ಅಲ್ಲು ಅರ್ಜುನ್, ಲೋಕೇಶ್ ಕಾಂಬಿನೇಷನ್ ಅದ್ಧೂರಿ ಬಜೆಟ್ ಚಿತ್ರ..!

1 Min Read

ಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ಲೋಕೇಶ್ ಕನಗರಾಜ್ (Lokesh Kanagaraj) ಕಾಂಬಿನೇಷನ್‍ನಲ್ಲಿ ಸಿನಿಮಾ ಬರೋದು ಕನ್ಫರ್ಮ್ ಆಗಿದೆ. ಅಲ್ಲು ಅರ್ಜುನ್ ಸದ್ಯ ಅಟ್ಲಿ ಜೊತೆಗೆ ಇನ್ನೂ ಹೆಸರಿಡದ ಎಎ22 (AA23) ಸಿನಿಮಾ ಮಾಡುತ್ತಿದ್ದಾರೆ. ಸೂಪರ್‌ಮ್ಯಾನ್ ಕಾನ್ಸೆಪ್ಟ್ ಈ ಸಿನಿಮಾ ಬಳಿಕ ಲೋಕೇಶ್ ಜೊತೆ ಅಲ್ಲು ಅರ್ಜುನ್ ಕೈ ಜೋಡಿಸಲಿದ್ದಾರಂತೆ.

ಅಂದಹಾಗೆ ಈ ಸಿನಿಮಾಗೆ ಎಎ23 ಅನ್ನೋ ವರ್ಕಿಂಗ್ ಟೈಟಲ್‍ನಲ್ಲಿ ಸಿನಿಮಾ ಆರಂಭ ಮಾಡಲು ಭರ್ಜರಿ ಪ್ಲ್ಯಾನ್ ಮಾಡಲಾಗಿದೆಯಂತೆ. ಇನ್ನು ಈ ಸಿನಿಮಾ ಅದ್ಧೂರಿ ಮೇಕಿಂಗ್‍ನಲ್ಲಿ ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿದ್ದು, ಅಲ್ಲು ಅರ್ಜುನ್‍ಗೆ 75ಕೋಟಿ ಸಂಭಾವನೆಯನ್ನ ಲೋಕೇಶ್ ಕನಗರಾಜ್ ಆಫರ್ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಇದನ್ನೂ ಓದಿ: ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ FIR

ಅಲ್ಲು ಅರ್ಜುನ್ ಪುಷ್ಪಾ-2 ಸಿನಿಮಾದ ಬಿಗ್ ಹಿಟ್‍ನ ನಂತರ ನಿರ್ದೇಶಕ ಅಟ್ಲಿ ಜೊತೆಗೆ ಸಿನಿಮಾ ಮಾಡ್ತಿದ್ದಾರೆ. ಇದಾದ ಬಳಿಕ ಪುಷ್ಪ ಡೈರೆಕ್ಟರ್ ಸುಕುಮಾರ್ ಜೊತೆ ಪುಷ್ಪಾ-3 ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದ್ರೆ ಕನಗರಾಜ್ ಜೊತೆ ಚಿತ್ರ ಮಾಡಲಿದ್ದಾರೆ ಎನ್ನಲಾಗ್ತಿದೆ. ಸೂಪರ್‍ಸ್ಟಾರ್ ಜೊತೆಗಿನ ಕೂಲಿ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಚಿತ್ರ ಮಾಡುವ ತಯಾರಿಯಲ್ಲಿ ಕನಗರಾಜ್ ಇದ್ದಾರೆ. ಇದನ್ನೂ ಓದಿ: ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್

Share This Article