– ಮೊದಲ ಬಾರಿಗೆ ಬಹಿರಂಗವಾಗಿ ದೇವೇಗೌಡರ ಮೇಲೆ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ
-ಬಿಜೆಪಿ ಏಕಾಂಗಿಯಾಗಿಯೇ ಅಧಿಕಾರಕ್ಕೆ ಬರಲಿದೆ
ಬೆಂಗಳೂರು: ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕಿಡಿಕಾರಿದರು.
ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ವೋಟ್ ಹಾಕಿದ್ರೆ ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಹೋಗಿ ಕೂರ್ತಾರೆ. ಆದರೆ ಬಿಜೆಪಿ ಪೂರ್ಣ ಬಹುಮತದೊಂದಿಗೆ 5 ವರ್ಷ ಆಡಳಿತ ನಡೆಸುವ ಮೂಲಕ ಭ್ರಷ್ಟಾಚಾರ ರಹಿತ, ಪರಿವಾರ ರಹಿತವಾದ ಆಡಳಿತ ನೀಡಲಿದೆ. ನಾವು ಯಾವ ಪಾರ್ಟಿ ಜೊತೆ ಕೈಜೋಡಿಸಲ್ಲ. ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್ ಜೊತೆ ಸರ್ಕಾರ ಮಾಡ್ತಾರೆ ಎನ್ನುವ ಮಾತುಗಳು ಕೆಲವರು ಹೇಳ್ತಾರೆ. ಆದರೆ ಬಿಜೆಪಿ ಏಕಾಂಗಿಯಾಗಿಯೇ ಅಧಿಕಾರಕ್ಕೆ ಬರಲಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ 2023ಕ್ಕೆ ಪೂರ್ಣ ಬಹುಮತದ ಬಿಜೆಪಿ (BJP) ಸರ್ಕಾರ ಬರಲಿದೆ. ಜೆಡಿಎಸ್ (JDS), ಕಾಂಗ್ರೆಸ್ (Congress) ಚುನಾವಣೆ (Election) ಹತ್ತಿರ ಬರುತ್ತಿದ್ದಂತೆ ಒಟ್ಟಿಗೆ ಕೂರುತ್ತಾರೆ. ಅವರ ಆಡಳಿತ ನೋಡಿದ್ದೀರಿ. ಯಡಿಯೂರಪ್ಪ (BS Yediyurappa) ಮತ್ತು ಬೊಮ್ಮಾಯಿ (Basavaraj Bommai) ಯಶಸ್ವಿ ಆಗಿ ಸರ್ಕಾರ ನಡೆಸಿದ್ದಾರೆ. ದಕ್ಷಿಣದ ಬಿಜೆಪಿ ಎಂಟ್ರಿ ಗೇಟ್ ಕರ್ನಾಟಕದಲ್ಲಿ ಆಗಿದೆ. ದಕ್ಷಿಣದಲ್ಲಿ ಬಿಜೆಪಿಯನ್ನು ಬಲಿಷ್ಠ ಮಾಡಬೇಕಿದೆ. ಇದಕ್ಕಾಗಿ ಬೆಂಗಳೂರಲ್ಲಿ (Bengaluru) 20ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು. ಆ ಮೂಲಕ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಬೇಕು ಎಂದು ಮನವಿ ಮಾಡಿದರು.
ಮಂಡ್ಯದಲ್ಲಿ ನಾನು ಈ ರೀತಿ ರ‍್ಯಾಲಿ ನೋಡಿರಲಿಲ್ಲ. ಮಂಡ್ಯ, ಮೈಸೂರು ಭಾಗದಲ್ಲಿ ನಿನ್ನೆ ನಡೆದ ರ‍್ಯಾಲಿ ಅದ್ಭುತವಾಗಿ ಇತ್ತು. ಇದಕ್ಕಾಗಿ ನಾನು ಕಟೀಲ್ ಅವರನ್ನು ಅಭಿನಂದಿಸುತ್ತೇನೆ. 5 ರಾಜ್ಯಗಳಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದಿದೆ. ಗುಜರಾತ್‌ನಲ್ಲಿ ಮೋದಿ ಎಲ್ಲಾ ದಾಖಲೆ ಪುಡಿ ಮಾಡಿದ್ದಾರೆ. ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನ ಕೂಡ ಸಿಗಲಿಲ್ಲ. ಗುಜರಾತ್ , ಉತ್ತರಖಂಡ, ಮಣಿಪುರ್, ಗೋವಾದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಪಡೆದಿದೆ. ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದು ಟೀಕಿಸಿದರು.
ಟ್ರಯಾಂಗಲ್ ಸ್ಪರ್ಧೆ ಎಂದು ಪ್ರತಕರ್ತರು ಹೇಳ್ತಾರೆ. ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತೇವೆ. ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಇಲ್ಲಿ ಟಿಪ್ಪು ಸುಲ್ತಾನ್ ಅನ್ನು ಹೀರೋ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೊದಲ ಬಾರಿಗೆ ಬಹಿರಂಗವಾಗಿ ದೇವೇಗೌಡರ ಮೇಲೆ ವಾಗ್ದಾಳಿ ನಡೆಸಿದ ಅವರು, ನೀವು ಪ್ರಧಾನಿ ಆಗಿದ್ರಿ, ಮುಖ್ಯಮಂತ್ರಿ ಆಗಿದ್ದವರು, ಆದರೆ ರಾಜ್ಯಕ್ಕಾಗಿ ನೀವು ಏನು ಮಾಡಿಲ್ಲ. ಆದರೆ ನಾವು ಏನು ಮಾಡಿದ್ದೇವೆ ಎಂದು ನಮ್ಮ ಯುವಮೋರ್ಚಾ ಕಾರ್ಯಕರ್ತರು ನಿಮಗೆ ಹೇಳ್ತಾರೆ ಎಂದು ಚಾಟಿ ಬೀಸಿದರು.
ಡಿಕೆಶಿ, ಸಿದ್ದರಾಮಯ್ಯ, ಹೆಚ್‌ಡಿಕೆ ಹೆಸರು ಪ್ರಸ್ತಾಪಿಸಿ ಕಿಡಿಕಾರಿದ ಅವರು, ಇವರಿಂದ, ಪಿಎಫ್‌ಐನಿಂದ ದೇಶ ರಕ್ಷಣೆ ಸಾಧ್ಯವೇ? ಇವರು ದೇಶವನ್ನು ಸುರಕ್ಷಿತವಾಗಿ ಇಡ್ತಾರೆ ಅಂತಾ ನಿರೀಕ್ಷೆ ಸಾಧ್ಯವೇ? ಇವರು ವೋಟ್ ಬ್ಯಾಂಕ್‌ಗೆ ಹೆದರುತ್ತಿದ್ದಾರೆ. ಆದರೆ ಬಿಜೆಪಿಗೆ ಆ ವೋಟ್ ಬ್ಯಾಂಕ್ ಭಯ ಇಲ್ಲ. ದೇಶದ ಸುರಕ್ಷತೆಯೇ ನಮ್ಮ ಗುರಿ ಎಂದು ತಿಳಿಸಿದರು. ಇದನ್ನೂ ಓದಿ: ಹೊಸ ವರ್ಷಾಚರಣೆ; ದಶಪಥ ಹೆದ್ದಾರಿಯ ರಾಮನಗರ- ಚನ್ನಪಟ್ಟಣ ಬೈಪಾಸ್ ಬಂದ್
ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಯಾರಿಗೂ ಬಹುಮತ ಬರದಿದ್ದಲ್ಲಿ ಕುಮಾರಸ್ವಾಮಿ ಕಾಂಗ್ರೆಸ್ ತೊಡೆ ಮೇಲೆ ಹೋಗಿ ಕೂರುತ್ತಾರೆ. ಹಾಗಾಗಿ ಒಂದು ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತದ ಅಧಿಕಾರ ನೀಡಿ, ಕರ್ನಾಟಕವನ್ನು ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಜಾತಿವಾದದಿಂದ ಮುಕ್ತ ಮಾಡಲಿದ್ದೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸರ್ಕಾರಿ ಭೂಮಿ ಒತ್ತುವರಿ – ಬುಲ್ಡೋಜರ್ ಬಳಸಿ ಅಮೀರ್ ಖಾನ್ ಮನೆ ಕಾಂಪೌಂಡ್ ಧ್ವಂಸ