ಅಂಬೇಡ್ಕರ್ ಬದುಕಿದ್ದಾಗ ಹಾಗೂ ಈಗಲೂ ಕಾಂಗ್ರೆಸ್‍ನಿಂದ ಅವಮಾನವಾಗ್ತಿದೆ: ಅಮಿತ್ ಶಾ

Public TV
2 Min Read

ಪುಣೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬದುಕಿದ್ದಾಗ ಮತ್ತು ಅವರ ಸಾವಿನ ನಂತರವೂ ಕಾಂಗ್ರೆಸ್ ಅವರನ್ನು ಅವಮಾನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧವಾಗಿ ಆರೋಪ ಮಾಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಶಂಕುಸ್ಥಾಪನೆ ಮಾಡಲು ಶಾ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಧಾನ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಶಾ, ಸಂವಿಧಾನ ದಿನವನ್ನು ಪರಿಚಯಿಸಿದವರು ಪ್ರಧಾನಿ ನರೇಂದ್ರ ಮೋದಿ. ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ. ಅಂಬೇಡ್ಕರ್ ಅವರು ಜೀವಂತವಾಗಿದ್ದಾಗ ಮತ್ತು ಅವರ ಮರಣದ ನಂತರವೂ ಅವರನ್ನು ಅವಮಾನಿಸಲು ಕಾಂಗ್ರೆಸ್ ಪಕ್ಷವು ಒಂದು ಕ್ಷಣವನ್ನು ಬಿಡಲಿಲ್ಲ ಎಂದಿದ್ದಾರೆ.

ಅಂಬೇಡ್ಕರ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು (ಮರಣೋತ್ತರ) ಕಾಂಗ್ರೆಸ್ಸೇತರ ಸರ್ಕಾರದಿಂದ ನೀಡಲಾಯಿತು. ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಸ್ಮೃತಿ ಸ್ಥಳಗಳಾಗಿ ಪರಿವರ್ತಿಸಲಾಯಿತು. ಅಂಬೇಡ್ಕರ್ ಅವರ ಪರಂಪರೆ ಹೆಚ್ಚು ಜನರನ್ನು ತಲುಪುತ್ತದೆ ಎಂಬ ಭಯದಿಂದ ಈ ಹಿಂದೆ ಸಂವಿಧಾನ್ ದಿವಸ್ ಅಥವಾ ಸಂವಿಧಾನ ದಿನವನ್ನು ಆಚರಿಸಲಾಗಲಿಲ್ಲ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾದಾಗ ಸಂವಿಧಾನ ದಿವಸ್ ಆಚರಣೆ ಪ್ರಾರಂಭವಾಯಿತು. ಮೋದಿಜಿ ಸಂವಿಧಾನ್ ದಿವಸ್ ಆಚರಿಸಿದಾಗ ಕಾಂಗ್ರೆಸ್ ವಿರೋಧಿಸುತ್ತದೆ ಮತ್ತು ಈಗ ಅದೇ ಕಾಂಗ್ರೆಸ್ ಪಕ್ಷವು ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಮಾತನಾಡುತ್ತದೆ. ಕಾಂಗ್ರೆಸ್ ವಿರೋಧದ ನಡುವೆಯೂ ಯಾವುದೇ ಭಯವಿಲ್ಲದೆ ಸ್ವತಂತ್ರ ಭಾರತಕ್ಕೆ ಸಂವಿಧಾನ ಮತ್ತು ಉತ್ತಮ ಆಡಳಿತಕ್ಕೆ ಅಂಬೇಡ್ಕರ್ ಅವರ ಕೊಡುಗೆಯನ್ನು ಮುಂದಿಟ್ಟರು ಎಂದು ನುಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮರಾಠಿಗರ ಮೇಲೆ ದಾಳಿ ನಡೆಯುತ್ತಿದೆ – ಸುಳ್ಳು ಆರೋಪ ಹೊರಿಸಿದ ಉದ್ಧವ್ ಠಾಕ್ರೆ

BJP - CONGRESS

ಪ್ರಧಾನಿ ಪುಣೆ ವಿಮಾನ ನಿಲ್ದಾಣದ ಸಾಮಥ್ರ್ಯವನ್ನು ವಿಸ್ತರಿಸಲು ಅನುಮತಿ ನೀಡಿದರು. ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ಪುಣೆ ಮೆಟ್ರೋಗೆ ಅವರು ಶಂಕುಸ್ಥಾಪನೆ ಮಾಡಿದರು. ಕೇಂದ್ರವು ಮುಂಬೈ-ಪುಣೆ ವಿಸ್ಟಾ ಡೋಮ್ (ಕೋಚ್) ಅನ್ನು ಪ್ರಾರಂಭಿಸಿದೆ, ಇದು ಈಗ ಪ್ರವಾಸಿಗರ ಆಕರ್ಷಣೆಯಾಗಿದೆ ಎಂದು ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಜನ ಸೇವೆಯೇ ನಿಜವಾದ ರಾಮ ರಾಜ್ಯ: ಯೋಗಿ ಆದಿತ್ಯನಾಥ್

Share This Article
Leave a Comment

Leave a Reply

Your email address will not be published. Required fields are marked *