ಕಾಂಗ್ರೆಸ್ ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾಗಿದೆ: ರಾಜನಾಥ್ ಬೆನ್ನಿಗೆ ನಿಂತ ಅಮಿತ್ ಶಾ

Public TV
2 Min Read

ಚಂಡೀಗಢ: ಕಾಂಗ್ರೆಸ್ ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾಗಿ ನಿಂತಿದೆ ಎಂದು ಹೇಳುವ ಮೂಲಕ ರಫೇಲ್ ವಿಮಾನಕ್ಕೆ ಆಯುಧ ಪೂಜೆ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪರ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬ್ಯಾಟ್ ಬೀಸಿದ್ದಾರೆ.

ವಿಜಯದಶಮಿ ದಿನದಂದು ಮಂಗಳವಾರ ಫ್ರಾನ್ಸ್‍ನಲ್ಲಿ ಭಾರತಕ್ಕೆ ಹಸ್ತಾಂತರಗೊಂಡ ಬಲಿಷ್ಠ ರಫೇಲ್ ವಿಮಾನವನ್ನು ಭಾರತೀಯ ಸಂಪ್ರದಾಯದ ಪ್ರಕಾರ ರಾಜನಾಥ್ ಸಿಂಗ್ ಪೂಜೆ ಮಾಡಿದ್ದರು. ಈ ವಿಚಾರವಾಗಿ ಕಾಂಗ್ರೆಸ್‍ನ ಕೆಲ ನಾಯಕರು ರಫೇಲ್ ವಿಮಾನವನ್ನು ಬಿಜೆಪಿ ಸರ್ಕಾರ ಕೇಸರಿಮಯ ಮಾಡಲು ಹೊರಟಿದೆ ಎಂದು ಟೀಕಿಸಿದ್ದರು.

ಈ ವಿಚಾರವಾಗಿ ಇಂದು ಹರ್ಯಾಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅಮಿತ್ ಶಾ, ಕಾಂಗ್ರೆಸ್ ಭಾರತೀಯ ಸಂಪ್ರದಾಯವನ್ನು ವಿರೋಧ ಮಾಡುತ್ತಿದೆ. ರಫೇಲ್ ವಿಮಾನಕ್ಕೆ ಆಯುಧ ಪೂಜೆ ಮಾಡುವುದರಲ್ಲಿ ತಪ್ಪು ಏನಿದೆ? ಭವಿಷ್ಯ ಅವರಿಗೆ ಪೂಜೆ ಮಾಡಿರುವುದು ಇಷ್ಟವಿಲ್ಲ ಎನ್ನಿಸುತ್ತದೆ. ವಿಯಜದಶಮಿಯೊಂದು ಆಯುಧಗಳನ್ನು ಪೊಜೆ ಮಾಡುವುದು ನಮ್ಮ ಸಂಪ್ರದಾಯ. ಕಾಂಗ್ರೆಸ್‍ನವರು ಇನ್ನು ಮುಂದೆ ಮಾತನಾಡುವಾಗ ಸ್ವಲ್ಪ ಆಲೋಚಿಸಿ ಮಾತನಾಡಲಿ ಎಂದು ವಾಗ್ದಾಳಿ ಮಾಡಿದರು.

ಫ್ರಾನ್ಸ್ ನಲ್ಲಿ ರಫೇಲ್ ವಿಮಾನದ ಚಕ್ರಗಳಿಗೆ ನಿಂಬೆಹಣ್ಣು ಇಟ್ಟು ಪೂಜೆ ಮಾಡಿದ್ದಕ್ಕೆ ರಾಜನಾಥ್ ಸಿಂಗ್ ಅವರ ಟೀಕಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್, ಮೋದಿ ಸರ್ಕಾರ ರಫೇಲ್ ಯುದ್ಧ ವಿಮಾನವನ್ನು ಕೇಸರಿಮಯ ಮಾಡಲು ಹೊರಟಿದೆ. ವಿಜಯದಶಮಿ ಮತ್ತು ರಫೇಲ್ ವಿಮಾನದ ಧಾರ್ಮಿಕ ಸನ್ನಿವೇಶವು ಹೊಂದಾಣಿಕೆಯಾಗುವುದಿಲ್ಲ. ವಿಜಯದಶಮಿ ನಾವೆಲ್ಲರೂ ಆಚರಿಸುವ ಹಬ್ಬ, ಅದನ್ನು ಬಿಜೆಪಿ ವಿಮಾನದೊಂದಿಗೆ ಏಕೆ ಜೋಡಿಸಬೇಕು ಎಂದು ಪ್ರಶ್ನೆ ಮಾಡಿದ್ದರು.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ, ರಫೇಲ್ ವಿಮಾನದ ಚಕ್ರದ ಕೆಳಗೆ ಇರಿಸಿದ ನಿಂಬೆಹಣ್ಣಿನ ಫೋಟೋ ಹಾಕಿ. ಫ್ರಾನ್ಸ್ ನಿರ್ಮಿತ ರಫೇಲ್ ಭಾರತವನ್ನು ತಲುಪುವ ಮುನ್ನವೇ ಎರಡು ನಿಂಬೆಹಣ್ಣುಗಳನ್ನು ಹೊಡೆಯುವ ಮೂಲಕ ಮೊದಲ ಯಶಸ್ಸನ್ನು ಸಾಧಿಸಿದೆ ಮತ್ತು ದೇಶವನ್ನು ದುಷ್ಟರ ಕಣ್ಣಿನಿಂದ ರಕ್ಷಿಸಿದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು. ಇದನ್ನು ಓದಿ: ನಿಂಬೆಹಣ್ಣು ರೇವಣ್ಣ ಎಂದು ಗೇಲಿ ಮಾಡುವವರು ಈಗ ಮಾತಾಡಲಿ – ರೇವಣ್ಣ

ರಫೇಲ್ ವಿಶೇಷತೆ ಏನು?
ಎರಡು ಎಂಜಿನ್, ಎರಡು ಸೀಟ್ ಗಳನ್ನು ಹೊಂದಿರುವ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. 50 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿರುವ ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ. 100 ಕಿ.ಮೀದ ದೂರದಿಂದ ನಿಖರವಾಗಿ ಗುರಿಯ ಮೇಲೆ ದಾಳಿ ನಡೆಸಬಹುದಾಗಿದೆ.

ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫ್ರಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮಿ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *