ಕೆಲವೇ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರಲ್ಲ: ಅಮಿತ್ ಶಾ

Public TV
1 Min Read

ಶ್ರೀನಗರ: ಕೆಲವು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ಈಶಾನ್ಯದಲ್ಲಿ ಸಿಆರ್‌ಪಿಎಫ್ ಪಡೆಗಳ ಅಗತ್ಯವಿರುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

ಶ್ರೀನಗರದ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ಸಿಆರ್‌ಪಿಎಫ್‌ನ 83ನೇ ರೈಸಿಂಗ್ ಡೇ ಪರೇಡ್‍ನಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ಬೃಹತ್ ಭದ್ರತಾ ನಿಯೋಜನೆಯನ್ನು ತೆಗೆದುಹಾಕಲು ಉನ್ನತ ಮಟ್ಟದಲ್ಲಿ ಸರ್ಕಾರ ಇದೇ ಮೊದಲ ಬಾರಿಗೆ ಪ್ರಯತ್ನಿಸುತ್ತಿದೆ. ಇದು ಕೆಲವೇ ವರ್ಷಗಳಲ್ಲಿ ಈಡೇರಿಸಲಿದೆ ಎಂದು ಭರವಸೆ ನೀಡಿದರು.

ಸಿಆರ್‌ಪಿಎಫ್ ಯೋಧರ ಶ್ರಮದಿಂದಾಗಿ ಇನ್ನೂ ಕೆಲವೇ ವರ್ಷಗಳಲ್ಲಿ ಭಯೋತ್ಪಾದನಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಮೂರು ಪ್ರದೇಶಗಳಲ್ಲೂ ಸಿಆರ್‌ಪಿಎಫ್ ಅಗತ್ಯವಿಲ್ಲದೇ ನಾವು ಸಂಪೂರ್ಣವಾಗಿ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂಬ ವಿಶ್ವಾಸವಿದೆ. ಇದರ ಸಂಪೂರ್ಣ ಪ್ರಶಂಸೆಯೂ ಸಿಆರ್‌ಪಿಎಫ್ ಯೋಧರಿಗೆ ಸಲ್ಲುತ್ತದೆ ಎಂದರು. ಇದನ್ನೂ ಓದಿ: RRR ಪ್ರೀ ರಿಲೀಸ್ ಇವೆಂಟ್‌ನಲ್ಲಿ ಪೊಲೀಸರ ಮೇಲೆ ಬಾಟಲಿ, ಚಪ್ಪಲಿ ತೂರಿ ಅಭಿಮಾನಿಗಳ ಅತಿರೇಕದ ವರ್ತನೆ

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧದ ಹೋರಾಟದ ಮೇಲೆ ಸಿಆರ್‌ಪಿಎಫ್ ನಿಯಂತ್ರಣ ತೆಗೆದುಕೊಂಡಿದೆ. ಇದು ಯೋಧರು ಜಮ್ಮು- ಕಾಶ್ಮೀರದಲ್ಲಿ ಮಾಡಿದ ದೊಡ್ಡ ಕೆಲಸವಾಗಿದೆ ಎಂದು ಪ್ರಶಂಸಿದರು. ಇದನ್ನೂ ಓದಿ: ಹೋಳಿ ಹಬ್ಬದಲ್ಲೂ ಕಾಶ್ಮೀರ್ ಫೈಲ್ಸ್ ಹವಾ- ಅನುಪಮ್ ಖೇರ್‌ನಂತೆ ಕಾಣಿಸಿಕೊಂಡ ಯುವಕರು

ಕಾಶ್ಮೀರದಲ್ಲಿ ಸಿಆರ್‌ಪಿಎಫ್ ದೊಡ್ಡ ಅಸ್ತಿತ್ವವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳಿಗಾಗಿ ಸಿಆರ್‌ಪಿಎಫ್ ಸ್ಥಳೀಯ ಪೊಲೀಸರಲ್ಲದೇ, ಸೇನೆ, ಬಿಎಸ್‍ಎಫ್, ಐಟಿಬಿಪಿ ಮತ್ತು ಎಸ್‍ಎಸ್‍ಬಿ ಸಹ ನಿಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ದೆಹಲಿಯ ಸಿಆರ್‌ಪಿಎಫ್ ಪ್ರಧಾನ ಕಚೇರಿಯ ಹೊರಗೆ ಪರೇಡ್ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *