ಟ್ರೆಂಡ್ ಆಯ್ತು ಅಲಿಯಾ ಕಟ್ ಕುರ್ತಾ ಸೂಟ್ ಸೆಟ್

Public TV
2 Min Read

ಫ್ಯಾಷನ್ ಲೋಕದಲ್ಲಿ ಸದ್ಯ ಸದ್ದು ಮಾಡುತ್ತಿರೋ ಡ್ರೆಸ್ ಅಂದರೆ ಅಲಿಯಾ ಕಟ್ ಸೂಟ್(Alia Cut Dress) , ಕುರ್ತಾ ಹಾಗೂ ಗೌನ್ ಸೆಟ್‌ಗಳು. ಇದು ಟ್ರೆಂಡ್ ಜೊತೆಗೆ ಹೆಚ್ಚು ಪಾಪ್ಯುಲರ್ ಕೂಡ ಹೌದು. ಅದರಲ್ಲೂ ಫ್ಲೋರಲ್ ಪ್ರಿಂಟ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಎಥ್ನಿಕ್ ಲುಕ್ ನೀಡುವ ಇವು ಈ ಸೀಸನ್‌ನ ಇಂಡಿಯನ್ ಔಟ್‌ಫಿಟ್‌ಗಳ ಟಾಪ್ ಲಿಸ್ಟ್‌ನಲ್ಲಿ ಸೇರಿವೆ.

ಎಥ್ನಿಕ್ ಲುಕ್ ನೀಡುವ ಟ್ರೆಡಿಷನಲ್ ಕುರ್ತಾ, ಸೂಟ್‌ಗಳಿವು. ವೇಸ್ಟ್‌ಸ್ಟೈಲಿಂದ ಮೇಲಿನ ಭಾಗ ಎರಡ್ಮೂರು ಕಟ್ಟಿಂಗ್ ಒಳಗೊಂಡಿರುತ್ತದೆ. ಬಟನ್ ಲೆಸ್ ಆಗಿದ್ದರೂ ಲೇಸ್ ವರ್ಕ್‌ನಿಂದ ಪ್ರತ್ಯೇಕವಾಗಿರುವಂತೆ ಕಾಣುತ್ತದೆ. ಧರಿಸಿದಾಗ ಮಂಡಿಯಿಂದ ಕೆಳಗಿನ ತನಕ ನಿಲ್ಲುತ್ತದೆ. ಕೊಂಚ ದೊಗಲೆಯಾಗಿರುತ್ತದೆ.

ಹಿಂದಿ ಸಿನಿಮಾವೊಂದರಲ್ಲಿ ನಟಿ ಆಲಿಯಾ ಭಟ್ (Aliaa) ಧರಿಸಿದ್ದ ಕುರ್ತಾವಿದು. ಆಕೆ ಧರಿಸಿದ ನಂತರ ಈ ಕುರ್ತಾ ಹೊಸ ಹೆಸರನ್ನು ಪಡೆಯುವುದರೊಂದಿಗೆ ನಾನಾ ಶೈಲಿನಲ್ಲಿ ಈ ಡ್ರೆಸ್ ಮೋಡಿ ಮಾಡುತ್ತಿದೆ. ಸಾಮಾನ್ಯ ಮಹಿಳೆಯರು ಇದಕ್ಕೆ ಅಲಿಯಾ ಕಟ್ ಕುರ್ತಾ ಅಥವಾ ಸೂಟ್ ಎಂದು ನಾಮಕರಣ ಮಾಡಿದರು. ಮೊಬೈಲ್‌ನಲ್ಲಿ ಆಕೆ ಧರಿಸಿರುವ ಈ ಕುರ್ತಾ ಇಲ್ಲವೇ ಸೂಟ್ ಫೋಟೋ ತೋರಿಸಿ ಅಂಗಡಿಗಳಲ್ಲಿ ಕೇಳುವ ಪರಿಪಾಟ ಹೆಚ್ಚಾಯ್ತು. ಮುಂದೆ ಇದೇ ಹೆಸರು ಚಾಲ್ತಿಗೆ ಬಂತು ಎನ್ನುತ್ತಾರೆ ಡಿಸೈನರ್‌ಗಳು.

ಈ ಉಡುಪು ಯಾವ ಮಟ್ಟಿಗೆ ಟ್ರೆಂಡಿಂಗ್ ಆಯಿತೆಂದರೆ, ನಾರ್ತ್ ಇಂಡಿಯಾ ಮಾತ್ರವಲ್ಲ, ದಕ್ಷಿಣ ಭಾರತದ ಮಹಿಳೆಯರು ಕೂಡ ಈ ಬಗೆಯ ಕುರ್ತಾ, ಸೂಟ್ ಇಲ್ಲವೇ ಗೌನ್ ಶೈಲಿಯವನ್ನು ಹೆಚ್ಚೆಚ್ಚು ಧರಿಸಲಾರಂಭಿಸಿದರು. ಹಾಗೆಂದು ಈ ಶೈಲಿಯ ಕುರ್ತಾ-ಸೂಟ್‌ಗಳು ಹೊಸ ಅವಿಷ್ಕಾರವೇನಲ್ಲ. ಇನ್ನು ಟ್ರೆಡಿಷನಲ್ ಲುಕ್ ಇರುವ ಈ ಉಡುಪು ಎಂತಹ ಪರ್ಸನಾಲಿಟಿಯವರಿಗೂ ಹೊಂದುತ್ತದೆ ಎನ್ನುತ್ತಾರೆ ಫ್ಯಾಷನ್ ಸ್ಟೈಲಿಸ್ಟ್‌ಗಳು.

ಟ್ರಾಪಿಕಲ್ ಪ್ರಿಂಟ್ಸ್, ಪ್ಲಾಂಟ್ಸ್, ಗಾರ್ಡನ್ ಪ್ರಿಂಟ್‌ನವು ಪ್ರಚಲಿತದಲ್ಲಿವೆ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿ ಕಾಣುವ ಲೈಟ್ ಶೇಡ್‌ನ ಫ್ಲೋರಲ್ ಪ್ರಿಂಟೆಡ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ. ಕಾಟನ್, ಕಾಟನ್ ಸಿಲ್ಕ್, ಲೆನಿನ್, ರಯಾನ್ ಫ್ಯಾಬ್ರಿಕ್‌ನವಲ್ಲೂ ಇವನ್ನು ಕಾಣಬಹುದು. ಇನ್ನು, ನಾನಾ ಪ್ರಯೋಗಾತ್ಮಕ ವಿನ್ಯಾಸದವು ಎಂಟ್ರಿ ನೀಡಿವೆ. ಆದರೆ ಮೂಲ ಡಿಸೈನ್‌ನ ಲಾಂಗ್ ಅಲಿಯಾ ಕಟ್ ಕುರ್ತಾ ಸೆಟ್ ಬೇಡಿಕೆ ಮಾತ್ರ ಮೊದಲಿಗಿಂತ ಹೆಚ್ಚಿದೆ ಎನ್ನುತ್ತಾರೆ.

ಫ್ಯಾಷನ್ ಟಿಪ್ಸ್

ಸೀಸನ್ ಶೇಡ್‌ನದ್ದನ್ನು ಆಯ್ಕೆ ಮಾಡಿ.

ಈ ಔಟ್‌ಫಿಟ್ ಎಥ್ನಿಕ್ ಲುಕ್ ನೀಡುವುದು ಗ್ಯಾರಂಟಿ.

ಈ ಉಡುಪಿಗೆ ಲೈಟ್ ಮೇಕಪ್ ಕೂಡ ಅಂದವಾಗಿ ಕಾಣುತ್ತದೆ.

ದುಪಟ್ಟಾ ಇಲ್ಲದೆಯೂ ಧರಿಸಬಹುದು.

ತೀರಾ ದೊಗಲೆಯಾಗಿರುವುದನ್ನು ಆಯ್ಕೆ ಮಾಡಬೇಡಿ.

Share This Article