ಹಾಸನ: ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದ ಕಾರಣ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾದ ಘಟನೆ ಮುತ್ತಿಗೆ ಗೇಟ್ ಬಳಿ ನಡೆದಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು
ಜಿಲ್ಲೆಯ ಅರಕಲಗೂಡು ತಾಲೂಕಿನ ಮುತ್ತಿಗೆ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ಕಾರು ಚಾಲನೆ ಮಾಡುತ್ತಿದ್ದ ಬಾಬು ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತ ನಂತರ ಸ್ಥಳಕ್ಕೆ ಬಂದ ಪೊಲೀಸರ ವಿರುದ್ಧ ಅನವಶ್ಯಕವಾಗಿ ಹರಿಹಾಯ್ದಿರುವ ಚಾಲಕ ಬಾಬು, ಪೊಲೀಸರ ಎದುರು ಕೂಗಾಡುತ್ತಾ ನಾನು ರಕ್ಷಣಾ ವೇದಿಕೆಯ ಕಾರ್ಯಕರ್ತ ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾನೆ.
ಪೊಲೀಸರ ಎದುರೇ ಬಟ್ಟೆ ಹರಿದುಕೊಂಡು ಹೈಡ್ರಾಮಾ ಮಾಡಿರುವ ಬಾಬು ವಿರುದ್ಧ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮತ್ತು ಅಪಘಾತ ಪ್ರಕರಣವನ್ನು ದಾಖಲು ಮಾಡಲಾಗಿದೆ.ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ನೀನು ಹುಟ್ಟಿದ್ಮೇಲೆ ಸೌಂದರ್ಯ ಹಾಳಾಯ್ತು – ಚಪ್ಪಲಿಯಿಂದ ಮಗುವಿನ ಮೇಲೆ ತಾಯಿ ಹಲ್ಲೆ