ದೀಪಿಕಾ, ಕತ್ರಿನಾ ಜೊತೆ ನಟಿಸಲು ಆನ್‍ಲೈನ್ ಅಪ್ಲೀಕೇಶನ್ ಭರ್ತಿ ಮಾಡಿದ ಬಿಗ್ ಬಿ

Public TV
2 Min Read

ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಅಮಿತಾಬ್ ಶನಿವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಜೊತೆ ನಟಿಸಲು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಪತ್ರಿಕೆಯೊಂದರಲ್ಲಿ ದೀಪಿಕಾ ಮತ್ತು ಕತ್ರೀನಾ ಇಬ್ಬರ ಎತ್ತರ ಶಾಹಿದ್ ಕಪೂರ್ ಮತ್ತು ಅಮಿರ್ ಖಾನ್‍ಗಿಂತ ಹೆಚ್ಚಿದೆ. ಹೀಗಾಗಿ ಸಿನಿಮಾ ಚಿತ್ರೀಕರಣ ವೇಳೆ ನಿರ್ದೇಶಕರು ಇಬ್ಬರ ನಟಿಯರ ಎತ್ತರವನ್ನು ಮರೆಮಾಚಲು ಹರಸಾಹಸ ಮಾಡುತ್ತಾರೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಈ ಪತ್ರಿಕೆ ಲೇಖನವನ್ನು ಫೋಟೋ ಹಾಕಿ ಅಮಿತಾಬ್ ಟ್ವೀಟ್ ಮಾಡುವ ಮೂಲಕ ತಾವು ಇಬ್ಬರು ನಟಿಯರಿಗಿಂತ ಎತ್ತರವಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ನಲ್ಲಿ ಏನಿದೆ?:

ಜಾಬ್ ಅಪ್ಲೀಕೇಷನ್
ಹೆಸರು: ಅಮಿತಾಬ್ ಬಚ್ಚನ್
ಹುಟ್ಟಿದ ದಿನಾಂಕ: 11.10.1942
ವಯಸ್ಸು: 76
ಕೆಲಸದ ಅನುಭವ: 49 ವರ್ಷ ಸಿನಿಮಾಗಳಲ್ಲಿ ಕೆಲಸ (ಅಂದಾಜು 200 ಚಿತ್ರಗಳಲ್ಲಿ ನಟನೆ)
ಭಾಷೆ: ಹಿಂದಿ, ಇಂಗ್ಲಿಷ್, ಪಂಜಾಬಿ ಮತ್ತು ಬಂಗಾಲಿ
ಎತ್ತರ: 6 ಅಡಿ 2 ಇಂಚು
ಸದಾ ಲಭ್ಯವಾಗಿರುತ್ತೇನೆ. ನಾನು ನಿಮ್ಮ ಜೊತೆ ನಟಿಸಿದ್ರೆ ಎತ್ತರದ ಸಮಸ್ಯೆ ಉಂಟಾಗುವುದಿಲ್ಲ ಅಂತಾ ಬರೆದು ಪತ್ರಿಕೆಯ ಲೇಖನವನ್ನು ಹಾಕಿ ಬರೆದಿದ್ದಾರೆ.

ಬಾಲಿವುಡ್ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ‘ಪದ್ಮಾವತ್’ ಸಿನಿಮಾದಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಎಲ್ಲರ ಮನಸ್ಸನ್ನು ಸೆಳೆದಿದ್ದಾರೆ. ದೀಪಿಕಾ ಸಿನಿಮಾದಲ್ಲಿ ರಾಣಿ ಪದ್ಮಿನಿಯಾಗಿ ಕಾಣಿಸಿಕೊಂಡರೆ ರಾಜ ರಾಣಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದರು. ನಟಿ ದೀಪಿಕಾ ಎತ್ತರ ಶಾಹಿದ್ ಕಪೂರ್ ಸಮನಾಗಿದ್ದರಿಂದ ಚಿತ್ರೀಕರಣ ವೇಳೆ ಸಂಜಯ್ ಲೀಲಾ ಬನ್ಸಾಲಿ ಇಬ್ಬರ ಎತ್ತರವನ್ನು ಮರೆ ಮಾಚಲು ಕಸರತ್ತು ನಡೆಸುತ್ತಿದ್ರು ಎಂದು ಹೇಳಲಾಗಿದೆ. ದೀಪಿಕಾ 5.85 ಅಡಿ (174 ಸೆಂ.ಮೀ) ಎತ್ತರವನ್ನು ಹೊಂದಿದ್ದಾರೆ. ಶಾಹಿದ್ ಕಪೂರ್ ಸಹ 174 ಸೆಂ.ಮೀ ಎತ್ತರವನ್ನು ಹೊಂದಿದ್ದಾರೆ.

ಕತ್ರಿನಾ ಕೈಫ್ ಸಹ 173 ಸೆಂ.ಮೀ.ಎತ್ತರವನ್ನು ಹೊಂದಿದ್ದು, ಅಮಿರ್ ಖಾನ್ ಜೊತೆ ನಟಿಸಿದ್ದಾರೆ. ಅಮೀರ್ ಖಾನ್ 168 ಸೆಂ.ಮೀ ಎತ್ತರ ಹೊಂದಿದ್ದು, ಕತ್ರಿನಾರಿಗಿಂತ 5 ಸೆಂ.ಮೀ. ಕುಳ್ಳರಾಗಿದ್ದಾರೆ. ಇತ್ತೀಚೆಗೆ ಥಗ್ಸ್ ಆಫ್ ಹಿಂದೊಸ್ಥಾನ ಸಿನಿಮಾದ ರಿಹರ್ಸಲ್ ವೇಳೆಯ ಫೋಟೋವನ್ನು ಕತ್ರಿನಾ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು. ಅಮಿರ್ ಖಾನ್ ಫೋಟೋದಲ್ಲಿ ಕತ್ರಿನಾಗಿಂತ ಎತ್ತರವಾಗಿ ಕಾಣಿಸಿದ್ದಕ್ಕೆ ಹಲವರು ಫನ್ನಿ ಫನ್ನಿ ಕಮೆಂಟ್ ಮಾಡಿದ್ದರು.

ಅಮಿತಾಬ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಈ ಹಿಂದೆ ಪೀಕು (2015) ಮತ್ತು ಆರಕ್ಷಣ್ (2011)ರಲ್ಲಿ ಜೊತೆಯಾಗಿ ನಟಿಸಿದ್ದರು. ಪೀಕು ಸಿನಿಮಾದಲ್ಲಿ ಇಬ್ಬರ ನಟನೆ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಈಗ ಅಮಿತಾಬ್ ಮತ್ತೊಮ್ಮೆ ದೀಪಿಕಾ ಜೊತೆ ನಟಿಸುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *