ಯಾದಗಿರಿ: ಪತಿಯನ್ನು ಸ್ಲೋ ಪಾಯ್ಸನ್ ನೀಡಿ ಪತ್ನಿ ಹತ್ಯೆ ಮಾಡಿರುವ ಘಟನೆ ಯಾದಗಿರಿಯ (Yadagiri) ಗುರುಮಠಕಲ್‌ನ ಗಡ್ಡಿ ಮೊಹಲ್ಲಾನಲ್ಲಿ ನಡೆದಿದೆ.
ಮೃತನನ್ನು ಮಹಮ್ಮದ್ ಅಲಿ ಎಂದು ಗುರುತಿಸಲಾಗಿದೆ. ಆತನ ಪತ್ನಿಯ ವಿರುದ್ಧ ಸ್ಲೋ ಪಾಯ್ಸನ್ ನೀಡಿದ ಆರೋಪ ಕೇಳಿಬಂದಿದೆ.ಇದನ್ನೂ ಓದಿ: ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಸನ್ಮಾನಿಸಿದ ಸಿಎಂ
ಕಳೆದ ಒಂದೂವರೆ ವರ್ಷದ ಹಿಂದೆ ಗಂಡನಿಗೆ ಕೆಮ್ಮು ಇದೆ ಎಂದು ಸ್ಲೋ ಪಾಯ್ಸನ್ ಹಾಕಿ ಹೆಂಡತಿ ಕೊಲೆ ಮಾಡಿದ್ದಳು. ಆದರೆ ಗಂಡ ಸಾಯುವ ಮುನ್ನ ಸೆಲ್ಫೀ ವಿಡಿಯೋ ಮಾಡಿ, ತನ್ನ ತಮ್ಮ ಮಹ್ಮದ್ ಇಕ್ಬಾಲ್‌ಗೆ ಕಳುಹಿಸಿದ್ದರು. ವಿಡಿಯೋದಲ್ಲಿ ನನಗೆ ಸರಿಯಾಗಿ ಆಸ್ಪತ್ರೆಗೆ ತೋರಿಸುತ್ತಿಲ್ಲ, ಊಟನೂ ಹಾಕ್ತಿಲ್ಲ, ವಿಷ ಹಾಕಿರುವ ಅನುಮಾನವಿದೆ ಎಂದು ತಿಳಿಸಿದ್ದರು.
ಈ ಕುರಿತು ಮಹಮ್ಮದ್ ಅಲಿ ತಾಯಿ ಗುರುಮಠಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಹೂತ್ತಿದ್ದ ಶವವನ್ನು ತೆಗೆದು ಪೊಲೀಸರು ಪರಿಶೀಲನೆ ನಡೆಸಿದ್ದರು. ಜೊತೆಗೆ ವಿಡಿಯೋ ಸಾಕ್ಷಿಯಿರುವ ಬಗ್ಗೆಯೂ ಗೊತ್ತಿತ್ತು. ಆದರೆ ಇಷ್ಟೆಲ್ಲ ಇದ್ದರೂ ಪೊಲೀಸರು ಮಾತ್ರ ಪತ್ನಿಯನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ನ್ಯಾಯಕ್ಕಾಗಿ ವೃದ್ಧ ತಾಯಿ, ತಮ್ಮ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.ಇದನ್ನೂ ಓದಿ: RTO ಕಣ್ತಪ್ಪಿಸಿ ಓಡಾಡ್ತಿದ್ದ ಫೆರಾರಿ ಕಾರು ಸೀಜ್ – 1.58 ಕೋಟಿ ತೆರಿಗೆ ಕಟ್ಟಲು ಸಂಜೆವರೆಗೆ ಡೆಡ್‌ಲೈನ್ ಫಿಕ್ಸ್