ಮಂಡ್ಯದ ಗಂಡು ಅಂಬರೀಶ್‍ಗೆ 66ನೇ ಹುಟ್ಟು ಹಬ್ಬದ ಸಂಭ್ರಮ

Public TV
1 Min Read

ಬೆಂಗಳೂರು: ರೆಬಲ್‍ಸ್ಟಾರ್ ಅಂಬರೀಶ್‍ಗೆ ಇವತ್ತು 66ನೇ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾತ್ರಿಯಿಂದಲೇ ಅಂಬಿ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿ ಸಂಭ್ರಮಿಸಿದರು.

ಮಂಡ್ಯದ ಗಂಡು ಎಂದಿನಂತೆ ತಮ್ಮ ರಗಡ್ ಸ್ಟೈಲ್‍ನಲ್ಲೆ ಅಭಿಮಾನಿಗಳನ್ನು ನಿಭಾಯಿಸಿ ಅವರು ತಂದಿದ್ದ ಕೇಕ್ ಕಟ್ ಮಾಡಿ ಸೆಲ್ಫಿಗೆ ಪೋಸ್ ಕೊಟ್ರು. ಇದೇ ಸಂದರ್ಭದಲ್ಲಿ ಮಾತನಾಡಿದ ಅಂಬರೀಶ್, ಅಭಿಮಾನಿಗಳ ಪ್ರೀತಿ ಹಾರೈಕೆಯಿಂದ ನಾನು ಬೆಳೆದಿದ್ದೆನೆ. ಅವರ ಖುಷಿ ನನ್ನ ಖುಷಿ. 49 ವರ್ಷ ಚಿತ್ರರಂಗದಲ್ಲಿದ್ದು ಅವರನ್ನು ರಂಜಿಸಿದ್ದೇನೆ. ನನ್ನ ಮಗನನ್ನು ಅವರಿಗೆ ಒಪ್ಪಿಸಿದ್ದೇನೆ ಅಂತ ಅವರದ್ದೆ ಸ್ಟೈಲ್‍ನಲ್ಲಿ ಹೇಳಿದ್ರು.

`ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಇಂದು ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಮೇಕಿಂಗ್‍ನ್ನ ರಿಲೀಸ್ ಮಾಡಿದ್ದು ಇದನ್ನ ಅಂಬಿಗೆ ಡೆಡಿಕೇಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *