ರಫೇಲ್‌ ಬಗ್ಗೆ ಸುಳ್ಳು ಹೇಳಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕಿಸ್ತಾನ!

Public TV
3 Min Read

ಇಸ್ಲಾಮಾಬಾದ್‌: ಪದೇ ಪದೇ ಸುಳ್ಳು ಹೇಳುತ್ತಾ ಬಂದಿರುವ ಪಾಕಿಸ್ತಾನ (Pakistan) ಮತ್ತೆ ಜಗತ್ತಿನ ಮುಂದೆ ಬೆತ್ತಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡಿದ ಸುಳ್ಳು ಸುದ್ದಿಯನ್ನೇ (Fake News) ನಿಜವೆಂದು ನಂಬಿ ಪಾಕಿಸ್ತಾನ ಭಾರತದ 5 ಜೆಟ್‌ ವಿಮಾನವನ್ನು ಹೊಡೆದು ಹಾಕಿದೆ ಎಂದು ಹೇಳಿದೆ.

ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಪಾಕಿಸ್ತಾನ ಭಾರತದ 5 ಜೆಟ್‌ ವಿಮಾನಗಳನ್ನು ಹೊಡೆದು ಹಾಕಿದೆ ಎಂಬ ವಿಡಿಯೋಗಳನ್ನು ಪಾಕ್‌ ಬೆಂಬಲಿತ ವ್ಯಕ್ತಿಗಳು ಹಂಚಿಕೊಳ್ಳುತ್ತಿದ್ದಾರೆ. ಭಾರತ ಈ ಸುದ್ದಿಗಳನ್ನು ಸುಳ್ಳು ಎಂದು ಹೇಳಿದರೂ ಪಾಕ್‌ ಈ ಸುದ್ದಿ ನಿಜ ಎಂದು ವಾದಿಸುತ್ತಿದೆ. ಇದನ್ನೂ ಓದಿ: ಲಾಹೋರ್‌ನಲ್ಲಿ ಅಲ್ಲೋಲ ಕಲ್ಲೋಲ – ಮಿಲಿಟರಿ ವಿಮಾನ ನಿಲ್ದಾಣದ ಬಳಿ ಮೂರು ಸ್ಫೋಟ

 

ವಿದೇಶಿ ಮಾಧ್ಯಮದ ಜೊತೆ ಪಾಕ್‌ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಮಾತನಾಡುತ್ತಿದ್ದರು. ಈ ವೇಳೆ ಪಾಕ್‌ 5 ವಿಮಾನಗಳನ್ನು ಹೊಡೆದ ಬಗ್ಗೆ ಸಾಕ್ಷಿ ಎಲ್ಲಿದೆ ಎಂದು ಕೇಳಲಾಯಿತು. ಇದಕ್ಕೆ ಅವರು, ಭಾರತೀಯ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ನಮ್ಮ ಮಾಧ್ಯಮಗಳಲ್ಲಿ ಪ್ರಕಟವಾಗಿಲ್ಲ. ಈ ಜೆಟ್‌ಗಳ ಅವಶೇಷಗಳು ಭಾರತ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿವೆ ಎಂದು ಹೇಳಿದರು.

ನಾನು ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಬಗ್ಗೆ ಮಾತನಾಡುವುದಿಲ್ಲ. ನಾನು ನಿರ್ದಿಷ್ಟವಾಗಿ ಪುರಾವೆಗಳು, ವಿವರಗಳನ್ನು ಕೇಳುತ್ತಿದ್ದೇನೆ. ನೀವು ಆರೋಪಿಸುತ್ತಿರುವಂತೆ ಈ ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸಲು ಯಾವುದೇ ಚೀನೀ ಉಪಕರಣಗಳನ್ನು ಬಳಸಲಾಗಿದೆಯೇ ಎಂದು ಆಂಕರ್‌ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಲೂಚ್ ಹೋರಾಟಗಾರರಿಂದ  ಸೇನಾ ವಾಹನದ ಮೇಲೆ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು

ಈ ಪ್ರಶ್ನೆಗೆ ಉತ್ತರ ನೀಡದ ಅವರು, ಭಾರತ ಫ್ರಾನ್ಸ್‌ನಿಂದ ವಿಮಾನಗಳನ್ನು ಖರೀದಿಸಬಹುದಾದರೆ, ಪಾಕಿಸ್ತಾನವು ಚೀನಾದಿಂದ ಖರೀದಿಸಬಹುದು ಎಂದು ಪ್ರತಿಕ್ರಿಯಿಸಿದರು.

ನಮ್ಮಲ್ಲಿ ಚೀನಾ ಉಪಕರಣಗಳು ಇಲ್ಲ. ಆದರೆ ಚೀನಾದ ವಿಮಾನಗಳಿವೆ. ಅವುಗಳನ್ನು ಈಗ ಇಸ್ಲಾಮಾಬಾದ್‌ನಲ್ಲಿ ತಯಾರಿಸಲಾಗುತ್ತಿದೆ ಮತ್ತು ಜೋಡಿಸಲಾಗುತ್ತಿದೆ. ಭಾರತವು ಫ್ರಾನ್ಸ್‌ನಿಂದ ವಿಮಾನಗಳನ್ನು ಖರೀದಿಸಿ ಬಳಸಬಹುದಾದರೆ ನಾವು ಚೀನಾ, ರಷ್ಯಾ, ಯುಎಸ್ ಅಥವಾ ಯುಕೆಯಿಂದ ವಿಮಾನಗಳನ್ನು ಸಹ ಖರೀದಿಸಬಹುದು. ಅವರ 3 ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ಅವರು ಸುಳ್ಳು ಹೇಳಿಕೊಂಡರು.

ಜೆಟ್‌ಗಳನ್ನು ಉರುಳಿಸಲು ಚೀನಾದ ಸಲಕರಣೆಗಳನ್ನು ಬಳಸಲಾಗಿದೆಯೇ ಎಂದು ಆಂಕರ್ ಮತ್ತೆ ಅವರಿಗೆ ಮರು ಪ್ರಶ್ನೆ ಹಾಕಿದಾಗ ಡಾಗ್‌ ಫೈಟ್‌(ಎರಡು ಯುದ್ಧ ವಿಮಾನಗಳ ಕಾದಾಟ) ಮಾಡುವಾಗ ವಿಮಾನಗಳನ್ನು ಹೊಡೆದು ಹಾಕಲಾಗಿದೆ ಎಂದು ಹೇಳಿದರು.

Share This Article