ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು: ಸುನಿಲ್ ಕುಮಾರ್ ಒತ್ತಾಯ

Public TV
1 Min Read

ಬೆಂಗಳೂರು: ಎಲ್ಲಾ ಜೈನಮುನಿಗಳಿಗೂ ರಕ್ಷಣೆ ಕೊಡಬೇಕು ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ (MLA Sunil Kumar) ಒತ್ತಾಯ ಮಾಡಿದ್ದಾರೆ.

ವಿಧಾನಸಭೆಯಲ್ಲಿ (Vidhnasabha) ಜೈನಮುನಿಗಳ ಹತ್ಯೆ ವಿಚಾರ ಚರ್ಚೆಯ ವೇಳೆ ಶಾಸಕರು ಮಾತನಾಡಿ ಸರ್ಕಾರಕ್ಕೆ ಒತ್ತಡ ಹಾಕಿದ್ದಾರೆ. ಜೈನ ಮುನಿಗಳನ್ನು (Jain Monk) ನಾನು ಬಹಳ ಹತ್ತಿರದಿಂದ ನೋಡಿದವನು. ನನ್ನ ಕ್ಷೇತ್ರದಲ್ಲಿ ಗುದ್ದಲಿ ಪೂಜೆಗೆ ಒಬ್ಬರು ಮುನಿಗಳು ಬಂದಿದ್ರು. ಆ ಗುಂಡಿಯಲ್ಲಿ ಇರುವೆ ಓಡಾಡ್ತಿವೆ ಅದಕ್ಕೆ ಗುದ್ದಲಿ ಪೂಜೆ ಮಾಡಲ್ಲ ಅಂತಾ ಕೂತಿದ್ರು. ಆ ನಂತರ ಆ ಇರುವೆಗಳನ್ನು ತಾವೇ ಹೊರಗೆ ಹಾಕಿ, ಗುದ್ದಲಿ ಪೂಜೆ ಮಾಡಿದ್ರು ಎಂದು ಹೇಳಿದರು. ಇದನ್ನೂ ಓದಿ: ಜೈನ ಮುನಿ ಹತ್ಯೆ ಹಿಂದೆ ಐಸಿಸ್‌ ಚಿತಾವಣೆಯಿದೆ – ಶಾಸಕ ಸಿದ್ದು ಸವದಿ

ಯಾವ ಜೀವಕ್ಕೂ ಹಾನಿ ಮಾಡಬಾರದು ಎಂಬ ಜೈನ ಮುನಿಗಳ ಸ್ವಭಾವ. ಇಂತಹ ಜೈನ ಮುನಿಗಳನ್ನು ಇಂದು ಕೊಲೆ ಮಾಡಿದ್ದಾರೆ. ಯಾವುದೋ ಒಂದು ಕೋಮಿಗಾಗಿ ನಿಜವಾದ ತನಿಖೆ ಬಹಿರಂಗ ಮಾಡಿಲ್ಲ ಅಂದರೆ ಹೇಗೆ..?. ತಕ್ಷಣ ಸರ್ಕಾರ ಯಾವುದಕ್ಕೂ ಮಣಿಯದೇ, ಸಂಪೂರ್ಣ ತನಿಖೆ ಮಾಡಲೇಬೇಕು. ಸಿಬಿಐ ತನಿಖೆಗೆ ಮಾಡಿಸಲೇಬೇಕು. ಆರೋಪಿಗಳ ಹೆಸರು ಬಹಿರಂಗ ಪಡಿಸಬೇಕು ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್