ಕೋಟಿ ಕೊಡುತ್ತೇವೆ ಎಂದರೂ ಫ್ಯಾನ್ಸ್‌ಗಾಗಿ ಜಾಹೀರಾತು ನಿರಾಕರಿಸಿದ ಅಲ್ಲು ಅರ್ಜುನ್

Public TV
2 Min Read

ಸಿನಿ ಜಗತ್ತಿನಲ್ಲಿ ನಟ, ನಟಿಯರು ಸ್ಟಾರ್ ಆಗುತ್ತಿದ್ದಂತೆಯೇ ಅವರಿಗೆ ಸಿನಿಮಾ ಆಫರ್‌ಗಳ ಜೊತೆ, ಜೊತೆಗೆ ಜಾಹೀರಾತುಗಳಲ್ಲಿ ಅಭಿನಯಿಸಲು ಕೂಡ ಅವಕಾಶಗಳ ಸುರಿಮಳೆಯೇ ಆಗುತ್ತದೆ. ಎಷ್ಟೋ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯರು ನಟಿಸಿರುವ ಪ್ರಾಡಕ್ಟ್ ಎಂದು ಹೆಚ್ಚಾಗಿ ಉಪಯೋಗಿಸಲು ಬಯಸುತ್ತಾರೆ. ಇದರಿಂದ ಪ್ರಾಡಕ್ಟ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಡಿಮ್ಯಾಂಡ್ ಬರುವುದರ ಜೊತೆಗೆ ಕಲಾವಿದರಿಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಅನೇಕ ತಾರೆಯರು ಒಂದೇ, ಒಂದು ಜಾಹೀರಾತಿನಲ್ಲಿ ಅಭಿನಯಿಸಲು ಕೋಟಿ, ಕೋಟಿ ಸಂಭಾವನೆಯನ್ನು ಪಡೆಯುವುದರ ಜೊತೆ ಜನಪ್ರಿಯತೆಯನ್ನು ಸಹ ಪಡೆಯುತ್ತಾರೆ. ಜಾಹೀರಾತಿನಿಂದ ಇಷ್ಟೆಲ್ಲಾ ಲಾಭವಿದ್ದರೂ ಟಾಲಿವುಡ್ ನಟ ಅಲ್ಲು ಅರ್ಜುನ್ ಮಾತ್ರ ದುಬಾರಿ ಸಂಭಾವನೆ ನೀಡುತ್ತೇವೆ ಎಂದರೂ ಜಾಹೀರಾತುವೊಂದಕ್ಕೆ ನೋ ಎಂದಿದ್ದಾರೆ.

ಹೌದು, ಕೆಲವು ವರ್ಷಗಳ ಹಿಂದೆ ಮಾಲಿವುಡ್ ಬೆಡಗಿ ನಟಿ ಸಾಯಿ ಪಲ್ಲವಿ ಖ್ಯಾತ ಕಂಪನಿಯೊಂದರ ಫೇರ್‍ನೆಸ್ ಕ್ರೀಮ್ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಹೇಳುವ ಮೂಲಕ 2 ಕೋಟಿ ರೂ. ಸಂಭಾವನೆಯನ್ನು ತಿರಸ್ಕರಿಸಿದ್ದರು. ಇದೀಗ ಅದೇ ರೀತಿ ಅಲ್ಲು ಅರ್ಜುನ್ ಅವರು ಫೇಮಸ್ ತಂಬಾಕು ಜಾಹೀರಾತಿನಲ್ಲಿ ಅಭಿನಯಿಸಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಭಾರತ ಶ್ರೇಷ್ಠ ವೈವಿಧ್ಯತೆ ದೇಶ, ಎಲ್ಲರ ಬಗ್ಗೆಯೂ ಸಹಿಷ್ಣುತೆ ಹೊಂದಬೇಕು – ಅಲಹಾಬಾದ್ ಹೈಕೋರ್ಟ್

ತಂಬಾಕು ಬ್ರಾಂಡ್ ಅಂಬಾಸಿಡರ್ ಆಗಲು ಭಾರೀ ಮೊತ್ತವನ್ನು ನೀಡುತ್ತೇವೆ ಎಂದರೂ ವೈಯಕ್ತಿಕವಾಗಿ ತಾವು ತಂಬಾಕು ಸೇವಿಸದ ಕಾರಣ ಈ ಜಾಹೀರಾತಿನಲ್ಲಿ ಅಭಿನಯಿಸುವುದಿಲ್ಲ. ಅಲ್ಲದೇ ತಮ್ಮ ಅಭಿಮಾನಿಗಳು ಜಾಹೀರಾತನ್ನು ವೀಕ್ಷಿಸಿ ತಂಬಾಕು ಸೇವಿಸುವುದನ್ನು ಪ್ರಾರಂಭಿಸುತ್ತಾರೆ. ತಂಬಾಕು ವ್ಯಸನರಾಗಬಹುದು ಹೀಗಾಗಿ ಈ ಜಾಹೀರಾತುವಿನಲ್ಲಿ ಬಿಲ್‍ಕುಲ್ ಅಭಿನಯಿಸುವುದಿಲ್ಲ ಎಂದು ದೂರಸರಿದಿದ್ದಾರೆ ಎನ್ನಲಾಗುತ್ತಿದೆ. ಅಲ್ಲು ಅರ್ಜುನ್ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಕುಪ್ವಾರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶ

ಸಾಮಾನ್ಯವಾಗಿ ಯಾವುದೇ ಸಿನಿಮಾ ಪ್ರಾರಂಭಕ್ಕೂ ಮುನ್ನ ಧೂಮಪಾನ, ಮದ್ಯಪಾನ, ತಂಬಾಕು ಸೇವೆನೆ ಆರೋಗ್ಯಕ್ಕೆ ಹಾನಿಕಾರಕ ಹಾಗಾಗಿ ಇವುಗಳನ್ನು ಯಾರು ಸೇವಿಸಬಾರದು ಎಂಬ ಸಂದೇಶವನ್ನು ನೀಡಲಾಗುತ್ತದೆ. ಸದ್ಯ ಭಾರತೀಯ ಚಲನಚಿತ್ರೋದ್ಯಮದಲ್ಲಿ ಈ ಬದಲಾವಣೆ ಬಹಳ ಒಳ್ಳೆಯದಾಗಿದೆ. ಆದರೆ ಅನೇಕ ಸ್ಟಾರ್ ನಟರು ಇಂತಹ ಜಾಹೀರಾತುವಿನಲ್ಲಿ ಅಭಿನಯಿಸಲು ಹಿಂಜರಿಯದೇ ಇರುವುದನ್ನು ಸಹ ನಾವು ಕಾಣಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *