ಭಾರತ ಶ್ರೇಷ್ಠ ವೈವಿಧ್ಯತೆ ದೇಶ, ಎಲ್ಲರ ಬಗ್ಗೆಯೂ ಸಹಿಷ್ಣುತೆ ಹೊಂದಬೇಕು – ಅಲಹಾಬಾದ್ ಹೈಕೋರ್ಟ್

Public TV
1 Min Read

ಅಲಹಾಬಾದ್: ಮಥುರಾ ನಗರದಲ್ಲಿ ಮಾಂಸ ಮತ್ತು ಮದ್ಯ ಸಾಗಣಿಕೆ ವೇಳೆ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಮಾಂಸ ಮದ್ಯ ನಿಷೇಧದ ಹೆಸರಿನಲ್ಲಿ ಪೊಲೀಸರು ನೀಡುತ್ತಿರುವ ಕಿರುಕುಳ ತಡೆಯುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಶುತೋಷ್ ಶ್ರೀವಾಸ್ತವ ಮತ್ತು ನ್ಯಾ.ಪ್ರಿಟಿಂಕರ್ ದಿವಾಕರ್ ಅವರ ಪೀಠವು ಎಲ್ಲರ ಬಗ್ಗೆಯೂ ಸಹಿಷ್ಣುತೆ ಇರಬೇಕು ಎಂದು ಅರ್ಜಿದಾರರು ವಿರುದ್ಧ ಚಾಟಿ ಬೀಸಿ, ಅರ್ಜಿ ವಜಾ ಮಾಡಿತು.

ಮಥುರಾದಲ್ಲಿ ಮಾಂಸ ಮತ್ತು ಮೊಟ್ಟೆಗಳ ಮೇಲೆ ಸಂಪೂರ್ಣ ನಿಷೇಧವಿಲ್ಲ, ನಿರ್ಬಂಧವು ಮಥುರಾದ 22 ವಾರ್ಡ್‍ಗಳಿಗೆ ಮಾತ್ರ ಸಂಬಂಧಿಸಿದೆ, ಇತರೆ ವಾರ್ಡ್‍ಗಳಿಗೆ ಇದು ಅನ್ವಯವಾಗುವುದಿಲ್ಲ, ಭಾರತವು ದೊಡ್ಡ ವೈವಿಧ್ಯತೆಯ ದೇಶವಾಗಿದೆ ಎಲ್ಲಾ ಸಮುದಾಯಗಳು ಮತ್ತು ಪಂಗಡಗಳು ಸಹಿಷ್ಣುತೆ ಹೊಂದಬೇಕು. ಇದನ್ನೂ ಓದಿ: ಕುಪ್ವಾರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ವಶ

ಭಾರತವು ಶ್ರೇಷ್ಠ ವೈವಿಧ್ಯತೆಯ ದೇಶವಾಗಿದೆ. ಮಥುರಾ, ವೃಂದಾವನ ಪವಿತ್ರ ತೀರ್ಥಯಾತ್ರಾ ಸ್ಥಳ ಘೋಷಿಸಬಹುದು. ಘೋಷಿಸುವಲ್ಲಿ ಯಾವುದೇ ಸಾಂವಿಧಾನಿಕ ನಿಬಂಧನೆಯನ್ನು ಉಲ್ಲಂಘಿಸಲಾಗಿಲ್ಲ, ಪವಿತ್ರ ಸ್ಥಳದಲ್ಲಿ ನಿರ್ಬಂಧ ಹೇರುವುದು ಕಾನೂನು ಬಾಹಿರ ಅಲ್ಲ ಎಂದು ಹೇಳಿರುವ ಹೈಕೋರ್ಟ್ ಸರ್ಕಾರದ ಕ್ರಮ ಎತ್ತಿಹಿಡಿಯಿತು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ

22 ವಾರ್ಡ್‍ಗಳಲ್ಲಿ ನಿರ್ಬಂಧಗಳ ಕಾರಣದಿಂದಾಗಿ, ಅಧಿಸೂಚಿತ ವಾರ್ಡ್‍ಗಳಲ್ಲಿ ವಾಸಿಸುವ ಮಾಂಸಾಹಾರಿಗಳು ತಮ್ಮ ಊಟದ ಆಯ್ಕೆಯಿಂದ ಮತ್ತು ಅವರ ಜೀವನೋಪಾಯದಿಂದ ವಂಚಿತರಾಗುತ್ತಿದ್ದಾರೆ, ನಿಬರ್ಂಧವು ಸಂವಿಧಾನದ 19 (1) (ಜಿ) ಮತ್ತು 21 ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದ ಮಂಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *