ಇರಾನ್‌ ವಾರ್‌ ಟೈಂ ಕಮಾಂಡರ್‌ ಹತ್ಯೆ – ಖಮೇನಿ ಹತ್ಯೆ ಬಳಿಕವಷ್ಟೇ ಯುದ್ಧಕ್ಕೆ ವಿರಾಮ ಎಂದ ಇಸ್ರೇಲ್‌

Public TV
1 Min Read

ಟೆಲ್‌ ಅವಿವ್‌: 4 ದಿನಗಳ ಹಿಂದಷ್ಟೇ ಇರಾನ್ (Iran) ವಾರ್‌ಟೈಮ್ ಕಮಾಂಡರ್ ಆಗಿ ಸಾರಥ್ಯ ಪಡೆದಿದ್ದ ಮೇಜರ್ ಜನರಲ್ ಅಲಿ ಶದ್ಮಾನಿಯನ್ನು (Shadmani) ಹೊಡೆದಿರುವುದಾಗಿ ಇಸ್ರೇಲ್ (Isreal) ಹೇಳಿದೆ. ಆದರೆ ಖಮೇನಿ (Ali Khamenei) ಹತ್ಯೆ ಬಳಿಕವಷ್ಟೇ ಯುದ್ಧಕ್ಕೆ ವಿರಾಮ ಇಡಲಾಗುವುದು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು (Benjamin Netanyahu) ಗುಡುಗಿದ್ದಾರೆ.

ಖಮೇನಿ ಪರಮಾಪ್ತ ಇರಾನ್ ಎಮರ್ಜೆನ್ಸಿ ಮಿಲಿಟರಿ ಕಾರ್ಯಾಚರಣೆಯ ಕೇಂದ್ರ ಕಚೇರಿ ಖತಂ-ಅಲ್ ಅನ್ಬಿಯಾ ಕಟ್ಟಡದ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್‌ ಮಾಡಿದ್ದಾಗ ಅಲಿ ಶದ್ಮಾನಿ ಬಲಿಯಾಗಿದ್ದಾರೆ ಎನ್ನಲಾಗಿದೆ. 4 ದಿನಗಳ ಹಿಂದಷ್ಟೇ ಬಲಿಯಾದ ಮೇಜರ್ ಜನರಲ್ ಘೋಲಂ ಅಲಿ ರಶೀದ್ ಬಳಿಕ ಶದ್ಮಾನಿ ಅಧಿಕಾರ ತೆಗೆದುಕೊಂಡಿದ್ದರು. ಇದನ್ನೂ ಓದಿ: ಇರಾನ್‌ ಜನ ತಕ್ಷಣವೇ ಟೆಹ್ರಾನ್‌ ಖಾಲಿ ಮಾಡಿ: ಟ್ರಂಪ್‌ ಸೂಚನೆ

 

ಇಸ್ರೇಲ್‌ನ ಮೊದಲ ಟಾರ್ಗೆಟ್ ಇರಾನ್ ಟೆಹ್ರಾನ್ ನಗರ. ಈಗಾಗಲೇ ಅನಿಲ ಸಂಗ್ರಹ ಘಟಕವನ್ನು ಇಸ್ರೇಲ್ ಧ್ವಂಸಗೊಳಿಸಿದ್ದು, 2ನೇ ಟಾರ್ಗೆಟ್ ಇರಾನ್ ಪರಮೋಚ್ಚ ನಾಯಕ ಖಮೇನಿ ಆಗಿದೆ.

ಇಸ್ರೇಲ್ ರಣಭೀಕರ ದಾಳಿಗೆ ಬೆದರಿ ಹೋದ ಖಮೇನಿ ಬಂಕರ್‌ನಲ್ಲಿ ಅವಿತುಕೊಂಡಿದ್ದಾರೆ. ಆದರೆ ಇರಾಕ್‌ನ ಸದ್ಧಾಂ ಹುಸೇನ್ ರೀತಿ ಹೊಡೆದು ಹಾಕುವುದಾಗಿ ಇಸ್ರೇಲ್ ಶಪಥ ಮಾಡಿದೆ.

Share This Article