ಫ್ಯಾನ್ಸ್‌ಗೆ ಸಿಹಿಸುದ್ದಿ- ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ ‘ಪುಷ್ಪ 2’ ಟೀಮ್

By
1 Min Read

ಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಚಿತ್ರದ ಕುರಿತು ಫ್ಯಾನ್ಸ್ ಖುಷಿಪಡುವಂತಹ ಸಿಹಿಸುದ್ದಿ ಸಿಕ್ಕಿದೆ. ಚಿತ್ರದ ಮತ್ತೆ ರಿಲೀಸ್ ಡೇಟ್ ಬದಲಾಯಿಸಿ ಒಂದು ದಿನ ಮುಂಚಿತವಾಗಿಯೇ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ. ಇದನ್ನೂ ಓದಿ:‘ಅಮರನ್‌’ ಟ್ರೈಲರ್ ರಿಲೀಸ್- ಮೇಜರ್ ಮುಕುಂದ್ ವರದರಾಜನ್ ಜೀವನಗಾಥೆಯಲ್ಲಿ ಶಿವಕಾರ್ತಿಕೇಯನ್

ಆ.15ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಿರಲಿಲ್ಲ. ಆ ನಂತರ ಡಿ.6ರಂದು ಸಿನಿಮಾ ಬರೋದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಈ ಆ ಡೇಟ್‌ಗೂ ಸಿನಿಮಾ ರಿಲೀಸ್ ಆಗ್ತಿಲ್ಲ. ಬದಲಾಗಿ ಈ ವರ್ಷದ ಅಂತ್ಯ ಡಿಸೆಂಬರ್ 5ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಒಂದು ದಿನ ಮುಂಚಿತವಾಗಿ ಪುಷ್ಪರಾಜ್, ಶ್ರೀವಲ್ಲಿ ದರ್ಶನ ನೀಡಲಿದ್ದಾರೆ. ಈ ಕುರಿತು ಇಂದಿನ ಪ್ರೆಸ್ ಮೀಟ್‌ನಲ್ಲಿ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ.

ಸಿನಿಮಾ ಮುಂದಕ್ಕೆ ಹಾಕದೆ ಒಂದು ದಿನ ಮುಂಚಿತವಾಗಿ ‘ಪುಷ್ಪ 2’ ಬರುತ್ತಿರುವ ಸುದ್ದಿ ಕೇಳಿಯೇ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.  ಅಲ್ಲು ಅರ್ಜುನ್ (Allu Arjun) ಅಬ್ಬರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Share This Article