– ಪ್ರಭಾವಿಗಳು ಬಂದ್ರೆ ಪಕ್ಷಕ್ಕೆ ಸೇರಿಸಿಕೊಳ್ಳೋಣ ಬಿಲ್ಡಪ್ ಲೀಡರ್‌ಗಳು ಬೇಡ
ಬೆಂಗಳೂರು: ಈ ಬಾರಿ ಒಳ ಮೈತ್ರಿಗಳಿಗೆ ಅವಕಾಶ ಇಲ್ಲ. ಒಳಮೈತ್ರಿ, ಒಳ ಒಪ್ಪಂದ ಅಂತೆಲ್ಲ ದುಸ್ಸಾಹಸ ಬೇಡ. ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌ಗೆ ಅವಕಾಶ ಕೊಡ್ಲೇಬೇಡಿ. ಯಾರೇ ಇರ್ಲಿ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿದ್ರೆ ನಮಗೆ ಗೊತ್ತಾಗುತ್ತೆ. ಜೆಡಿಎಸ್ (JDS) ಜೊತೆ ಒಳ ಮೈತ್ರಿ, ಸಾಫ್ಟ್ ಕಾರ್ನರ್ ಬೇಡ ಎಂದು ಬಿಜೆಪಿ (BJP) ನಾಯಕರಿಗೆ ಚುನಾವಣಾ ಚಾಣಕ್ಯ ಅಮಿತ್ ಶಾ (Amit Shah) ತಾಕೀತು ಮಾಡಿದರು.
ಹಳೇ ಮೈಸೂರು ಭಾಗದ ಪ್ರಮುಖ ನಾಯಕರ ಜೊತೆ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿ ಮಾತನಾಡಿದ ಅಮಿತ್ ಶಾ, ಈ ಬಾರಿ ಸ್ವಂತ ಬಲದಲ್ಲಿ ಗೆಲ್ಲಲೇಬೇಕು. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆದರೆ ಮಾತ್ರ ಇದು ಸಾಧ್ಯ. ಈ ಬಾರಿ ಒಳ ಮೈತ್ರಿಗಳಿಗೆ ಅವಕಾಶ ಇಲ್ಲ. ಒಳಮೈತ್ರಿ, ಒಳ ಒಪ್ಪಂದ ಅಂತೆಲ್ಲ ದುಸ್ಸಾಹಸ ಬೇಡ. ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌ಗೆ ಅವಕಾಶ ಕೊಡ್ಲೇಬೇಡಿ. ಯಾರೇ ಇರ್ಲಿ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿದ್ರೆ ನಮಗೆ ಗೊತ್ತಾಗುತ್ತೆ. ಜೆಡಿಎಸ್ ಜೊತೆ ಒಳ ಮೈತ್ರಿ, ಸಾಫ್ಟ್ ಕಾರ್ನರ್ ಬೇಡ ಎಂದು ವಾರ್ನಿಂಗ್ ನೀಡಿದರು. ಇದನ್ನೂ ಓದಿ: ಕರ್ನಾಟಕದ ಸಹಕಾರಿ ಕ್ಷೇತ್ರದಿಂದ ಇಡೀ ದೇಶಕ್ಕೆ ಸಂದೇಶ ರವಾನೆ – ಅಮಿತ್ ಶಾ ಬಣ್ಣನೆ
ಜೆಡಿಎಸ್ ಮತ್ತು ಕಾಂಗ್ರೆಸ್ ನಮಗೆ ಸಮ ರಾಜಕೀಯ ಎದುರಾಳಿಗಳು. ಪ್ರಭಾವಿಗಳು ಬರೋದಾದ್ರೆ ಪಕ್ಷಕ್ಕೆ ಸೇರಿಸಿಕೊಳ್ಳೋಣ. ಬಿಲ್ಡಪ್ ಲೀಡರ್‌ಗಳು, ಅವಕಾಶಕ್ಕಾಗಿ ಬರೋರು ನಮಗೆ ಬೇಡ. ಹಳೇ ಮೈಸೂರಿಗೆ ನಮ್ಮ ಸ್ಟ್ರಾಟಜಿ ವರ್ಕೌಟ್ ಆಗುವ ವಿಶ್ವಾಸ ಇದೆ. ಈ ಸ್ಟ್ರಾಟಜಿ ಪ್ರಕಾರವೇ ಮುಂದುವರಿಯೋಣ. ಲೋಕಲ್ ಪಾಲಿಟಿಕ್ಸ್ ಬಗ್ಗೆ ಎಚ್ಚರ ಇರಲಿ ಎಂದು ಸಭೆಯಲ್ಲಿ ಶಾ ಸೂಚಿಸಿದರು. ಇದನ್ನೂ ಓದಿ: ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ