣಕ್ಕೆ ಎಂದೂ ತಡವಾಗಿ ಹೋಗದ ಅಮಿತಾಭ್, ಆ ಕ್ರಿಯೆಯನ್ನು ಉಳಿಸಿಕೊಳ್ಳಬೇಕಿತ್ತು. ಹಾಗಾಗಿ ಅವರು ಬೈಕ್ ಸವಾರನ ಮೊರೆ ಹೋಗಿದ್ದರು. ಅವನು ಕೂಡ ಬಿಗ್ ಬಿಗೆ ಡ್ರಾಪ್ ಮಾಡಿದ್ದ.

Share This Article