ಅಮರಾವತಿ ಡ್ರೋನ್ ಸಮ್ಮೇಳನ 2024 | ಆಕಾಶವನ್ನೇ ಬೆಳಗಿದ 5,500 ಡ್ರೋನ್, 5 ಗಿನ್ನಿಸ್ ರೆಕಾರ್ಡ್

Public TV
2 Min Read

ಅಮರಾವತಿ/ಹೈದರಾಬಾದ್: ಅ.22 ರಂದು ನಡೆದ `ಅಮರಾವತಿ ಡ್ರೋನ್ ಸಮ್ಮೇಳನ 2024′ (Amaravati Drone Summit 2024) ರಲ್ಲಿ 5,500 ಡ್ರೋನ್‌ಗಳಿಂದ ಲೈಟಿಂಗ್ಸ್ ಶೋ ನಡೆಸುವ ಮೂಲಕ 5 ಗಿನ್ನಿಸ್ ದಾಖಲೆಗಳನ್ನು (Guinness records) ನಿರ್ಮಿಸಲಾಯಿತು.

ಆಂಧ್ರಪ್ರದೇಶದ (Andhra Pradesh) ಪೂರ್ಣಿಮಾ ಘಾಟ್‌ನ ಕೃಷ್ಣಾ ನದಿಯ ದಡದಲ್ಲಿ ನಡೆದ `ಅಮರಾವತಿ ಡ್ರೋನ್ ಸಮ್ಮೇಳನ 2024’ರಲ್ಲಿ 5,500 ಡ್ರೋನ್‌ಗಳನ್ನು ಹಾರಿಸಿ, ರಾಷ್ಟ್ರಧ್ವಜ, ಭಗವಾನ್ ಬುದ್ಧ ಹೀಗೆ ಹಲವಾರು ರೀತಿಯ ಆಕೃತ್ತಿಗಳನ್ನು ಆಕಾಶದಲ್ಲಿ ರಚಿಸಲಾಯಿತು. ಡ್ರೋನ್ ಪ್ರದರ್ಶನದಲ್ಲಿ ಅತೀ ದೊಡ್ಡ ಸೌರಮಂಡಲ, ಅತೀ ದೊಡ್ಡ ವೈಮಾನಿಕ ಲಾಂಛನ, ಅತೀ ದೊಡ್ಡ ಧ್ವಜ ಪ್ರದರ್ಶನ, ಅತೀ ದೊಡ್ಡ ವಿಮಾನದ ವಿನ್ಯಾಸ ಹಾಗೂ ಅತೀ ದೊಡ್ಡ ಭಾರತದ ಪ್ರಮುಖ ಮೈಲುಗಲ್ಲುಗಳನ್ನು ಪ್ರದರ್ಶಿಸಲಾಯಿತು. ಈ ಮೂಲಕ 5 ಗಿನ್ನಿಸ್ ದಾಖಲೆಗಳನ್ನು ನಿರ್ಮಿಸಲಾಯಿತು.ಇದನ್ನೂ ಓದಿ: ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಆರಗ ಜ್ಞಾನೇಂದ್ರ

ಡ್ರೋನ್ ಪದರ್ಶನದ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಸೇರಿದಂತೆ ಸಾವಿರಾರು ಜನರು ಭಾಗಿಯಾಗಿ, ಡ್ರೋನ್ ಪದರ್ಶನವನ್ನು ಕಣ್ತುಂಬಿಕೊಂಡರು.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಎನ್.ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದಲ್ಲಿ ಇದೊಂದು ಡ್ರೋನ್ ಮುಸ್ಸಂಜೆಯಾಗಿದೆ. ಅದ್ಭುತ ಡ್ರೋನ್ ಪ್ರದರ್ಶನದ ಮೂಲಕ ನಿರ್ಮಾಣಗೊಂಡ 5 ಗಿನ್ನಿಸ್ ವಿಶ್ವ ದಾಖಲೆಗಳನ್ನು ವೀಕ್ಷಿಸಿದ್ದೇನೆ. ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಎಲ್ಲಾ ಸಂಘಟಕರು ಮತ್ತು ಭಾಗವಹಿಸುವವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಇನ್ನೂ ಡ್ರೋನ್ ಪದರ್ಶನದ ಬಳಿಕ ಮಾತನಾಡಿದ ಅವರು, ಡ್ರೋನ್ ಉದ್ಯಮದ ಬೆಳವಣಿಗೆಗೆ ಅನುಕೂಲವಾಗುವಂತೆ, ಕರ್ನೂಲ್ ಜಿಲ್ಲೆಯ ಓರ್ವಕಲ್ಲುನಲ್ಲಿ 300 ಎಕರೆ ಭೂಮಿಯನ್ನು ಘೋಷಿಸಿದ್ದೇನೆ. ಆ ಪ್ರದೇಶದಲ್ಲಿ 35,000 ಡ್ರೋನ್ ಪೈಲಟ್‌ಗಳಿಗೆ ತರಬೇತಿ ನೀಡುವ ಗುರಿ ಹೊಂದಿದ್ದೇವೆ. 15 ದಿನಗಳಲ್ಲಿ ಆಂಧ್ರ ಪ್ರದೇಶ ಸರ್ಕಾರವು ಡ್ರೋನ್‌ಗಳು ಹಾಗೂ ತಂತ್ರಜ್ಞಾನಗಳಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿಕೊಡುವಲ್ಲಿ ಮುಂದಾಗಿದೆ ಎಂದು ಭರವಸೆ ನೀಡಿದರು.

ಇತ್ತೀಚಿಗಷ್ಟೇ ಮುಕ್ತಾಯಗೊಂಡ ಮೈಸೂರು ದಸರಾ ಮಹೋತ್ಸವದಲ್ಲಿಯೂ ಏಕಕಾಲಕ್ಕೆ 3,000 ಡ್ರೋನ್‌ಗಳಿಂದ ಲೈಟಿಂಗ್ಸ್ ಶೋ ನಡೆಸಲಾಗಿತ್ತು.ಇದನ್ನೂ ಓದಿ: ಬೈರೂತ್‌ ಮೇಲೆ ಇಸ್ರೇಲ್‌ ಮತ್ತೊಂದು ದಾಳಿ; ಮೂರೇ ಸೆಕೆಂಡುಗಳಲ್ಲಿ ದೈತ್ಯ ಕಟ್ಟಡಗಳು ಧ್ವಂಸ

Share This Article