ಕನ್ನಡಿಗನ ಕಥೆಯಲ್ಲಿ ಅಕ್ಷಯ್ ಕುಮಾರ್- ‘ಸರ್ಫಿರಾ’ ಟ್ರೈಲರ್ ಔಟ್

Public TV
1 Min Read

ಚಿತ್ರರಂಗದಲ್ಲಿ ಇದೀಗ ಬಯೋಪಿಕ್‌ಗಳ ಹಾವಳಿ ಜೋರಾಗಿದೆ. ಸ್ಟಾರ್ ಕಲಾವಿದರ ಕಥೆ, ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಜೀವನ ಚರಿತ್ರೆ ಸೇರಿದಂತೆ ಹಲವು ಸಿನಿಮಾ ಕಥೆಗಳು ಬಂದು ಹೋಗಿವೆ. ಕನ್ನಡಿಗನ ಯಶೋಗಾಥೆಯನ್ನು ಬಾಲಿವುಡ್‌ನಲ್ಲಿ ತೋರಿಸಲು ಮುಂದಾಗಿದ್ದಾರೆ. ‘ಸರ್ಫಿರಾ’ (Sarfira Film) ಎಂಬ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡುತ್ತಿದೆ.

ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಸಾಹಸಗಾಥೆಯನ್ನು ಬೆಳ್ಳಿಪರದೆಯಲ್ಲಿ ತೋರಿಸಲು ಹೊರಟಿದ್ದಾರೆ. ಈ ಹಿಂದೆ ತಮಿಳಿನಲ್ಲಿ ‘ಸೂರರೈ ಪೋಟ್ರು’ ಮೂಲಕ ಜಿ.ಆರ್ ಗೋಪಿನಾಥ್ ಯಶೋಗಾಥೆಯನ್ನು ತೋರಿಸಲಾಗಿತ್ತು. ಈಗ ಬಾಲಿವುಡ್‌ನಲ್ಲಿ ಮತ್ತೆ ಪ್ರಯತ್ನ ಮುಂದುವರೆದಿದೆ. ಇದನ್ನೂ ಓದಿ:ಹೆಸರು ಬದಲಿಸಿಕೊಂಡ ಅಣ್ಣಾವ್ರ ಮೊಮ್ಮಗ ಧೀರೇನ್


ಅತ್ಯಂತ ಕಡಿಮೆ ವೆಚ್ಚದಲ್ಲಿ ಸಾಮಾನ್ಯ ಜನರಿಗೆ ವಿಮಾನ ಸೇವೆ ಒದಗಿಸಬೇಕು ಎನ್ನುವ ಒಬ್ಬ ಯುವಕನ ಕನಸಿನ ಕಥೆಯ ಸುತ್ತ ಸಿನಿಮಾ ಸುತ್ತುತ್ತದೆ. ಈ ಹಾದಿಯಲ್ಲಿ ಆತನ ಏಳು ಬೀಳುಗಳಿಗೆ ದೃಶ್ಯ ರೂಪ ಸಿಕ್ಕಿದೆ. ಸಿನಿಮಾದಲ್ಲಿ ಜಿ.ಆರ್ ಗೋಪಿನಾಥ್  ಆಗಿ ಅಕ್ಷಯ್‌ ಕುಮಾರ್‌ (Akshay Kumar) ಜೀವತುಂಬಿದ್ದಾರೆ. ಇನ್ನು ತಮಿಳು ನಟ ಸೂರ್ಯ (Suriya) ಕೂಡ ‘ಸರ್ಫಿರಾ’ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಪರೇಶ್ ರಾವಲ್, ರಾಧಿಕಾ ಮದನ್, ಸೀಮಾ ಬಿಸ್ವಾಸ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ‘ಸೂರರೈ ಪೋಟ್ರು’ ಸಿನಿಮಾದಂತೆಯೇ ಸರ್ಫಿರಾ ಅದ್ಧೂರಿಯಾಗಿ ಮೂಡಿ ಬಂದಿದೆ. ತಮಿಳು ನಟ ಸೂರ್ಯ ಮಾಡಿದ್ದ ಪಾತ್ರಕ್ಕೆ ಅಕ್ಷಯ್ ಕುಮಾರ್ ನ್ಯಾಯ ಸಲ್ಲಿಸುವ ಸುಳಿವು ಸಿಕ್ಕಿದೆ. ‘ಸರ್ಫಿರಾ’ ಟ್ರೈಲರ್ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾವನ್ನು ಕೂಡ ಸುಧಾ ಕೊಂಗರಾ ನಿರ್ದೇಶನ ಮಾಡಿದ್ದು, ಇದೇ ಜುಲೈ 12ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

Share This Article