ಆಲಿಯಾ ಭಟ್ ನಟನೆಯ ಮೊದಲ ಹಾಲಿವುಡ್ ಚಿತ್ರದ ಟ್ರೈಲರ್ ರಿಲೀಸ್

Public TV
1 Min Read

ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಹಾಲಿವುಡ್ ಗೆ ಹಾರಿದ್ದು ದೊಡ್ಡ ಸುದ್ದಿಯಾಗಿತ್ತು. ಮೊದಲ ಬಾರಿಗೆ ಅವರು ಹಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದನ್ನು ಸಂಭ್ರಮದಿಂದಲೇ ಆಲಿಯಾ ಹಂಚಿಕೊಂಡಿದ್ದರು. ಇದೀಗ ಆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ನಿನ್ನೆ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಆಲಿಯಾ ಹಾಜರಿದ್ದರು.

ಆಲಿಯಾ ಭಟ್ ‘ಹಾರ್ಟ್ ಆಫ್ ಸ್ಟೋನ್’ (Heart of Stone) ಹೆಸರಿನ ಹಾಲಿವುಡ್ (Hollywood) ಸಿನಿಮಾದಲ್ಲಿ ನಟಿಸಿದ್ದು, ನಿನ್ನೆ ವರ್ಣರಂಜಿತ ಸಮಾರಂಭದಲ್ಲಿ ಟ್ರೈಲರ್ ರಿಲೀಸ್ ಆಗಿದೆ. ಇದೊಂದು ಸಾಹಸ ಪ್ರಧಾನ ಸಿನಿಮಾವಾಗಿದ್ದು, ಭರ್ಜರಿ ಆಕ್ಷನ್ ದೃಶ್ಯಗಳು ಇರುವುದು ಟ್ರೈಲರ್ ನಿಂದ ಗೊತ್ತಾಗಿದೆ. ಇದನ್ನೂ ಓದಿ:ದುಬೈನಲ್ಲಿ ನಡೆಯಿತು ಡಾ.ರಾಜ್ ಕಪ್ ಟೀಮ್ ಹರಾಜು ಪ್ರಕ್ರಿಯೆ

ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಆಲಿ ಹಸಿರು ಬಣ್ಣದ ಡ್ರೆಸ್ ನಲ್ಲಿ ಬಂದಿದ್ದರು. ಮತ್ತು ಸಖತ್ ಗ್ಲಾಮರ್ ಆಗಿಯೂ ಅವರು ಕಾಣುತ್ತಿದ್ದರು. ಈ ಸಿನಿಮಾದಲ್ಲಿ ಆಲಿಯಾ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ವಿಲನ್ ರೀತಿಯ ಪಾತ್ರ ಅದಾಗಿದೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣದೇ ನೇರವಾಗಿ ನೆಟ್ ಫ್ಲಿಕ್ಸ್ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಆಗಸ್ಟ್ 11 ರಿಂದ ಈ ಸಿನಿಮಾವನ್ನು ಓಟಿಟಿಯಲ್ಲಿ ನೋಡಬಹುದಾಗಿದೆ. ಟಾಮ್ ಹಾರ್ಪರ್ (Tom Harper) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಗಾಲ್ ಗಡೋಟ್ ಪ್ರಧಾನ ಪಾತ್ರ ಮಾಡಿದ್ದಾರೆ.

Share This Article