ರಜನಿಕಾಂತ್ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ

By
2 Min Read

ಲೈವಾ ನಟಿಸಿರುವ ‘ಕೂಲಿ’ (Coolie) ಸಿನಿಮಾ ಟೀಸರ್ ರಿಲೀಸ್ ಆಗಿ ಮಿಲಿಯನ್‌ಗಟ್ಟಲೇ ವೀಕ್ಷಣೆ ಪಡೆದಿದೆ. ರಜನಿಕಾಂತ್ (Rajanikanth) ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಿರುವಾಗ ಚಿತ್ರದ ಬಗ್ಗೆ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಈ ಚಿತ್ರದಲ್ಲಿ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಎಂಟ್ರಿ ಕೊಡಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ ಸಿನಿಮಾಗಳನ್ನು ನಾಗಾರ್ಜುನ ಒಪ್ಪಿಕೊಳ್ತಿದ್ದಾರೆ. ರಣ್‌ಬೀರ್ ಕಪೂರ್ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾಗಾರ್ಜುನ (Akkineni Nagarjuna) ನಟಿಸಿ ಬಂದಿದ್ದರು. ಧನುಷ್ ಮತ್ತು ರಶ್ಮಿಕಾ ನಟನೆಯ ‘ಕುಬೇರ’ ಚಿತ್ರದಲ್ಲಿಯೂ ನಟಿಸಿದ್ದಾರೆ. ಈ ಬೆನ್ನಲ್ಲೇ ತಲೈವಾ ಸಿನಿಮಾದಲ್ಲಿ ನಟಿಸಲು ಕೂಡ ಓಕೆ ಎಂದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ದೇಶದ ಮೊದಲ ಎಐ ಆ್ಯನಿಮೇಟೆಡ್ `ಬ್ಯಾಡ್ ಬಾಯ್ಸ್’ ವಿಡಿಯೋ ಸಾಂಗ್ ರಿಲೀಸ್

‘ಕೂಲಿ’ ಸಿನಿಮಾದಲ್ಲಿ ನಾಗಾರ್ಜುನ ಪಾತ್ರ ಉತ್ತಮವಾಗಿಯಂತೆ. ಆ ಪಾತ್ರಕ್ಕೆ ಸೂಕ್ತ ಎಂದೆನಿಸಿ ಡೈರೆಕ್ಟರ್ ಲೋಕೇಶ್ ಕನಗರಾಜ್ ಅವರನ್ನು ಸಂಪರ್ಕಿಸಿದ್ದಾರೆ. ನಟನಾಗಲಿ ಅಥವಾ ಚಿತ್ರತಂಡವಾಗಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲಿಯವರೆಗೂ ಕಾದುನೋಡಬೇಕಿದೆ.

ಅಂದಹಾಗೆ, ರಜನಿಕಾಂತ್ ‘ಕೂಲಿ’ ಚಿತ್ರದ ಟೀಸರ್‌ನಲ್ಲಿ ಕೂಲಿಂಗ್ ಗ್ಲ್ಯಾಸ್ ಧರಿಸಿ ತಲೈವಾ ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ.

ಟೀಸರ್ ಬ್ಲ್ಯಾಕ್ & ವೈಟ್ ಥೀಮ್‌ನಲ್ಲಿ ಮೂಡಿ ಬಂದಿದೆ. ಆದರೆ ಇದರಲ್ಲಿ ಇರುವ ಬಂಗಾರದ ವಸ್ತುಗಳನ್ನು ಮಾತ್ರ ಹೈಲೆಟ್ ಮಾಡಿ ತೋರಿಸಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕುರಿತ ಸಿನಿಮಾ ಎಂಬುದರ ಸುಳಿವನ್ನು ಚಿತ್ರತಂಡ ನೀಡಿದೆ.

ಗೋಲ್ಡ್ ಬಿಸ್ಕೆಟ್, ಗೋಲ್ಡ್ ವಾಚ್ ಜೊತೆಗೆ ಚಿನ್ನದ ರಾಶಿಯೇ ಇರುವ ಜಾಗಕ್ಕೆ ರಜನಿಕಾಂತ್ ಎಂಟ್ರಿ ನೀಡುತ್ತಾರೆ. ಅಲ್ಲಿರುವ ಖದೀಮರಿಗೆ ಗೋಲ್ಡ್ ವಾಚ್‌ಗಳಿಂದ ಮಾಡಿದ ಚೈನ್‌ನಿಂದಲೇ ಬೆಂಡೆತ್ತಿದ್ದಾರೆ. ಈ ರೀತಿಯ ಆ್ಯಕ್ಷನ್ ದೃಶ್ಯದ ಮೂಲಕ ಅವರ ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಟೀಸರ್ ಮೂಲಕ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಅಭಿಮಾನಿಗಳ ಕೌತುಕ ಕೆರಳಿಸುವಲ್ಲಿ ಗೆದ್ದಿದ್ದಾರೆ.

‘ಜೈಲರ್’ ಸಿನಿಮಾದ ಸಕ್ಸಸ್‌ನಿಂದ ರಜನಿಕಾಂತ್ ಗೆದ್ದು ಬೀಗಿದ್ದರು. ಆದರೆ ಲಾಲ್ ಸಲಾಮ್‌ನಿಂದ ತಲೈವಾಗೆ ಸೋಲಿನ ಕಹಿ ಸಿಕ್ಕಿತ್ತು. ಈಗ ‘ಕೂಲಿ’ ಸಿನಿಮಾದ ಟೀಸರ್‌ನಿಂದ ಫ್ಯಾನ್ಸ್‌ಗೆ ಚಿತ್ರದ ಮೇಲೆ ಭರವಸೆ ಮೂಡಿದೆ.

Share This Article