ಅಂಬರೀಶ್ ಧೋನಿಗೆ 2 ಲಕ್ಷ ರೂ. ನೀಡಿದ್ದ ವಿಚಾರ ಹಂಚಿಕೊಂಡ ಸುಮಲತಾ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್‍ರವರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿಗೆ ಹಣ ನೀಡಿದ್ದರು ಎಂಬ ವಿಚಾರವನ್ನು ಸುಮಲತಾ ಅಂಬರೀಶ್‍ರವರು ಬಹಿರಂಗ ಪಡಿಸಿದ್ದಾರೆ.

ಚಂದನವನದ ಕಲಿಯುಗದ ಕರ್ಣ ಎಂದೇ ಹೆಸರು ಪಡೆದಿದ್ದ ಅಂಬರೀಶ್‍ರವರು ಕಷ್ಟ ಎಂದು ಮನೆಯ ಬಾಗಿಲಿಗೆ ಹೋದ ಜನರಿಗೆ ಖಾಲಿ ಕೈನಲ್ಲಿ ವಾಪಸ್ಸು ಕಳುಹಿಸದೇ ಅನೇಕ ಜನರಿಗೆ ಸಹಾಯ ಮಾಡಿದ್ದಾರೆ. ಅಲ್ಲದೇ ಸೆಲಿಬ್ರೆಟಿಗಳ ಮಧ್ಯೆ ಯಾವುದೇ ಮನಸ್ತಾಪವಿದ್ದರೂ ಅಂಬರೀಶ್ ಅವರೇ ಸಂಧಾನ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ಸದ್ಯ ಅಂಬರೀಶ್‍ರವರು ಒಂದು ಕಾಲದಲ್ಲಿ ಕೂಲ್ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿಗೆ 2 ಲಕ್ಷ ರೂ. ಹಣ ನೀಡಿರುವ ಬಗ್ಗೆ ಸುಮಲತಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ:ಸ್ಯಾಂಡಲ್‍ವುಡ್‍ನ ವರಮಹಾಲಕ್ಷ್ಮಿ ಹಬ್ಬ ಸಖತ್ ಗ್ರ್ಯಾಂಡ್

ಅಂಬರೀಶ್‍ರವರು ಮಾಡಿದ ಮಾನವೀಯ ಕಾರ್ಯಗಳ ಬಗ್ಗೆ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಏಕೆಂದರೆ ಅವರು ಮಾಡುವ ದಾನದ ಬಗ್ಗೆ ಎಲ್ಲಿಯೂ ಪ್ರಚಾರ ಮಾಡಿಕೊಳ್ಳುತ್ತಿರಲಿಲ್ಲ. ಅನಿರೀಕ್ಷಿತವಾಗಿ ಈ ಬಗ್ಗೆ ನಾನು ತಿಳಿದಾಗ ನನಗೆ ಸರ್ಪ್ರೈಸ್ ಆಗುತ್ತದೆ. ಆದರೆ ಇದರಲ್ಲಿ ಯಾವುದೇ ಅಚ್ಚರಿಯಿಲ್ಲ. ಅವರನ್ನು ಪ್ರೀತಿಸುವ ಜನರೇ ದಾನ ಕರ್ಣ ಎಂದು ಅಂಬರೀಶ್‍ರನ್ನು ಕರೆಯುತ್ತಾರೆ ಎಂದು ಕ್ಯಾಪ್ಷನ್‍ನಲ್ಲಿ ಕೂಡ ಬರೆದುಕೊಂಡಿದ್ದಾರೆ.

ಹೌದು, 2004ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ವೇಳೆ ಉತ್ತಮ ಪ್ರದರ್ಶನ ತೋರಿದ್ದ ಧೋನಿ ಆಟ ನೋಡಿ ಅಂಬರೀಶ್ ಮನಸೋತಿದ್ದರು. ಜೊತೆಗೆ ಎಂ.ಎಸ್ ಡಿ ಕಷ್ಟವನ್ನು ತಿಳಿದು ಅವರಿಗೆ 2 ಲಕ್ಷ ರೂ. ಹಣ ಸಹಾಯ ಮಾಡಿದ್ದರು ಎಂಬ ಸತ್ಯ ಇದೀಗ ಬೆಳಕಿಗೆ ಬಂದಿದೆ. ಇದನ್ನೂ ಓದಿ:ತಾವು ನಟಿಸಿದ ಸಿನಿಮಾವನ್ನೇ ನೋಡಿ ಗಳಗಳನೇ ಅತ್ತ ಕಿಯಾರಾ

Share This Article
Leave a Comment

Leave a Reply

Your email address will not be published. Required fields are marked *