ರಣ್‌ವೀರ್ ಜೊತೆ ಕಾಶ್ಮೀರದಲ್ಲಿ ಸುತ್ತಾಡಿದ ಆಲಿಯಾ ಭಟ್

Public TV
1 Min Read

`ಬ್ರಹ್ಮಾಸ್ತ್ರʼ (Bramastra Film) ನಟಿ ಆಲಿಯಾ ಭಟ್ (Alia Bhatt) ಅವರು ಮುದ್ದು ಮಗಳು ರಾಹಾ ಆರೈಕೆಯಲ್ಲಿ ಬ್ಯುಸಿಯಾಗಿದ್ದರು. ಚಿತ್ರೀಕರಣದಿಂದ ದೂರವಿದ್ದರು. ಇದೀಗ ಕಾಶ್ಮೀರದಲ್ಲಿ ರಣ್‌ವೀರ್ ಸಿಂಗ್ (Ranveer Singh) ಜೊತೆ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಕಾಶ್ಮೀರದ ಸುಂದರ ತಾಣದಲ್ಲಿ ರಣ್‌ವೀರ್ ಜೊತೆ ಆಲಿಯಾ ಸುತ್ತಾಡುತ್ತಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

`ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗಾಗಿ ಆಲಿಯಾ ಭಟ್ ಕಾಶ್ಮೀರಕ್ಕೆ ಬಂದಿದ್ದಾರೆ. ರಣ್‌ಬೀರ್ ಕಪೂರ್ (Ranbir Kapoor) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ, ಮದುವೆಯಾಗಿ ಎರಡೇ ತಿಂಗಳಿಗೆ ತಾವು ಪ್ರೆಗ್ನೆಂಟ್ ಆಗಿರುವ ವಿಚಾರವನ್ನ ನಟಿ ತಿಳಿಸಿದ್ದರು. ಹಾಗಾಗಿ ಆಲಿಯಾ ಚಿತ್ರದ ಶೂಟಿಂಗ್‌ಗೆ ಬ್ರೇಕ್ ಬಿದ್ದಿತ್ತು. ಸಿನಿಮಾ ಚಿತ್ರೀಕರಣ ಮುಗಿದಿತ್ತು. ಆದರೆ ಚಿತ್ರದ ಸಾಂಗ್ಸ್ ಬಾಕಿಯಿತ್ತು. ಅದಕ್ಕಾಗಿ ಈಗ ಕಾಶ್ಮೀರಗೆ ಆಲಿಯಾ ಬಂದಿದ್ದಾರೆ.

 

View this post on Instagram

 

A post shared by Instant Bollywood (@instantbollywood)

ಗುಲ್‌ಮರ್ಗ್‌ನಲ್ಲಿ ಕೆಂಪು ಬಣ್ಣದ ಬಟ್ಟೆ ಧರಿಸಿ ಆಲಿಯಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಲಿಯಾ ಭಟ್ ಅವರು ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಕರಣ್ ಜೋಹರ್ ಅವರು ಕಾಶ್ಮೀರದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ತಾವು ಕಾಶ್ಮೀರದಲ್ಲಿ ಶೂಟ್ ಮಾಡುತ್ತಿದ್ದೇವೆ ಎಂಬುದನ್ನು ತಿಳಿಸಿದ್ದರು. ಇದನ್ನೂ ಓದಿ:ಮದುವೆಯ ಬಳಿಕ ಮ್ಯಾಂಗೋ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

`ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಹಲವು ಕಾರಣದಿಂದ ವಿಶೇಷ ಎನಿಸಿಕೊಂಡಿದೆ. ಕರಣ್ ಜೋಹರ್ ಅವರು ನಿರ್ದೇಶನಕ್ಕೆ ಕಂಬ್ಯಾಕ್ ಮಾಡುತ್ತಿರುವ ಸಿನಿಮಾ. ‘ಬ್ರಹ್ಮಾಸ್ತ್ರ’ ಯಶಸ್ಸಿನ ನಂತರ ಆಲಿಯಾ ಭಟ್ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹೀಗಾಗಿ, ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಇನ್ನು, ರಣವೀರ್ ಸಿಂಗ್ ವೃತ್ತಿ ಜೀವನಕ್ಕೆ ಈ ಚಿತ್ರದಿಂದ ಒಂದು ದೊಡ್ಡ ಗೆಲುವು ಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *