7-0 ದಾಖಲೆ ಬಗ್ಗೆ ಚಿಂತೆಯಿಲ್ಲ, ಈ ಬಾರಿ ಮುರಿಯುತ್ತೇವೆ: ಅಜಂ ವಿಶ್ವಾಸ

Public TV
1 Min Read

ಅಹಮದಾಬಾದ್: ವಿಶ್ವಕಪ್ (World Cup 2023) ಇತಿಹಾಸದಲ್ಲಿ ಟೀಂ ಇಂಡಿಯಾವನ್ನು (Team India) ಪಾಕ್ (Pakistan) ತಂಡ ಸೋಲಿಸಿಲ್ಲ. ಇಲ್ಲಿಯವರೆಗೂ ಮುಖಾಮುಖಿಯಾಗಿರುವ 7 ಪಂದ್ಯಗಳ ಪೈಕಿ ಭಾರತ ತಂಡ ಎಲ್ಲಾ ಪಂದ್ಯಗಳನ್ನು ಗೆದ್ದು 7-0 ಅಂತರದಲ್ಲಿ ಮುಂದಿದೆ. ಇದರ ಹೊರತಾಗಿಯೂ ಭಾರತ ತಂಡದ ವಿರುದ್ಧ ಉತ್ತಮವಾಗಿ ಬ್ಯಾಟ್ ಬೀಸಿ ಗೆಲ್ಲುವ ವಿಶ್ವಾಸವನ್ನು ಪಾಕ್ ತಂಡದ ನಾಯಕ ಬಾಬರ್ ಅಜಂ (Babar Azam) ವ್ಯಕ್ತಪಡಿಸಿದ್ದಾರೆ. ದಾಖಲೆಗಳಿರುವುದೇ ಮುರಿಯಲು ಈ ಬಾರಿ ಆ ದಾಖಲೆಯನ್ನು ಮುರಿಯುತ್ತೇವೆ ಎಂದು ಅವರು ಹೇಳಿದ್ದಾರೆ.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕ್ ತಂಡಗಳು ಶನಿವಾರ ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಣಸಲಿವೆ. ಈ ಪಂದ್ಯದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬಾಬರ್ ಆಝಮ್ ಮಾತಾಡಿದ್ದಾರೆ. ಈ ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ನಾವು ಗಮನ ಕೊಡುವುದಿಲ್ಲ. ಮುಂದೆ ಏನು ಬರಲಿದೆ ಎಂಬುದರ ಬಗ್ಗೆ ಗಮನ ಹರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: Breaking: ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್​ಗೆ ಕ್ರಿಕೆಟ್‌ ಸೇರ್ಪಡೆ

ಈ ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಗಮನ ಕೊಡುತ್ತೇನೆ. ದಾಖಲೆಗಳು ಇರುವುದೇ ಮುರಿಯಲು, 0-7 ಈ ಹಿಂದೆ ಇದ್ದ ದಾಖಲೆಯನ್ನು ನಾವು ಮುರಿಯುತ್ತೇವೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತೇವೆಂಬ ಬಗ್ಗೆ ನಮಗೆ ವಿಶ್ವಾಸವಿದೆ ಎಂದಿದ್ದಾರೆ.

ಒಂದು ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಮುಂದೆ ಪಂದ್ಯ ಆಡುವುದು ನಮ್ಮ ಪಾಲಿಗೆ ಸುವರ್ಣಾವಕಾಶ. ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಲು ನಮಗೆ ಉತ್ತಮ ಅವಕಾಶ ಲಭಿಸಿದೆ ಎಂದು ಬಾಬರ್ ಅಜಂ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ 7-0 ಮುನ್ನಡೆಯಲ್ಲಿ ಭಾರತ – ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್