`ನಾನು ಪಾರ್ಟ್ ಟೈಂ ನಟಿ’ ಎಂದ ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ..? ಫುಲ್‌ಟೈಂ ಏನ್ ಗೊತ್ತಾ?

Public TV
1 Min Read

ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ (Smriti Irani) ಮತ್ತೆ ಅಭಿನಯಕ್ಕೆ ಮರಳಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಅವರು ನಟಿಯಾಗಿದ್ದರು. 2014ರಿಂದ 2024ರ ವರೆಗೆ ಅನೇಕ ಖಾತೆಯಲ್ಲಿ ಸ್ಮೃತಿ ಇರಾನಿ ಕೇಂದ್ರ ಸಚಿವರಾಗಿದ್ದರು. 2019ರಲ್ಲಿ ಯುಪಿಯ ಅಮೇಥಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಜಯದ ನಗೆ ಬೀರಿದ್ದ ಸ್ಮೃತಿ, 2024ರ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ. ವಿಶೇಷ ಅಂದ್ರೆ ಇದೀಗ ಸ್ಮೃತಿ ಮತ್ತೆ ಅಭಿನಯಕ್ಕೆ ಮರಳಿದ್ದಾರೆ. ಅವರಿಗೆ ಭಾರಿ ಜನಮನ್ನಣೆ ತಂದುಕೊಟ್ಟ ಧಾರಾವಾಹಿ ಮೂಲಕವೇ ಅಭಿನಯಕ್ಕೆ ಮರಳುತ್ತಿದ್ದಾರೆ.

ಕೇಂದ್ರ ಸಚಿವೆಯಾಗಿ ಅಬ್ಬರಿಸಿದ್ದ ಸ್ಮೃತಿ ಇರಾನಿ ಒಮ್ಮೆ ಸೋತಿದ್ದಕ್ಕೆ ಮತ್ತೆ ವಾಪಸ್ ಹೋದ್ರು ಎಂದು ಟೀಕೆ ಮಾಡಲಾಗುತ್ತಿದೆ. ಈ ಬಗ್ಗೆ ಮಾಜಿ ಸಚಿವೆ ಸ್ಮೃತಿ ಇರಾನಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದು, ‘ನಾನು ಫುಲ್‌ಟೈಂ ರಾಜಕಾರಣಿ, ಪಾರ್ಟ್ ಟೈಂ ನಟಿ ಅಷ್ಟೇ’ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್

ಅಂದಹಾಗೆ ಸ್ಮೃತಿ ಇರಾನಿ ಧಾರಾವಾಹಿಗೆ ರೀ-ಎಂಟ್ರಿ ಕೊಟ್ಟಿದ್ದು ಅದರ ಪ್ರೋಮೋ ರಿಲೀಸ್ ಆಗಿದೆ. `ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’ (Kyunki Saas Bhi Kabhi Bahu Thi) ಏಕ್ತಾ ಕಪೂರ್ ನಿರ್ಮಾಣದ ಸಾರ್ವಕಾಲಿಕ ಹಿಟ್ ಧಾರಾವಾಹಿಯಾಗಿತ್ತು. ಅದರ ಪಾರ್ಟ್ 2 ಬರ್ತಿರೋದೇ ವಿಶೇಷ. `ಕ್ಯೂಂಕಿ ಸಾಸ್ ಬಿ ಕಭಿ ಬಹು ಥಿ’2 ಪ್ರೋಮೋ ರಿಲೀಸ್ ಆಗಿದ್ದು, ಇದರ ಮೂಲಕ ಸ್ಮೃತಿ ಇರಾನಿ ಬಣ್ಣಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಸೊಸೆ ಪಾತ್ರ ಮಾಡಿದ್ದ ಸ್ಮೃತಿ ಉತ್ತರ ಭಾರತದೆಲ್ಲೆಡೆ ಜನಪ್ರೀತಿ ಗಳಿಸಿದ್ದವರು. ಇದೀಗ ಅದೇ ಧಾರಾವಾಹಿ ಮೂಲಕ ಸ್ಮೃತಿ ಅಭಿನಯಕ್ಕೆ ಮರಳಿದ್ದಾರೆ. ಇಲ್ಲಿಗೆ ಸ್ಮೃತಿ ರಾಜಕೀಯ ಜೀವನ ಮುಕ್ತಾಯವಾಗಿದೆ ಎಂಬ ಟೀಕೆ ಬರುತ್ತಿದ್ದ ಬೆನ್ನಲ್ಲೇ ಸ್ಮೃತಿ ಇರಾನಿ ಅಭಿನಯ ಪಾರ್ಟ್ ಟೈಂ ಜಾಬ್ ಎನ್ನುವ ಮೂಲಕ ರಾಜಕೀಯ ತೊರೆದಿಲ್ಲ ಅನ್ನೋದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Share This Article