ಪೊಲೀಸ್ ಅಧಿಕಾರಿಯಿಂದ ಕಿರುಕುಳ ಆರೋಪ – ನಿದ್ರೆ ಮಾತ್ರೆ ಸೇವಿಸಿ ಯೂಟ್ಯೂಬರ್ ಆತ್ಮಹತ್ಯೆ ಯತ್ನ

1 Min Read

ಬೀದರ್: ಪೊಲೀಸ್ ಅಧಿಕಾರಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಯೂಟ್ಯೂಬರ್ (Youtuber) ಒಬ್ಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್ ನಲ್ಲಿ ನಡೆದಿದೆ.

ಬೀದರ್ ಎಸ್‌ಪಿ ಸೇರಿ ಜಿಲ್ಲೆಯ ಪೊಲೀಸರಿಂದ (Bidar Police) ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿ ಫೇಸ್‌ಬುಕ್‌ ಲೈವ್‌ನಲ್ಲೇ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಇದನ್ನೂ ಓದಿ: ದೆಹಲಿಯಲ್ಲಿ ಮರ್ಯಾದಾ ಹತ್ಯೆ – ಸಂಬಂಧಿಯನ್ನು ಪ್ರೀತಿಸಿದ್ದಕ್ಕೆ ಕುಟುಂಬಸ್ಥರಿಂದಲೇ 19ರ ಯುವತಿಯ ಕೊಲೆ ಶಂಕೆ

ಬೀದರ್ ಎಸ್‌ಪಿ ಪ್ರದೀಪ್ ಗುಂಟಿ (Pradeep Gunti) ಅವರಿಂದ ಕಿರುಕುಳ ಅನುಭವಿಸುತ್ತಿರುವುದಾಗಿ ಕಣ್ಣೀರು ಹಾಕಿ ಯೂಟ್ಯೂಬರ್ ಸಲ್ಮಾನ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶಾಂತಿ ಸಭೆ ಇದೆ ಎಂದು ಕಚೇರಿಗೆ ಕರೆಸಿ ಎಲ್ಲರೆದುರು ಹಲ್ಲೆಗೆ ಯತ್ನಿಸಿದ್ದು, ಇವರು ನನ್ನ ಜೀವ ತೆಗೆದುಕೊಳ್ಳತ್ತಾರೆ ಎಂದು ಫೆಸ್‌ಬುಕ್‌ ಲೈವ್‌ನಲ್ಲಿ ಇನ್ನೂ ಹಲವು ವಿಷಯಗಳನ್ನ ಪ್ರಸ್ತಾಪಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಇದನ್ನೂ ಓದಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೊರಟಿದ್ದ ಮಹಿಳೆ ನಾಪತ್ತೆ

ಯೂಟ್ಯೂಬ್‌ ಚಾನೆಲ್ ಮುಂದುವರಿಸದಂತೆ ತಾಕೀತು ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿದ್ದು, ಫೇಸ್‌ಬುಕ್‌ ಲೈವ‌ನಲ್ಲಿ ನಿದ್ರೆ ಮಾತ್ರೆಗಳನ್ನ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಏಕಕಾಲಕ್ಕೆ 12 ಮಾತ್ರೆ ನುಂಗಿದ ಯ್ಯೂಟುಬರ್ ಗೆ ಬ್ರಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share This Article