Raichur | ವಕ್ಫ್ ಆಸ್ತಿ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಆರೋಪ – ಸೈಟ್ ಮಾರಾಟ ತಡೆಯುವಂತೆ ಆಗ್ರಹ

Public TV
1 Min Read

ರಾಯಚೂರು: ನಗದರಲ್ಲಿ ವಕ್ಫ್‌ಗೆ (Waqf) ಸೇರಿದ ಕರಿಮುಲ್ಲಾ ಶಾಖಾದ್ರಿ ದರ್ಗಾದ ಆಸ್ತಿಯನ್ನ ಒತ್ತುವರಿ ಮಾಡಿ ಬಡಾವಣೆ ನಿರ್ಮಾಣ ಮಾಡಲಾಗಿದೆ ಅಂತ ಆರೋಪಿಸಿ ವಕ್ಫ್ ರಕ್ಷಣಾ ಸಂಘದಿಂದ ಪ್ರತಿಭಟನೆ ಮಾಡಲಾಯಿತು. ವಿಜಯಪುರ, ಧಾರವಾಡದ ಬಳಿಕ ಇದೀಗ ರಾಯಚೂರಿನಲ್ಲೂ ವಕ್ಫ್‌ ಆಸ್ತಿ (Waqf Property) ವಿವಾದ ಎದ್ದಿದೆ.

ದರ್ಗಾಕ್ಕೆ ಸೇರಿದೆ ಎನ್ನಲಾದ ನಗರದ ಸರ್ವೆ ನಂ.1179/1ರಲ್ಲಿನ ಒಟ್ಟು 12 ಎಕರೆ 3 ಗುಂಟೆ ವಕ್ಫ್ ಆಸ್ತಿ ಒತ್ತುವರಿ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಜಾಗ ಒತ್ತುವರಿ ಮಾಡಿ ಕೆಲವರು ಲೇಔಟ್ (Layout) ನಿರ್ಮಿಸುತ್ತಿದ್ದಾರೆ. ವಕ್ಫ್​ ಆಸ್ತಿ ಮಾರಾಟ ಮತ್ತು ಖರೀದಿಗೆ ಅವಕಾಶವಿಲ್ಲದಿದ್ದರೂ ಲೇಔಟ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಲೇಔಟ್ ನಿರ್ಮಾಣವಾಗಿದ್ದು ಸೈಟ್ ಮಾರಾಟ ತಡೆಯುವಂತೆ ಆಗ್ರಹಿಸಿದ್ದಾರೆ.

ಭೂ ಮಾಫಿಯಾದವರ ಜೊತೆ ಅಧಿಕಾರಿಗಳ ಕೈವಾಡ ಶಂಕೆ ಹಿನ್ನೆಲೆ ಸೂಕ್ತ ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ. ಆಸ್ತಿ ಉಳಿಸುವಂತೆ ಜಿಲ್ಲಾಧಿಕಾರಿಗಳಿಗೆ ವಕ್ಫ್ ರಕ್ಷಣಾ ಸಂಘ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಬ್ಬರದ ಪ್ರಚಾರ – 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಭರತ್ ಬೊಮ್ಮಾಯಿ

ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಸೇರಿದಂತೆ ಹಲವರು 1992 ರಲ್ಲಿ ಸ.ನಂ 1179/1 ರ 12 ಎಕರೆ 3 ಗುಂಟೆ ಆಸ್ತಿಯನ್ನ ಭೂ ಮಾಲೀಕರಿಂದ ಖರೀದಿಸಿದ್ದಾರೆ. ಜಮೀನುಗಳ ಭೂ ಪರಿವರ್ತನೆ ಮಾಡಿಸಿ ಲೇಔಟ್ ನಿರ್ಮಾಣ ಮಾಡಿದ್ದಾರೆ. ಈಗ ಆಸ್ತಿ ವಿವಾದ ಎದ್ದಿದೆ. ಇದನ್ನೂ ಓದಿ: ಇದು ವಿಜಯೇಂದ್ರನ ಟೀಂ – ಬಿಜೆಪಿ ವಕ್ಫ್ ತಂಡಕ್ಕೆ ಯತ್ನಾಳ್ ಬಹಿಷ್ಕಾರ

ಖಾಸಗಿಯವರ ಹೆಸರಿನಲ್ಲಿರುವ ಆಸ್ತಿಗಳ ಭೂಪರಿವರ್ತನೆ ರದ್ದಿಗೆ ಜಿಲ್ಲಾ ವಕ್ಫ ಬೋರ್ಡ್ ಅಧಿಕಾರಿ ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ಈ ಹಿಂದೆ ಮನವಿ ಮಾಡಿದ್ದರು. ಈ ಹಿನ್ನೆಲೆ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಕಲಬುರಗಿ ಪ್ರಾದೇಶಿಕ ಆಯುಕ್ತರು ರಾಯಚೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಪರಿಶೀಲನಾ ವರದಿ ಬಾಕಿಯಿದೆ. ಇದನ್ನೂ ಓದಿ: ಇದು ರಾಜ್ಯದ ಭವಿಷ್ಯ ರೂಪಿಸುವ ಉಪಚುನಾವಣೆ, ನಿಖಿಲ್ ಗೆಲ್ಲಿಸಿ ಬದಲಾವಣೆಗೆ ಮುಂದಾಗಬೇಕು: ಯದುವೀರ್ ಒಡೆಯರ್ 

Share This Article