‘ಪುಷ್ಪ 2’ ಕಾಲ್ತುಳಿತ ಪ್ರಕರಣ: 9 ವರ್ಷದ ಬಾಲಕನ ಬ್ರೈನ್ ಡೆಡ್

By
2 Min Read

‘ಪುಷ್ಪ 2′ (Pushpa 2) ಪ್ರೀಮಿಯರ್ ಶೋ ವೇಳೆ ಕಾಲ್ತುಳಿತದಲ್ಲಿ ಸಾವನಪ್ಪಿದ ಮಹಿಳೆಯ 9 ವರ್ಷದ ಮಗ ಶ್ರೀತೇಜಾಗೆ ಬ್ರೈನ್‌ ಡೆಡ್ ಆಗಿದ್ದು, ಇದರಿಂದ ಅಲ್ಲು ಅರ್ಜುನ್‌ಗೆ (Allu Arjun) ಮತ್ತೊಂದು ಸಂಕಷ್ಟ ಎದುರಾಗಿದೆ.  ಈ ಕುರಿತು ಹೈದ್ರಾಬಾದ್ ಸಿಟಿ ಪೊಲೀಸ್ ಕಮಿಷನರ್ ಸಿ.ವಿ ಆನಂದ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಶಿವಣ್ಣ ಫೈಟರ್, ಅವರು ಯಾವತ್ತೂ ಕುಗ್ಗಿಲ್ಲ, ಕುಗ್ಗೋದು ಇಲ್ಲ: ಸುದೀಪ್

ಬಾಲಕ ದಾಖಲಾಗಿದ್ದ ಕಿಮ್ಸ್‌ ಆಸ್ಪತ್ರೆಗೆ ಇಂದು(ಡಿ.18) ಪೊಲೀಸ್‌ ಕಮಿಷನರ್‌ ಭೇಟಿ ನೀಡಿದ್ದರು. ಬಳಿಕ ಈ ಕುರಿತು ಪೊಲೀಸ್ ಕಮಿಷನರ್ ಸಿ.ವಿ ಆನಂದ್ ಮಾತನಾಡಿ, ಕಾಲ್ತುಳಿತದ ಸಂದರ್ಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕ ಶ್ರೀತೇಜ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಇದೀಗ ಬಾಲಕನ ಮೆದುಳು ನಿಷ್ಕ್ರಿಯಗೊಂಡಿದೆ. ಸದ್ಯ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ದೀರ್ಘಾವಧಿಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀತೇಜಾ ಅವರ ಆರೋಗ್ಯದ ಕುರಿತು ಶೀಘ್ರದಲ್ಲೇ ವೈದ್ಯಕೀಯ ಬುಲೆಟಿನ್ ಅನ್ನು ಸಹ ವೈದ್ಯರು ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಪುಷ್ಪ 2’ ರಿಲೀಸ್ ವೇಳೆ, ಕಾಲ್ತುಳಿತಕ್ಕೆ ಮೃತ ರೇವತಿ ಪುತ್ರ ಶ್ರೀತೇಜಾ ಕೂಡ ತೀವ್ರ ಗಾಯಗೊಂಡಿದ್ದ, ಈ ಹಿನ್ನೆಲೆ ತುರ್ತು ನಿಗಾ ಘಟಕದಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಬಾಲಕನ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇದರಿಂದ ಅಲ್ಲು ಅರ್ಜುನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗುದ ಸಾಧ್ಯತೆ ಇದೆ.

ಈ ಸಿನಿಮಾ ಪ್ರೀಮಿಯರ್ ಕಾಲ್ತುಳಿತದಿಂದ ಮಹಿಳೆ ಸಾವನ್ನಪ್ಪಿದ ಪ್ರಕರಣದ ಸಂಬಂಧ ಡಿ.13ರಂದು ಅಲ್ಲು ಅರ್ಜುನ್‌ರನ್ನು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ಮಧ್ಯಂತರ ಜಾಮೀನಿನ ಮೇಲೆ ಅಲ್ಲು ಅರ್ಜುನ್ ಹೊರಬಂದಿದ್ದಾರೆ.

Share This Article