ಸಿಲ್‌ಸಿಲಾ ರೇಖಾ ರೀತಿ ರೆಡಿಯಾದ ಅಲಿಯಾ ಭಟ್

Public TV
1 Min Read

70-80 ದಶಕದ ಬಾಲಿವುಡ್ ಮಿಂಚುಳ್ಳಿ ರೇಖಾ (Rekha) ಸ್ಟೈಲ್ ಐಕಾನ್ ಆಗಿದ್ದವರು. ಅವರ ನಟನೆ ಉಡುಗೆ ತೊಡುಗೆ, ಸೀರೆಯಲ್ಲೇ ಅವರು ಮಾಡುತ್ತಿದ್ದ ವಿನ್ಯಾಸ ಟ್ರೆಂಡ್ ಸೆಟ್ ಮಾಡಿತ್ತು. ಈಗಿನ ಕಾಲದ ನಟಿಯರಿಗೂ ಫ್ಯಾಶನ್ (Fashion) ಐಕಾನ್ ಆಗಿರುವವರು ರೇಖಾ. ಅದನ್ನೀಗ ‌ಗ್ಲ್ಯಾಮರ್‌ ಡಾಲ್ ಅಲಿಯಾ ಭಟ್ (Alia Bhatt) ಹೇಳಿದ್ದಾರೆ.

ರೇಖಾ ಜೀವಂತ ದಂತಕಥೆ ಎಂದಿದ್ದಾರೆ ಅಲಿಯಾ. ಅವರದ್ದೇ ಐಕಾನಿಕ್ ಸ್ಟೈಲನ್ನ ರೀಕ್ರಿಯೇಟ್ ಮಾಡಿರುವ ಅಲಿಯಾ ಈ ಮೂಲಕ ರೇಖಾಗೆ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ: Anti Drugs Day | ಡ್ರಗ್ಸ್‌ ಸೇವಿಸಿರೋದು ಸಾಬೀತಾದ್ರೆ ಸಿನಿಮಾ ರಂಗದಿಂದ ಬಹಿಷ್ಕರಿಸಿ – ನಿರ್ಮಾಪಕ ದಿಲ್‌ರಾಜ್

ಉಮ್ರಾಓ ಜಾನ್ (Umrao Jaan) ಚಿತ್ರ ಮರು ಇದೇ ಶುಕ್ರವಾರ ಬಿಡುಗಡೆಯಾಗಿದೆ. 45 ವರ್ಷಗಳ ಬಳಿಕ ರಿರಿಲೀಸ್ ಆಗುತ್ತಿರುವ ರೇಖಾ ಅಭಿನಯದ ಮ್ಯೂಸಿಕಲ್ ಹಿಟ್ ಚಿತ್ರದ ಮುಂಬೈನಲ್ಲಿ ನಡೆದ ಪ್ರೀಮಿಯರ್ ಶೋ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಆಗಮಿಸಿದ್ದರು. ಆದರೆ ಪ್ರೀಮಿಯರ್‌ಗೆ ಆಗಮಿಸಿದ್ದ ಅಲಿಯಾ ಭಟ್ ಲುಕ್ ಎಲ್ಲರ ಗಮನ ಸೆಳೆಯಿತು. ಯಾಕಂದ್ರೆ ಅಲಿಯಾ ಐಕಾನಿಕ್ ಸಿಲ್‌ಸಿಲಾ ಚಿತ್ರದಲ್ಲಿ ರೇಖಾ ಕಾಣಿಸಿಕೊಂಡಿದ್ದ ಆಕರ್ಷಕ ಸೀರೆಯ ಲುಕ್‌ನ್ನ ರೀಕ್ರಿಯೇಟ್ ಮಾಡಿದ್ದರು. ಇದನ್ನೂ ಓದಿ: ನಟ ನಾಗಾರ್ಜುನ್ ರೀತಿಯಲ್ಲೇ ಸುದೀಪ್ ವಾಪಸ್ಸು

ತಿಳಿ ಗುಲಾಬಿ ಬಣ್ಣದ ಟ್ರಾನ್ಸ್‌ಪರೆಂಟ್‌ ಸೀರೆ ಜೊತೆ ಹೈ ನೆಕ್ ಬ್ಲೌಸ್ ಧರಿಸಿ ಅಲಿಯಾ ಕಂಗೊಳಿಸಿದ್ರು. ರೇಖಾರಂತೆ ಗುಲಾಬಿ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅಲಿಯಾ ತಮಗೆ ನೀಡಿದ ಗೌರವಕ್ಕೆ ಖುದ್ದು ರೇಖಾ ಖುಷಿಯಾಗಿ ಅಲಿಯಾರನ್ನ ಅಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಮಾದಕ ಲುಕ್‌ನಲ್ಲಿ ಸಪ್ತಮಿ ಶೈನ್‌ – ಅದೆಷ್ಟು ಅಂತ ನಮ್ಮ ಎದೆಗೆ ಕೊಳ್ಳಿ ಇಡ್ತೀರಿ ಅಂದ್ರು ಪಡ್ಡೆ ಹೈಕ್ಳು

ರೇಖಾ ಲುಕ್‌ನ್ನ ರೀಕ್ರಿಯೇಟ್ ಮಾಡಿರುವ ಅಲಿಯಾ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಅದಕ್ಕವರು ರೇಖಾ ಬಗ್ಗೆ ಭಾರೀ ಗೌರವದ ಮಾತುಗಳನ್ನಾಡಿದ್ದಾರೆ. ʻನೀವು ಜೀವಂತ ದಂತಕಥೆ…ನಿಮ್ಮಂತೆ ಮತ್ತೊಬ್ಬರು ಇರಲಿಲ್ಲ..ಇಲ್ಲ ರೇ..ಮಾʼ ಎಂದಿದ್ದಾರೆ ಅಲಿಯಾ.

Share This Article