ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕ ಹುಡುಗಿಯ ಕೈ ಹಿಡಿದ ಕನ್ನಡಿಗ

Public TV
1 Min Read

ತುಮಕೂರು: ಭಾರತೀಯ ಸಂಸ್ಕೃತಿಗೆ ಮಾರುಹೋದ ಅಮೆರಿಕ ಯುವತಿಯೊಬ್ಬರು ಕನ್ನಡದ ಹುಡುಗನ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಗಮನ ಸೆಳೆದಿದ್ದಾರೆ.

ಜಿಲ್ಲೆಯ ತೋವಿನಕೆರೆ ಸಮೀಪದ ಉಪ್ಪಾರಪಾಳ್ಯದ ತೋಟದಲ್ಲಿ, ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಜ್ಞಾನಿಯಾಗಿರುವ ಟಾರಾ ಹಾಗೂ ಬೆಂಗಳೂರಿನ ಡಾ. ಅಜಯ್ ಸಪ್ತಪದಿ ತುಳಿದಿದ್ದಾರೆ.

ಡಾ. ಅಜಯ್ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವಾಗ ಟಾರಾ ಪರಿಚಯವಾಗುತ್ತಾರೆ. ನಂತರ ಇಬ್ಬರ ಮಧ್ಯೆ ಪ್ರೀತಿ ಆರಂಭವಾಗುತ್ತದೆ. ಬಳಿಕ ಟಾರಾ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಬಯಕೆಯನ್ನು ಅಜಯ್ ಮುಂದೆ ವ್ಯಕ್ತಪಡಿಸಿದ್ದಾರೆ. ಟಾರಾ ಆಸೆಯಂತೆ ಅಜಯ್ ತನ್ನ ತಂದೆಯ ಸ್ನೇಹಿತರಾದ ಶ್ರೀಕಂಠ ಪ್ರಸಾದ್ ಅವರ ತೋಟದಲ್ಲಿ ಸಕಲ ತಯಾರಿ ನಡೆಸಿ ಪ್ರಕೃತಿ ಮಡಿಲಲ್ಲಿ ಸತಿಪತಿಗಳಾಗಿದ್ದಾರೆ.

ವಧು ಟಾರಾ ಸೀರೆ ಉಟ್ಟು, ಹೂವಿನ ಹಾರ ಹಾಕಿಕೊಂಡು ಥೇಟ್ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ. ಬಳಿಕ ಗೋ ಪೂಜೆ ನೆರವೇರಿಸಿ ಆರತಿ ಬೆಳಗಿದ್ದಾರೆ. ಎತ್ತಿನ ಗಾಡಿಯ ದಿಬ್ಬಣ, ಒನಕೆ ಕುಟ್ಟುವ ಶಾಸ್ತ್ರ, ಧಾನ್ಯ ಬೀಸುವ ಶಾಸ್ತ್ರ ಹೀಗೆ ಎಲ್ಲಾ ಸಂಪ್ರದಾಯವನ್ನೂ ಚಾಚೂ ತಪ್ಪದೆ ಮಾಡಿ ಸಪ್ತಪದಿ ತುಳಿದಿದ್ದಾರೆ.

https://www.youtube.com/watch?v=BI0ZgGuhABI

Share This Article
Leave a Comment

Leave a Reply

Your email address will not be published. Required fields are marked *