ಅಲ್ಲು ಅರ್ಜುನ್ ಸಿನಿ ಜರ್ನಿಗೆ 20 ವರ್ಷ: ಫ್ಯಾನ್ಸ್‌ಗೆ ಕೃತಜ್ಞತೆ ಸಲ್ಲಿಸಿದ ನಟ

Public TV
2 Min Read

ಟಾಲಿವುಡ್ (Tollywood) ‘ಪುಷ್ಪ’ (Pushpa) ಸ್ಟಾರ್ ಅಲ್ಲು ಅರ್ಜುನ್ ಬಣ್ಣದ ಬದುಕಿಗೆ ಕಾಲಿಟ್ಟು ಮಾರ್ಚ್ 28ಕ್ಕೆ 20 ವರ್ಷಗಳಾಗಿದೆ. 2 ದಶಕಗಳ ಕಾಲ ಪ್ರೀತಿ ಕೊಟ್ಟಿದ್ದಕ್ಕೆ ಅಲ್ಲು ಅರ್ಜುನ್ (Allu Arjun), ತಮ್ಮ ಅಭಿಮಾನಿಗಳಿಗೆ ವಿಶೇಷವಾಗಿ ಕೃತಜ್ಞತೆ ತಿಳಿಸಿದ್ದಾರೆ.

ಬಾಲನಟನಾಗಿ ನಟಿಸಿದ್ದ ಅಲ್ಲು ಅರ್ಜುನ್, 2003ರಲ್ಲಿ ‘ಗಂಗೋತ್ರಿ’ ಸಿನಿಮಾ ಮೂಲಕ ನಾಯಕನಾಗಿ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟರು. ಆರ‍್ಯ, ಬನ್ನಿ, ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟರು. ಬಳಿಕ ‘ಪುಷ್ಪ’ ಚಿತ್ರದಿಂದ ವಿಶ್ವದೆಲ್ಲೆಡೆ ಸದ್ದು ಮಾಡಿದ್ದರು. ‘ಪುಷ್ಪ’ ಸ್ಟಾರ್ ಆಗಿ ಮಿಂಚಿದ್ದರು. ಈ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುವ ಮೂಲಕ ಕಳೆದ ವರ್ಷ ದಾಖಲೆ ಮಾಡಿದೆ.

ಟಾಲಿವುಡ್‌ನಲ್ಲಿ 20 ವರ್ಷ ಪೂರೈಸಿದ್ದಕ್ಕಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ನಾನು ಇಂದು 20 ವರ್ಷಗಳನ್ನು ಪೂರೈಸಿದ್ದೇನೆ. ನನಗೆ ಸಾಕಷ್ಟು ಪ್ರೀತಿ ಸಿಕ್ಕಿದೆ. ಚಿತ್ರರಂಗದ ಎಲ್ಲಾ ಆಪ್ತರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ತೋರಿದ ಪ್ರೀತಿಯಿಂದಲೇ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ಅವರಿಗೆ ಎಂದೆಂದಿಗೂ ಚಿರಋಣಿ ಎಂದು ಅಲ್ಲು ಅರ್ಜುನ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಐಕಾನ್ ಆಗಿ ಗಾಯಕ ಮೋಹನ್, ನಟ ಮಾಸ್ಟರ್ ಆನಂದ್ ಆಯ್ಕೆ

‌’ಪುಷ್ಪ’ ಸೂಪರ್ ಸಕ್ಸಸ್ ನಂತರ ಇದೀಗ ‘ಪುಷ್ಪ 2’ ಸಿನಿಮಾದ ಶೂಟಿಂಗ್‌ನಲ್ಲಿ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನಂತರ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Share This Article