ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

Public TV
2 Min Read

ಪಾಟ್ನಾ: ಇಲ್ಲಿನ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ದರೋಡೆಕೋರ ಚಂದನ್ ಮಿಶ್ರಾನನ್ನ (Chandan Mishra) ಗುಂಡಿಕ್ಕಿ (Firing) ಕೊಂದ್ದಿದ್ದ ಐವರು ಆರೋಪಿಗಳನ್ನು ಕೋಲ್ಕತ್ತಾದಲ್ಲಿ (Kolkata) ಪೊಲೀಸರು ಶನಿವಾರ (ಇಂದು) ಬಂಧಿಸಿದ್ದಾರೆ.

ಬಿಹಾರ ಪೊಲೀಸರು (Bihar Police) ಮತ್ತು ಪಶ್ಚಿಮ ಬಂಗಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕೋಲ್ಕತ್ತಾದ ಉಪನಗರದ ವಸತಿ ಸಂಕೀರ್ಣದಲ್ಲಿ ಬಂಧಿಸಿದ್ದಾರೆಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ‘Sher’ Will Roar | ನಿಮಿಷಕ್ಕೆ 700 ಬುಲೆಟ್‌ ಹಾರಿಸಬಲ್ಲ `AK-203′ ರೈಫಲ್‌ ಸೇನೆಗೆ!

ಆ ದಿನ ಆಸ್ಪತ್ರೆ ವಾರ್ಡ್‌ನಲ್ಲಿ ನಡೆದಿದ್ದೇನು?
ಪೆರೋಲ್ ಮೇಲೆ ಹೊರಗಿದ್ದ ದರೋಡೆಕೋರ ಚಂದನ್ ಮಿಶ್ರಾನನ್ನ ಪಾಟ್ನಾದ ಆಸ್ಪತ್ರೆಯ ಐಸಿಯುನಲ್ಲೇ ಗುಂಡು ಹಾರಿಸಿ ಐವರು ದುಷ್ಕರ್ಮಿಗಳು ಕೊಂದಿದ್ದರು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಗ್ಯಾಂಗ್‌ಸ್ಟಾರ್ ಚಂದನ್ ಮಿಶ್ರಾನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪೆರೋಲ್ ಮೇಲೆ ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

ಇದನ್ನರಿತ ಎದುರಾಳಿ ಗ್ಯಾಂಗ್‌ನವರು ಗನ್ ಸಮೇತ ಆಸ್ಪತ್ರೆಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದರು. ಚಂದನ್ ಮಿಶ್ರಾ ದೇಹಕ್ಕೆ 12 ಬುಲೆಟ್ ಹೊಕ್ಕಿದ್ದು, ಆಸ್ಪತ್ರೆಯಲ್ಲೆ ಹತನಾಗಿದ್ದ. ಫೈರಿಂಗ್ ಬಳಿಕ ದಾಳಿಕೋರರು ಎಸ್ಕೇಪ್ ಆಗಿದ್ದರು. ಪಾಟ್ನಾದಿಂದ ಪರಾರಿಯಾಗಿ ಕೋಲ್ಕತ್ತಾದ ನ್ಯೂ ಟೌನ್‌ ವಸತಿ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಬಿಹಾರ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: Uttar Pradesh | ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – 6 ಜನ ದುರ್ಮರಣ

ಈ ಮಧ್ಯೆ ಎಲ್ಲಾ ಆರೋಪಿಗಳು ಕೋಲ್ಕತ್ತಾದ ನ್ಯೂ ಟೌನ್‌ ಪ್ರದೇಶದ ವಸತಿ ಸಂಕೀರ್ಣದ ಫ್ಲಾಟ್‌ನಲ್ಲಿ ಅಡಗಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬಳಿಕ ಬಂಗಾಳ ಪೊಲೀಸರ ಸಹಾಯ ಪಡೆದು ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಪೈಕಿ ನಾಲ್ವರು ಆರೋಪಿಗಳು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಐದನೇ ಆರೋಪಿ ಅಪರಾಧದಲ್ಲಿ ಭಾಗಿಯಾಗಿದ್ದನೇ ಅಥವಾ ಕೊಲೆಗಾರರು ಅಡಗಿಕೊಳ್ಳಲು ಸಹಾಯ ಮಾಡಿದ್ದನೇ ಎಂಬುದರ ಬಗ್ಗೆ ತರನಿಖೆ ನಡೆಸಲಾಗುತ್ತಿದೆ.

ಸದ್ಯ ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಿ ಕೋಲ್ಕತ್ತಾದಿಂದ ಬಿಹಾರಕ್ಕೆ ಕರೆತರುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದನ್ನೂ ಓದಿ: ಅಪ್ರಾಪ್ತನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ – ಇಬ್ಬರು ಬಾಲಕರು ಅರೆಸ್ಟ್‌

Share This Article