ಶೀಘ್ರವೇ ಅಲಹಾಬಾದ್ ಹೆಸರು ಪ್ರಯಾಗ್‍ರಾಜ್ ಆಗುತ್ತೆ: ಯೋಗಿ

Public TV
1 Min Read

ಲಕ್ನೋ: ಅಲಹಾಬಾದ್ ಜಿಲ್ಲೆಯ ಹೆಸರನ್ನ ಶೀಘ್ರವೇ ಪ್ರಯಾಗ್‍ರಾಜ್ ಎಂದು ಬದಲಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಮುಂದಿನ ವರ್ಷ ನಡೆಯಲಿರುವ ಮಹಾ ಕುಂಭ ಮೇಳದ ಚರ್ಚೆಯಲ್ಲಿ ಮಾತನಾಡಿದ ಯೋಗಿ ಅವರು, ನನಗೆ ಅಖಾಡ ಪರಿಷದ್ ಮತ್ತು ಇತರೆ ಕೆಲವರು ಅಲಹಾಬಾದ್ ಜಿಲ್ಲೆಯಲ್ಲಿ ಪ್ರಯಾಗ್‍ರಾಜ್ ಎಂದು ಬದಲಿಸುವಂತೆ ಪ್ರಸ್ತಾವನೆ ನೀಡಿದ್ದಾರೆ. ರಾಜ್ಯಪಾಲರದ ರಾಮ್ ನಾಯಕ್ ಸಹ ಈ ನಿರ್ಧಾರಕ್ಕೆ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಶೀಘ್ರವೇ ಸರ್ಕಾರ ಅಲಹಾಬಾದ್ ಹೆಸರನ್ನು ಪ್ರಯಾಗ್‍ರಾಜ್ ಎಂದು ಬದಲಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಕುಂಭ ಮೇಳದ ತಯಾರಿಯ ಬಗ್ಗೆ ಮಾತನಾಡಿದ ಮುಖ್ಯ ಮಂತ್ರಿಯವರು, ಜಗತ್ತಿನ ಮೂಲೆ ಮೂಲೆಯಿಂದ ಭಕ್ತರು ಈ ಕುಂಭ ಮೇಳದಲ್ಲಿ ಭಾಗವಹಿಸಲಿದ್ದಾರೆ. ದೇಶದ 6 ಲಕ್ಷ ಹಳ್ಳಿಗಳಿಂದ ಭಕ್ತರು ಭಾಗವಹಿಸಲಿದ್ದು, ಡಿಸೆಂಬರ್ ತಿಂಗಳಿನೊಳಗೆ ಎಲ್ಲಾ ಉಳಿದ ಕೆಲಸಗಳನ್ನ ಮುಗಿಸಲಿದ್ದೇವೆ ಎಂದು ತಿಳಿಸಿದರು.

ಕುಂಭ ಮೇಳಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲು ಹಾಲಿನ ಬೂತ್ ಗಳು, ಎಟಿಎಂ ಮೆಷಿನ್‍ಗಳು, ನೀರಿನ ಟ್ಯಾಂಕರ್ ಗಳು, ಬ್ಯಾಂಕ್ ಗಳು, ಮೊಬೈಲ್ ಟವರ್‍ಗಳನ್ನ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಯಾಗ್ ಎನ್ನುವುದು ಕುಂಭಮೇಳ ನಡೆಯುವ ಪವಿತ್ರ ಪ್ರದೇಶವಾಗಿದೆ. ಇದು ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಈ ಕಾರಣಕ್ಕಾಗಿ ಅಲಹಾಬಾದ್ ಅನ್ನು `ಪ್ರಯಾಗ್‍ರಾಜ್’ ಎಂದು ನಾಮಕರಣ ಮಾಡುತ್ತಿದ್ದೇವೆ ಎಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಈಗಾಗಲೇ ಕುಂಭ ಮೇಳದ ಬ್ಯಾನ ರ್‍ಗಳಲ್ಲಿ ಅಲಹಾಬಾದ್ ಬದಲು ಪ್ರಯಾಗ್‍ರಾಜ್ ಎಂದು ಬರೆಯಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *