ಬೆಂಗಳೂರು: ಪಾರ್ಟಿ ಮಾಡ್ತಿದ್ದ ಜಾಗಕ್ಕೆ ಪೊಲೀಸರು ಬಂದಿದ್ದನ್ನು ಕಂಡು ಭಯಗೊಂಡು ಯುವತಿಯೊಬ್ಬರು ಹೋಟೆಲ್‌ನ ನಾಲ್ಕನೇ ಫ್ಲೋರ್‌ನಿಂದ ಹಾರಿ ಕೆಳಗೆ ಬಿದ್ದಿರುವ ಘಟನೆ ನಗರದ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಇದೇ ವೇಳೆ ಪೊಲೀಸರು ಲಂಚ ಕೇಳಿದ್ರು, ಬೆದರಿಕೆ ಹಾಕಿದ್ರು ಅದಕ್ಕೆ ಯುವತಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ರು ಅನ್ನೋ ಆರೋಪ ಕೂಡ ಕೇಳಿಬಂದಿದೆ
ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿರುವ ಖಾಸಗಿ ಹೋಟೆಲ್‌ಗೆ ಕಳೆದ ಶನಿವಾರ ರಾತ್ರಿ ನಾಲ್ವರು ಯುವತಿಯರು, ನಾಲ್ವರು ಯುವಕರು ಬಂದು ನಾಲ್ಕು ಪ್ರತ್ಯೇಕ ರೂಮ್‌ಗಳನ್ನು ಬುಕ್ ಮಾಡಿದ್ರು. ಆ ದಿನ ಎಲ್ಲರೂ ಸೇರಿಕೊಂಡು ಕುಡಿದು, ಕುಣಿದು ಮೋಜು ಮಸ್ತಿ ಮಾಡಿದ್ದರು. ಬೆಳಗಿನ ಜಾವದ ತನಕ ಪಾರ್ಟಿ ನಡೆಯುತ್ತಿದ್ದ ಕಾರಣಕ್ಕೆ ಸ್ಥಳೀಯರು 112ಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.ಇದನ್ನೂ ಓದಿ: Ramanagara | ಕೌಟುಂಬಿಕ ಕಲಹ – ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ
ಮಾಹಿತಿ ತಿಳಿದ ಹೆಚ್‌ಎಎಲ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ರೂಂ ಬಾಗಿಲು ತಟ್ಟಿದ್ರು. ಪೊಲೀಸರು ಒಳಗೆ ಹೋಗ್ತಿದ್ದಂತೆ ಭಯಗೊಂಡ ಯುವತಿ ವೈಷ್ಣವಿ ತಾನು ಉಳಿದುಕೊಂಡಿದ್ದ ನಾಲ್ಕನೇ ಫ್ಲೋರ್‌ನ ಬಾಲ್ಕನಿಯಿಂದ ಕೆಳಗೆ ಹಾರಿ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾರೆ.
ಇನ್ನೂ ಪೊಲೀಸರು ರೂಮ್ ಒಳಗೆ ಬಂದ ವೇಳೆ ಅಲ್ಲಿದ್ದವರಿಗೆ ಧಮ್ಕಿ ಹಾಕಿದ್ದಾರೆ. ಇದು ಕೇಸ್ ಆಗುತ್ತೆ, ನಿಮ್ಮನ್ನ ಅರೆಸ್ಟ್ ಮಾಡ್ತಿವಿ. ಕೇಸ್ ಬೇಡ ಅಂದರೆ ದುಡ್ಡು ಕೊಡಬೇಕು ಅಂದಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ಯುವಕರು ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ದುಡ್ಡು ಹಾಕೋಕೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆನ್‌ಲೈನ್ ಮೂಲಕ ಬೇಡ ಕ್ಯಾಶ್ ನೀಡುವಂತೆ ತಾಕೀತು ಮಾಡಿದ್ರಂತೆ. ಒಬ್ಬ ಯುವಕ ಎಟಿಎಂಗೆ ಹಣ ತರೋಕೆ ಹೋದ ವೇಳೆ ಯುವತಿಗೆ ಪೊಲೀಸರು ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಹೆದರಿದ ಯುವತಿ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪಾರ್ಟಿಯಲ್ಲಿದ್ದವರು ಆರೋಪಿಸಿದ್ದಾರೆ.
ಸದ್ಯ ಪೊಲೀಸರು ಎರಡು ಆಯಾಮದಿಂದಲೂ ತನಿಖೆ ನಡೆಸುತ್ತಿದ್ದು, ಹೋಟೆಲ್‌ನವರ ನಿರ್ಲಕ್ಷ್ಯದಿಂದ ದುರಂತ ನಡೆದಿದೆ ಎಂದು ಹೋಟೆಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಮಸ್ತ್ ಮಲೈಕಾ ಜೊತೆ ಕಿಚ್ಚ ಸಖತ್ ಡಾನ್ಸ್

