– ಗಡಿ ಕಾಯುವಲ್ಲಿ, ನುಸುಳುವಿಕೆ ತಡೆಯುವಲ್ಲಿ ಶಾ ವಿಫಲ ಅಂತ ವಾಗ್ದಾಳಿ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ.
‘Amit Shah’s head should be cut off and put on the table’, says Mahua Moitra.
Disgusting, Disgraceful!
That line from Mahua Moitra is beyond politics, it is pure hate speech, drenched in venom.
Her level has stooped this low under able guidance by Mamata Banerjee’s TMC! pic.twitter.com/VBGwsFd04o
— Pradeep Bhandari(प्रदीप भंडारी)🇮🇳 (@pradip103) August 29, 2025
ಭಾರತಕ್ಕೆ ಬಾಂಗ್ಲಾ ಪ್ರದೇಶಗಳ ಒಳನುಸುಳುವಿಕೆ (Bangladeshi immigrants) ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹುವಾ ಮೊಯಿತ್ರಾ, ಅಮಿತ್ ಶಾ ತಲೆಯನ್ನು ಕತ್ತರಿಸಿ, ಪ್ರದರ್ಶನಕ್ಕಾಗಿ ಟೇಬಲ್ ಮೇಲೆ ಇಡಬೇಕು ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ಬಂದ ರಹಸ್ಯ ಪತ್ರದಿಂದ ಭಾರತ, ಚೀನಾ ಸಂಬಂಧ ಸುಧಾರಣೆ!
ಒಂದು ವೇಳೆ ಭಾರತದ ಗಡಿಯನ್ನ (Indian Border) ರಕ್ಷಣೆ ಮಾಡಲು ಸಾಧ್ಯವಾಗದಿದ್ರೆ, ನೂರಾರು ಸಂಖ್ಯೆಯಲ್ಲಿ ನುಸುಳುಕೋರರು ಒಳನುಸುಳುತ್ತಿದ್ದರೆ, ನಮ್ಮ ಮಹಿಳೆಯರನ್ನ ಅಗೌರವಿಸುತ್ತಿದ್ದರೆ ಅಥವಾ ನಮ್ಮ ಭೂಮಿಯನ್ನ ಅತಿಕ್ರಮಿಸಿಕೊಳ್ಳುತ್ತಿದ್ದರೆ? ಅಮಿತ್ ಶಾ (Amit Shah) ಅವರ ತಲೆ ಕತ್ತರಿಸಿ ಟೇಬಲ್ ಮೇಲೆ ಪ್ರದರ್ಶನಕ್ಕಿಡುವುದು ನಿಮ್ಮ ಕರ್ತವ್ಯ. ಏಕೆಂದರೆ ಗಡಿ ಕಾಯಲು, ನುಸುಳುವಿಕೆ ತಡೆಯಲು ಅಮಿತ್ ಶಾ ವಿಫಲರಾಗಿದ್ದಾರೆ ಎಂದು ಲೇವಡಿ ಮಾಡಿದರು.
ಸ್ವಾತಂತ್ರ್ಯ ದಿನಾಚರಣೆ ವೇಳೆ ಪ್ರಧಾನಿ ಮೋದಿಯ ಕೆಂಪುಕೋಟೆ ಭಾಷಣ ಉಲ್ಲೇಖಿಸಿದ ಮಹುವಾ, ʻಮೋದಿ ಕೆಂಪು ಕೋಟೆಯಲ್ಲಿ ನಿಂತು ನುಸುಳುಕೋರು ಜನಸಂಖ್ಯಾ ಬದಲಾವಣೆ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದರು. ಇದನ್ನ ಗಂಭೀರವಾಗಿ ಪರಿಗಣಿಸದೇ ಗೃಹಸಚಿವರು ಮುಂದಿನ ಸಾಲಿನಲ್ಲಿ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಗಡಿಯಲ್ಲಿ ಭದ್ರತಾ ಪಡೆಗಳಿದ್ದೂ ಒಳನುಸುಳುವಿಕೆ ಏಕೆ ಮುಂದುವರಿಯುತ್ತಿದೆ? ಅದರಲ್ಲೂ ಪಶ್ಚಿಮ ಬಂಗಾಳದ ಗಡಿಯಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನ ತಡೆಯುವಲ್ಲಿ ಶಾ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಿಎಸ್‌ಟಿ ಸರಳೀಕರಣದಿಂದ ರಾಜ್ಯಗಳ ಆದಾಯ 2.5 ಲಕ್ಷ ಕೋಟಿ ನಷ್ಟ ಸಾಧ್ಯತೆ: ಸಚಿವ ಕೃಷ್ಣ ಬೈರೇಗೌಡ ಕಳವಳ
ಕೆರಳಿದ ಕೇಸರಿ ಪಡೆ
ಇನ್ನೂ ಮಹುವಾ ಮೊಯಿತ್ರಾ ಅವರ ಹೇಳಿಕೆಯಿಂದ ಕೇಸರಿ ಪಡೆ ಕೆರಳಿ ಕೆಂಡವಾಗಿದೆ. ಮೊಯಿತ್ರಾ ಲಜ್ಜೆಗೆಟ್ಟ ಹೇಳಿಕೆ ನೀಡಿದ್ದಾರೆ. ಎಕ್ಸ್‌ನಲ್ಲಿ ಆಕ್ರೋಶ ಹೊರಹಾಕಿರುವ ಹಿರಿಯ ನಾಯಕ ಪ್ರದೀಪ್ ಭಂಡಾರಿ, ಇದು ರಾಜಕೀಯ ಮೀರಿದ ಅಪ್ಪಟ ದ್ವೇಷ ಭಾಷಣ, ಇದರಲ್ಲಿ ವಿಷ ತುಂಬಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಹೃದಯ ಗೆದ್ದ ಮೆಗಾ ಸ್ಟಾರ್ – ಚಿರಂಜೀವಿ ರಿಯಲ್ ಹೀರೋ ಎಂದ ಫ್ಯಾನ್ಸ್