ರಶ್ಮಿಕಾಗೆ ಆಲ್ ರೌಂಡರ್ ಎಂದ ಅಲ್ಲು ಅರ್ಜುನ್

Public TV
1 Min Read

– ನಿತಿನ್‍ಗೆ ಡಬಲ್ ಅಭಿನಂದನೆ

ಹೈದರಾಬಾದ್: ಟಾಲಿವುಡ್‍ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ನಿತಿನ್‍ಗೆ ಅಭಿನಂದನೆ ತಿಳಿಸಿದ್ದಾರೆ.

ತೆಲುಗು ನಟ ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಭೀಷ್ಮ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ ನಿತಿನ್ ಮತ್ತು ರಶ್ಮಿಕಾ ಮಂದಣ್ಣಗೆ ಅಲ್ಲು ಅರ್ಜುನ್ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲು ಅರ್ಜುನ್ ಎರಡು ಟ್ವೀಟ್ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದಾರೆ.

ಮೊದಲಿಗೆ “ನಟ ನಿತಿನ್‍ಗೆ ಡಬಲ್ ಅಭಿನಂದನೆಗಳು. ಈಗ ನಿಮ್ಮ ಮದುವೆ ಸಂಭ್ರಮ-ಆಚರಣೆಗೆ ಡಬಲ್ ಜೋಷ್ ಸಿಗಲಿದೆ. ಒಳ್ಳೆಯ ಸಮಯಕ್ಕೆ ಒಳ್ಳೆಯದ್ದೇ ಆಗಿದೆ. ನಿಜಕ್ಕೂ ಈಗ ನಿಮಗೆ ತುಂಬಾ ಖುಷಿಯಾಗುತ್ತಿದೆ. ಇಡೀ ‘ಭೀಷ್ಮ’ ಸಿನಿಮಾ ತಂಡವನ್ನು ನಾನು ಅಭಿನಂದಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿರುವ ಅಲ್ಲು ಅರ್ಜುನ್ “ಕಮರ್ಶಿಯಲ್ ಎಮೋಷನಲ್ ಎಂಟರ್ ಟೈನರ್ ನೀಡಿದ ನಿರ್ದೇಶಕ ವೆಂಕಿ ಅವರಿಗೆ ಅಭಿನಂದನೆಗಳು. ಇನ್ನೂ ಆಲ್ ರೌಂಡರ್ ರಶ್ಮಿಕಾ ಮಂದಣ್ಣ  ಮತ್ತು ಯಶಸ್ವಿ ನಿರ್ಮಾಪಕ ವಂಶಿಗೆ ಶುಭಾಶಯಗಳು. ನಿಮಗೆ 2020ರ ಜನವರಿ ಮತ್ತು ಫೆಬ್ರವರಿ ನಿಜಕ್ಕೂ ಉತ್ತಮವಾಗಿದೆ” ಎಂದು ಹೇಳಿ ಎಲ್ಲರಿಗೂ ಮತ್ತೊಮ್ಮೆ ಅಭಿನಂದನೆ ತಿಳಿಸಿದ್ದಾರೆ.

ವೆಂಕಿ ಕುಡುಮುಲ ನಿರ್ದೇಶನದ ಸಿನಿಮಾ ‘ಭೀಷ್ಮ’ ಶಿವರಾತ್ರಿ ಹಬ್ಬದ ಪ್ರಯುಕ್ತ (ಫೆಬ್ರವರಿ 21) ರಂದು ಬಿಡುಗಡೆ ಆಗಿತ್ತು. ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು ನಿತಿನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಸ್ಯಾಂಡಲ್‍ವುಡ್ ಮಾತ್ರವಲ್ಲದೇ ತೆಲುಗು ಮತ್ತು ತಮಿಳಿನಲ್ಲೂ ಅಭಿನಯಿಸುವ ಮೂಲಕ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನೂ ನಿತಿನ್ ತಮ್ಮ ಬಹುದಿನದ ಗೆಳತಿ ಶಾಲಿನಿ ಅವರ ಕೈಹಿಡಿಯಲಿದ್ದಾರೆ. ಸುಮಾರು ನಾಲ್ಕೈದು ವರ್ಷದಿಂದ ಶಾಲಿನಿ ಹಾಗೂ ನಿತಿನ್ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಈಗ ತಮ್ಮ ಗೆಳತಿಯ ಜೊತೆ ದಾಂಪತ್ಯ ಜೀವನ ಆರಂಭಿಸಲು ನಿತಿನ್ ನಿರ್ಧರಿಸಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲೂ ತಿಳಿಸಿ, ಹಿರಿಯರ ಸಮ್ಮತಿ ಪಡೆದು ಈ ಜೋಡಿ ಮದುವೆಯಾಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *