ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ

Public TV
1 Min Read

ಸಿನಿಮಾ ತಾರೆಯರು ಕೇವಲ ರೀಲ್‌ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿ ಮಾಡಿದ ಕಾರ್ಯಗಳು ಸಮಾಜಕ್ಕೆ ಮಾದರಿಗಳಾದ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಬಾಲಿವುಡ್ ನಟ ಅಕ್ಷಯ್‌ಕುಮಾರ್ (Akshay Kumar) ಕೂಡಾ ಮಹತ್ವದ ಕೆಲಸ ಮಾಡಿದ್ದಾರೆ. ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿ ಅವರ ಈ ಮಹತ್ತರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ನಟ ಅಕ್ಷಯ್‌ಕುಮಾರ್, 650-700 ಜನ ಸ್ಟಂಟ್ ಮಾಸ್ಟರ್‌ಗಳಿಗೆ ಲೈಫ್ ಇನ್ಶುರೆನ್ಸ್, ಹೆಲ್ತ್ ಇನ್ಶುರೆನ್ಸ್ ಮಾಡಿಸಿಕೊಟ್ಟಿದ್ದಾರೆ.

ಸಿನಿಮಾದ (Cinema) ಸಾಹಸ ದೃಶ್ಯಗಳನ್ನ ಮಾಡುವಾಗ ಸಾಕಷ್ಟು ಏಟುಗಳನ್ನ ಮಾಡಿಕೊಳ್ಳುತ್ತಾರೆ. ಕೆಲವೊಂದು ಬಾರಿ ಜೀವಕ್ಕೆ ಕುತ್ತು ಬರುವಂತಹ ರಿಸ್ಕಿ ದೃಶ್ಯಗಳಲ್ಲಿ ಸಾಹಸ ನಿರ್ದೇಶಕರು, ಸ್ಟಂಟ್ (Stunt) ಕೆಲಸದಲ್ಲಿ ತೊಡಗಿದವರು ಭಾಗಿಯಾಗುವಂತಹ ಸನ್ನಿವೇಶಗಳು ಎದುರಾಗುತ್ತವೆ. ಕೆಲದಿನಗಳ ಹಿಂದಷ್ಟೇ ತಮಿಳು ಸಿನಿಮಾದ ಚಿತ್ರೀಕರಣದ ವೇಳೆ ಮೋಹನ್ ರಾಜ್ ಎನ್ನುವ ಹಿರಿಯ ಸ್ಟಂಟ್‌ಮ್ಯಾನ್ ಮೃತಪಟ್ಟಿದ್ದರು. ಆ ವೇಳೆ ಚಿತ್ರತಂಡಕ್ಕೆ ಸಂಕಷ್ಟ ಕೂಡಾ ಎದುರಾಗಿತ್ತು. ಇದನ್ನೂ ಓದಿ: ಸುಪ್ರೀಂ ಟೆನ್ಶನ್‌ ನಡ್ವೆಯೂ ʻಡೆವಿಲ್ʼ ಸಂಭ್ರಮಕ್ಕೆ ಸಜ್ಜಾದ ಡಿಬಾಸ್‌ ಫ್ಯಾನ್ಸ್

ಸ್ಟಂಟ್ ಮಾಸ್ಟರ್ ಮೋಹನ್ ರಾಜ್ (Mohan Raj) ನಿಧನದ ಘಟನೆ ಬಳಿಕ ಇದೀಗ ಬಾಲಿವುಡ್ ನಟ ಅಕ್ಷಯ್‌ಕುಮಾರ್ ಲಕ್ಷಾಂತರ ರೂಪಾಯಿ ಖರ್ಚು ಮಾಡಿ 650 ಮಂದಿಗೆ ಜೀವ ವಿಮೆ ಮಾಡಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಅವಘಡ ನಡೆಯುತ್ತವೆ ಈ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ಪಡೆಯಲು ಸಹಾಯಕವಾಗಲಿ ಎನ್ನುವ ದೂರದೃಷ್ಟಿಯಿಂದ ಈ ಮಹತ್ತರ ಕಾರ್ಯ ಮಾಡಿದ್ದಾರೆ. ಇದನ್ನೂ ಓದಿ: ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

ಹಿರಿಯ ಸ್ಟಂಟ್‌ಮ್ಯಾನ್ ಹಾಗೂ ಸ್ಟಂಟ್‌ಮ್ಯಾನ್ ಅಸೋಸಿಯೇಷನ್ ಮುಖಂಡ ವಿಕ್ರಮ್ ಸಿಂಗ್ ದಹಿಯಾ ಅವರು ನಟ ಅಕ್ಷಯ್‌ಕುಮಾರ್ ಸಹಾಯವನ್ನ ಕೊಂಡಾಡಿದ್ದಾರೆ. ಸ್ವತಃ ತಾವೇ ಆ್ಯಕ್ಷನ್ ನಟರಾದ ಅಕ್ಷಯ್‌ಕುಮಾರ್ ಆ ದೃಶ್ಯಗಳನ್ನ ಕಣ್ಣಾರೆ ಕಂಡವರು ಹೀಗಾಗಿ 650 ಸ್ಟಂಟ್‌ಮ್ಯಾನ್‌ಗಳಿಗೆ ವಿಮೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಮತ್ತೊಬ್ಬರಿಗೂ ಮಾದರಿಯಾಗಿದ್ದಾರೆ ಎಂದಿದ್ದಾರೆ.

Share This Article