ಅಕ್ಷಯ್‌ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ಜಾಲಿ ಎಲ್‌ಎಲ್‌ಬಿ-3 (Jolly LLB-3) ಸಿನಿಮಾ ಇದೇ ಸೆಪ್ಟಂಬರ್‌ನಲ್ಲಿ ತೆರೆ ಕಾಣಲು ತಯಾರಿಯನ್ನ ನಡೆಸಿದೆ. ಸದ್ಯ ಅಕ್ಷಯ್‌ಕುಮಾರ್ ಕಣ್ಣಪ್ಪ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೌಸ್‌ಫುಲ್-5 (Housefull 5) ಸಿನಿಮಾದ ಸಕ್ಸಸ್‌ನ ಹ್ಯಾಂಗೋವರ್‌ನಲ್ಲಿ ತೇಲಾಡುತ್ತಿರುವ ಅಕ್ಷಯ್ ಕುಮಾರ್ (Akshay Kumar) ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾ ಜಾಲಿ ಎಲ್‌ಎಲ್‌ಬಿ-3 ಬಗ್ಗೆ ಮಾತ್ನಾಡಿದ್ಧಾರೆ.
ಅಕ್ಷಯ್‌ಕುಮಾರ್ ಅಭಿನಯದ ಸ್ಕೈ ಫೋರ್ಸ್, ಕೇಸರಿ-2 ಹಾಗೂ ಹೌಸ್‌ಫುಲ್-5 ಸಿನಿಮಾಗಳು ಈ ವರ್ಷ ತೆರೆಕಂಡು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿವೆ. ಕಣ್ಣಪ್ಪ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸಂದರ್ಶನದ ವೇಳೆ ಜಾಲಿ ಎಲ್‌ಎಲ್‌ಬಿ ಪಾರ್ಟ್-3 ಬಗೆಗಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಜಾಲಿ ಎಲ್‌ಎಲ್‌ಬಿ ಪಾರ್ಟ್-1, ಪಾರ್ಟ್-2 ಸಿನಿಮಾಗಳಂತೆ ಪಾರ್ಟ್-3 ಕೂಡಾ ನೈಜ ಘಟನೆಯಾಧಾರಿತ ಸಿನಿಮಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ
ಜೊತೆಗೆ ಜಾಲಿ ಎಲ್‌ಎಲ್‌ಬಿ-1, ಪಾರ್ಟ್-2 ಸಿನಿಮಾದಲ್ಲಿ ಅರ್ಷದ್ ವಾರ್ಸಿ ಜೊತೆಗೆ ಕೆಲಸ ಮಾಡಿರುವ ಬಗ್ಗೆ ಮಾತಾಡಿದ್ದಾರೆ. ಇದೀಗ ಪಾರ್ಟ್-3 ಸಿನಿಮಾದಲ್ಲೂ ಅರ್ಷದ್ ಜೊತೆ ಕೆಲಸ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಪಾರ್ಟ್-3 ಸಿನಿಮಾದಲ್ಲಿ ಅಕ್ಷಯ್‌ಕುಮಾರ್ ಜೊತೆ ಅರ್ಷದ್ ವಾರ್ಸಿ, ಅಮೃತಾ ರಾವ್, ಹುಮಾ ಖುರೇಶಿ, ಸೌರಭ್ ಶುಕ್ಲಾ, ಅನ್ನು ಕಪೂರ್ ಸೇರಿದಂತೆ ಅತೀ ದೊಡ ತಾರಾಗಣ ಈ ಚಿತ್ರದಲ್ಲಿರಲಿದೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ
ಹೌಸ್‌ಫುಲ್-5 200 ಕೋಟಿ ರೂ. ಕ್ಲಬ್ ಸೇರಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಕಣ್ಣಪ್ಪ ಸಿನಿಮಾ ತೆರೆಗೆ ಸಿದ್ದವಾಗುತ್ತಿದೆ. ಇನ್ನೆರಡು ತಿಂಗಳು ಕಳೆದರೆ ಜಾಲಿ ಎಲ್‌ಎಲ್‌ಬಿ-3 ಸಿನಿಮಾ ಕೂಡಾ ತೆರೆಗೆ ಬರಲಿದೆ. ಈ ವರ್ಷದಲ್ಲಿ ಅಕ್ಷಯ್‌ಕುಮಾರ್ ನಟನೆಯ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಥಿಯೇಟರ್‌ಗೆ ಎಂಟ್ರಿಕೊಡುತ್ತಿವೆ.