ಆಲ್ಫಾ ಚಿತ್ರದ ರಾವ ರಾವ ಹಾಡಿಗೆ ಭರ್ಜರಿ ರೆಸ್ಪಾನ್ಸ್

2 Min Read

ಗೀತ ಹೊಯ್ಸಳ ಚಿತ್ರಗಳ ಬಳಿಕ ನಿರ್ದೇಶಕ ವಿಜಯ್ (Vijay) ಆಕ್ಷನ್ ಕಟ್ ಹೇಳಿರುವ ಆಲ್ಫಾ ಮೆನ್ ಲವ್ ವೈಲೆನ್ಸ್ (Alpha Men Love Violence) ಚಿತ್ರದ ‘ರಾವ ರಾವ’ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ನಾಯಕ ಹೇಮಂತ್ (Hemanth) ಹಾಡಿನಲ್ಲಿ ಕಾಣಿಸಿಕೊಂಡಿದ್ದು ಹಾಡು ಅದ್ದೂರಿ ಮತ್ತು ಶ್ರೀಮಂತಿಕೆಯಿಂದ ಮೂಡಿಬಂದಿದೆ. ಇದು ಚಿತ್ರದ ಬಗೆಗಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ನಾಯಕ ಹೇಮಂತ್ ಕುಮಾರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಅಲ್ಪಾ ಚಿತ್ರದ ಮೊದಲ ಹಾಡು ರಾವ ರಾವ ಗೀತೆಗೆ ರಾಗನಿಧಿ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ರಾವ ರಾವ ಹಾಡಿಗೆ ಯವ ಪ್ರತಿಭಾನ್ವಿತ ಗೀತ ರಚನೆಕಾರ ನಾಗಾರ್ಜುನ ಶರ್ಮಾ ಪದ ಪೋಣಿಸಿದ್ದು, ಅನೂರಾಗ ಕುಲಕರ್ಣಿ ಹಾಡಿದ್ದಾರೆ.

ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ‘ಆಲ್ಫಾ ಸಿನಿಮಾ ಆಕ್ಷನ್ ಸಿ ಜತೆಗೆ ಅಪ್ಪ ಮತ್ತು ಮಗನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಚಿತ್ರದ ಮೂಲಕ ಹೇಮಂತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.  ಇದನ್ನೂ ಓದಿ:  ಹಿನ್ನೋಟ: ಧುರಂಧರ್‌, ಕಾಂತಾರದಿಂದ ಹೌಸ್‌ಫುಲ್‌ವರೆಗೆ – 2025ರಲ್ಲಿ ತೆರೆಕಂಡ 10 ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾಗಳಿವು!

 

ನಿರ್ದೇಶಕ ವಿಜಯ್ ಮಾತನಾಡಿ ಆಕ್ಷನ್ ಮತ್ತು ಕ್ರೈಂನ ಭಯಾನಕತೆ ಎಷ್ಟಿರುತ್ತೆ ಎನ್ನುವುದು ಚಿತ್ರದ ಪೋಸ್ಟರ್ ನಲ್ಲಿ ಕಾಣಿಸಿಕೊಂಡಿದೆ. ಸಿನಿಮಾದಲ್ಲಿ ಮೂರು ಪಾತ್ರಗಳು ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿವೆ. ಚಿತ್ರದ ಶೀರ್ಷಿಕೆ ಜತೆಗೆ ಮೆನ್ ಲವ್ ವೈಲನ್ಸ್ ಸಬ್ ಟೈಟಲ್ ಕೂಡ ಗಮನ ಸೆಳೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ:  BBK 12 | ಬೆಂಗ್ಳೂರಿಗೆ ಬಂದಾಗ ಇರೋಕೆ ಜಾಗ ಇರಲಿಲ್ಲ – ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸ್ಪಂದನಾ

ಈ ಚಿತ್ರದ ಮೂಲಕ ಆನಂದ್ ಕುಮಾರ್ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು ಎಲ್ ಎ ಬ್ಯಾನರ್‌ನಲ್ಲಿ ಆಲ್ಫಾ ಸಿನಿಮಾ ಮೂಡಿ ಬರುತ್ತಿದೆ. ನಾಯಕ ಹೇಮಂತ್ ಕುಮಾರ್ ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಂಡು ಬಂದಿದ್ದಾರೆ. ನಿರ್ದೇಶಕ ಮತ್ತು ನಟ ರಾಘು ಶಿವಮೊಗ್ಗ ಅವರ ಬಳಿ ನಟನಾ ತಯಾರಿ ನಡೆಸಿದ್ದಾರೆ. ಅರ್ಜುನ್ ಜತೆ ಸಾಹಸ ಅಭ್ಯಾಸ ಮಾಡಿದರೆ ಭೂಷಣ್ ಪತ್ನಿ ಬಳಿ ಡಾನ್ಸ್ ಕಲಿತಿದ್ದಾರೆ. ನಟನೆ, ಫೈಟ್, ಡಾನ್ಸ್ ಜತೆಗೆ ಮಾರ್ಷಲ್ ಆರ್ಟ್ ಕಲಿತು ನಾಯಕನಾಗಲು ಬೇಕಾಗುವ ಎಲ್ಲಾ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಛಾಯಾಗ್ರಹಣ,ಅನೂಪ್ ಸೀಳಿನ್ ಸಂಗೀತ ಮತ್ತು ಮಾಸ್ತಿ ಸಂಭಾಷಣೆ ಇದೆ. ಹೇಮಂತ್‌ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ, ಉಳಿದಂತೆ ಪಾತ್ರವರ್ಗ ಏನೆಲ್ಲ ಇರಲಿದೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.
Share This Article