ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಸಿಗಲಿದೆ ಸರ್ಪ್ರೈಸ್‌

Public TV
1 Min Read

ಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ 2 (Pushpa 2) ಸಿನಿಮಾ ಇದೇ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಆದರೆ ಸಿನಿಮಾ ತಂಡದಿಂದ ಟೀಸರ್, ಟ್ರೈಲರ್ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸೈಲೆಂಟ್ ಆಗಿರುವ ಪುಷ್ಪ 2 ಚಿತ್ರತಂಡ ಈಗ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಡಲು ರೆಡಿಯಾಗಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನವೇ ಫ್ಯಾನ್ಸ್‌ಗೆ ಸಿಗಲಿದೆ ಸಿಹಿಸುದ್ದಿ.

2021ರಲ್ಲಿ ‘ಪುಷ್ಪ’ ಪಾರ್ಟ್ 1 ಸಿನಿಮಾ ರಿಲೀಸ್ ಆಗಿ ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇದರ ಪಾರ್ಟ್ 2 ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದೆ. ‘ಪುಷ್ಪ 2’ ಬಗ್ಗೆ ಏನು ಅಪ್‌ಡೇಟ್ ಸಿಗದೇ ಅಭಿಮಾನಿಗಳು ನಿರಾಸೆ ಆಗಿದ್ದಾರೆ. ಹೀಗಿರುವಾಗ ಅಲ್ಲು ಫ್ಯಾನ್ಸ್ ಥ್ರಿಲ್ ಆಗುವಂತಹ ಚಿತ್ರದ ಬಗ್ಗೆ ಅಪ್‌ಡೇಟ್ ಸಿಕ್ಕಿದೆ.

ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡದವರು ಸಿದ್ಧತೆ ಮಾಡಿಕೊಂಡಿದ್ದಾರೆ. ಏಪ್ರಿಲ್ 8ರಂದು ‘ಪುಷ್ಪ 2’ ಟೀಸರ್ ಅನಾವರಣ ಆಗಲಿದೆ. ಅಂದು ಅಲ್ಲು ಅರ್ಜುನ್ ಅವರ ಜನ್ಮದಿನವಾಗಿದ್ದು, ಈ ವಿಶೇಷ ದಿನದಂದು ಟೀಸರ್ ರಿಲೀಸ್ ಮಾಡುವುದು ಚಿತ್ರತಂಡದವರ ಲೆಕ್ಕಾಚಾರ. ಇದನ್ನೂ ಓದಿ: ಪೃಥ್ವಿರಾಜ್ ಸುಕುಮಾರನ್ ನಟನೆಯನ್ನು ಕೊಂಡಾಡಿದ ಲೆಜೆಂಡರಿ ಡೈರೆಕ್ಟರ್ ಮಣಿರತ್ನಂ

ಅಂದಹಾಗೆ, ಪುಷ್ಪ ಸಿನಿಮಾ 2 ಭಾಗಗಳಲ್ಲಿ ಅಲ್ಲ. 3 ಭಾಗಗಳಾಗಿ ಬರಲಿದೆ. ಪುಷ್ಪ ಪಾರ್ಟ್ 3 ಬರುವ ಬಗ್ಗೆ ಕೂಡ ಇತ್ತೀಚೆಗೆ ಅಲ್ಲು ಅರ್ಜುನ್ ಮಾಹಿತಿ ನೀಡಿದ್ದಾರೆ. ಹಾಗಾಗಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ.

Share This Article