ಎಸ್‌ಐಆರ್‌ ಆಟ ಪ.ಬಂಗಾಳ, ತ.ನಾಡು, ಉ.ಪ್ರದೇಶದಲ್ಲಿ ನಡೆಯಲ್ಲ: ಬಿಹಾರ ರಿಸಲ್ಟ್‌ ಬಗ್ಗೆ ಅಖಿಲೇಶ್‌ ರಿಯಾಕ್ಷನ್‌

Public TV
2 Min Read

– ಬಹುಮತದತ್ತ ಎನ್‌ಡಿಎ; ಬಿಜೆಪಿ ವಂಚನೆಯ ಪಕ್ಷ ಎಂದ ಅಖಿಲೇಶ್‌ ಯಾದವ್‌

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಎನ್‌ಡಿಎ ಬಹುಮತದ ಸನಿಹದಲ್ಲಿದೆ. ಫಲಿತಾಂಶ ಕುರಿತು ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ (Akhilesh Yadav) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣಾ ಆಯೋಗ ನಡೆಸಿದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಗ್ಗೆ ಅಖಿಲೇಶ್‌ ವಾಗ್ದಾಳಿ ನಡೆಸಿದ್ದಾರೆ. ಈ ಎಸ್‌ಐಆರ್‌ ಆಟ ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶದಲ್ಲಿ ನಡೆಯುವುದಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಮಹಾಘಟಬಂಧನ್ ಉಡೀಸ್ ಮಾಡಲು ಪಕ್ಕಾ ಪ್ಲ್ಯಾನ್- ಕಮಲ ಗೆಲುವಿನ ಹಿಂದಿದೆ ಕ್ಯಾಂಪೇನ್ ಕಮಾಲ್

ಬಿಹಾರ ಫಲಿತಾಂಶ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಬಿಹಾರದಲ್ಲಿ ಎಸ್‌ಐಆರ್ ಆಡಿದ ಆಟ ಇನ್ಮುಂದೆ ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ ಅಥವಾ ಬೇರೆಡೆ ನಡೆಯಲ್ಲ. ಏಕೆಂದರೆ ಈ ಚುನಾವಣಾ ಪಿತೂರಿ ಈಗ ಬಹಿರಂಗಗೊಂಡಿದೆ ಎಂದು ಎನ್‌ಡಿಎಗೆ ತಿರುಗೇಟು ನೀಡಿದ್ದಾರೆ.

ಇನ್ಮುಂದೆ ಈ ಆಟ ಆಡಲು ಬಿಜೆಪಿಯವರಿಗೆ ನಾವು ಬಿಡುವುದಿಲ್ಲ. ನಾವು ಜಾಗರೂಕರಾಗಿ ಬಿಜೆಪಿಯ ಯೋಜನೆಗಳನ್ನು ವಿಫಲಗೊಳಿಸುತ್ತೇವೆ. ಬಿಜೆಪಿ ಪಕ್ಷವಲ್ಲ, ಬದಲಿಗೆ ಅದು ವಂಚನೆಯ ಪಕ್ಷ ಎಂದು ಯಾದವ್ ವಾಗ್ದಾಳಿ ನಡೆಸಿದ್ದಾರೆ.

ಫಲಿತಾಂಶದಲ್ಲಿ ಎನ್‌ಡಿಎ 200, ಮಹಾಘಟಬಂಧನ್‌ 37, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಎರಡು ಹಂತದಲ್ಲಿ 243 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಇದನ್ನೂ ಓದಿ: ಚುನಾವಣಾ ಚಾಣಕ್ಯ ಅಮಿತ್‌ ಶಾ ಭವಿಷ್ಯ ಮತ್ತೆ ನಿಜವಾಯ್ತು

Share This Article