ಆರ್‌ಆರ್‌ಆರ್‌ಗೆ ಒಂದು ದಿನಕ್ಕೆ 50 ಲಕ್ಷ ರೂ. ಸಂಭಾವನೆ ಪಡೆದ ಆಲಿಯಾ

Public TV
1 Min Read

ನವದೆಹಲಿ: ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ಹಿಟ್ ಸಿನಿಮಾಗಳ ಮೂಲಕವೇ ಫೇಮಸ್, ಅವರ ಕ್ಯೂಟ್ ಆಕ್ಟಿಂಗ್ ಬಾಲಿವುಡ್‍ನಲ್ಲಿ ಮೋಡಿ ಮಾಡಿದೆ. ಹೀಗಾಗಿ ಹೆಚ್ಚು ಹೆಚ್ಚು ಅವಕಾಶಗಳು ಬರುತ್ತಿವೆ. ಅದೇ ರೀತಿ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ‘ರೌದ್ರ ರಣ ರುಧಿರ’ ಚಿತ್ರದಲ್ಲಿ ನಟಿಸುತ್ತಿದ್ದು, ಭಾರೀ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರಂತೆ.

ಇದೇ ಮೊದಲ ಬಾರಿಗೆ ಆಲಿಯಾ ಭಟ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಜೂನಿಯರ್ ಎನ್‍ಟಿಆರ್ ಹಾಗೂ ರಾಮ್ ಚರಣ್‍ತೇಜಾ ನಟನೆಯ ಬಹುಭಾಷಾ ಸಿನಿಮಾ ರೌದ್ರ ರಣ ರುಧಿರ ಚಿತ್ರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಬೆಂಕಿ ಹಾಗೂ ನೀರಿನ ಸಂಗಮದ ಸಂಕೇತವನ್ನು ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಕನ್ನಡ, ತೆಲುಗು, ಹಿಂದಿ ಸೇರಿ ಒಟ್ಟು ಐದು ಭಾಷೆಗಳಲ್ಲಿ ಫಸ್ಟ್ ಲುಕ್ ರಿಲೀಸ್ ಅಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಫಸ್ಟ್ ಲುಕ್ ನೋಡಿದ ಪ್ರೇಕ್ಷಕರು ಆರ್‌ಆರ್‌ಆರ್ ಸಿನಿಮಾದಲ್ಲಿಯೂ ರಾಜಮೌಳಿಯವರು ಮೋಡಿ ಮಾಡುತ್ತಾರೆ ಎಂಬ ಆಶಯವನ್ನಿಟ್ಟುಕೊಂಡಿದ್ದಾರೆ. ಅದೇ ರೀತಿ ಚಿತ್ರ ತಂಡ ಸಹ ಕಾರ್ಯನಿರ್ವಹಿಸುತ್ತಿದ್ದು, ಸ್ಟಾರ್ ನಟ, ನಟಿಯರನ್ನು ಚಿತ್ರ ತಂಡಕ್ಕೆ ಸೇರಿಸಿಕೊಂಡಿದೆ. ಫಸ್ಟ್ ಲುಕ್ ಬಿಡುಗಡೆ ಮಾಡಿದ ಸಂದರ್ಭದಲ್ಲೇ ಆರ್‍ಆರ್‍ಆರ್ ವಿಸ್ತೃತ ರೂಪವನ್ನು ರಾಜಮೌಳಿ ಬಹಿರಂಗಪಡಿಸಿದ್ದರು. ಈ ಮೂಲಕ ಆರ್‌ಆರ್‌ಆರ್ ಟೈಟಲ್‍ನ ವಿಸ್ತೃತ ರೂಪದ ಕ್ಯೂರಿಯಾಸಿಟಿ ತಣಿಸಿದ್ದರು.

ಅಂದಹಾಗೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಅವರು ಆರ್‌ಆರ್‌ಆರ್ ಸಿನಿಮಾಗೆ 10 ದಿನಗಳ ಡೇಟ್ ನೀಡಿದ್ದು, ಒಟ್ಟು 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ಪ್ರತಿ ದಿನಕ್ಕೆ 50 ಲಕ್ಷ ರೂ.ಗಳನ್ನು ಆಲಿಯಾ ಪಡೆಯುತ್ತಿದ್ದಾರೆ. ನಯನತಾರಾ, ಪೂಜಾ ಹೆಗಡೆ, ಕಾಜಲ್ ಅಗರ್‍ವಾಲ್ ಸೇರಿದಂತೆ ಇತರೆ ನಟಿಯರಿಗೆ 2ರಿಂದ 3 ಕೋಟಿ ರೂ.ಸಂಭಾವನೆ ಮಾತ್ರ ನೀಡಲಾಗುತ್ತಿದೆ. ಆದರೆ ಆಲಿಯಾಗೆ ಕೇವಲ 10 ದಿನಗಳ ಚಿತ್ರೀಕರಣಕ್ಕೆ 5 ಕೋಟಿ ನೀಡಲಾಗುತ್ತಿದೆ. ಅಲಿಯಾ ಭಟ್ ಆರ್‌ಆರ್‌ಆರ್ ಸಿನಿಮಾದಲ್ಲಿ ನಟ ರಾಮ್ ಚರಣ್‍ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸೀತೆಯ ಪಾತ್ರ ನಿರ್ವಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *